ಉಡುಪಿ ಕ್ಷೇತ್ರದಲ್ಲಿ ಎರಡು ಹಂತದ ಚುನಾವಣೆ
Team Udayavani, Apr 11, 2019, 3:00 AM IST
ಉಡುಪಿ: ಎರಡು ಹಂತಗಳ ಮತದಾನ ನಡೆಯುತ್ತಿರುವ ರಾಜ್ಯದ ಏಕೈಕ ಜಿಲ್ಲೆಯಾಗಿ ಉಡುಪಿ ಗುರುತಿಸಿಕೊಂಡಿದೆ. ಚುನಾವಣೆಗೆ ಅಗತ್ಯವಿರುವ ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಇತರ ಜಿಲ್ಲೆಗಳಲ್ಲೂ ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋದದ್ದು ಇದೆ. ಆದರೆ ಎರಡು ಹಂತಗಳ ಮತದಾನ ನಡೆಯುತ್ತಿರುವುದು ಉಡುಪಿಯಲ್ಲಿ ಮಾತ್ರ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಚುನಾವಣೆ ಏ.18ರಂದು ನಡೆದರೆ, ಬೈಂದೂರು ಕ್ಷೇತ್ರವನ್ನು ಒಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಏ. 23ರಂದು ನಡೆಯಲಿದೆ. 2014ರ ಲೋಕಸಭಾ ಚುನಾವಣೆ ಉಡುಪಿ ಜಿಲ್ಲೆಯಲ್ಲಿ ಒಂದೇ ಹಂತದಲ್ಲಿ ನಡೆದಿತ್ತು.
ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ, ಶಿವಮೊಗ್ಗ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿದ್ದಾರೆ. ಆದರೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ಬೇಕಾದ ಮತಯಂತ್ರ, ವಿವಿಪ್ಯಾಟ್, ಸಿಬ್ಬಂದಿ, ವಾಹನದ ವ್ಯವಸ್ಥೆ, ಪೊಲೀಸ್ ಭದ್ರತೆ ಸೇರಿ ಎಲ್ಲ ಜವಾಬ್ದಾರಿ ಉಡುಪಿ ಜಿಲ್ಲಾಡಳಿತದ ಮೇಲಿದೆ.
ಪ್ರಚಾರಕ್ಕೆ ಬೇಕಾದ ಅನುಮತಿಯನ್ನು ಬೈಂದೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಿಂದ ಪಡೆದುಕೊಂಡರೆ, ಹೆಲಿಕಾಪ್ಟರ್, ಸ್ಟಾರ್ ಪ್ರಚಾರಕ್ಕೆ ಉಡುಪಿ ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕಾಗಿದೆ.
ಉಡುಪಿ ಜಿಲ್ಲೆಯು ಈ ಬಾರಿ ಲೋಕಸಭಾ ಚುನಾವಣೆಯನ್ನು 2 ಹಂತದಲ್ಲಿ ಎದುರಿಸಲಿದೆ. ಈ ನಿಟ್ಟಿನಲ್ಲಿ ಸ್ವೀಪ್ ಕಾರ್ಯಕ್ರಮಗಳು ಏ. 22ರ ವರೆಗೂ ಮುಂದುವರೆಯಲಿದೆ. ಬೈಂದೂರು ಕ್ಷೇತ್ರಕ್ಕೆ ಬೇಕಾದ ವಿವಿಧ ಪರಿಕರ ರಚನೆಯನ್ನು ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿ ತಯಾರಿಸಲಾಗಿದೆ. ಈ ಎರಡೂ ಹಂತಗಳಲ್ಲಿ ಮತದಾರರಿಗೆ ಮಾಹಿತಿ ನೀಡಲಾಗುತ್ತಿದೆ.
-ಸಿಂಧೂ ಬಿ.ರೂಪೇಶ್, ಅಧ್ಯಕ್ಷರು, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿ.ಪಂ. ಸಿಇಒ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು