“ಶೈಕ್ಷಣಿಕ ಕ್ರಾಂತಿಯಿಂದ ಇಹಪರ ಸಾಧನೆ’
Team Udayavani, Apr 11, 2019, 6:00 AM IST
ಪೇರೋಡ್ ಉಸ್ತಾದ್ ಅಬ್ದುಲ್ ರಹಿಮಾನ್ ಸಖಾಫಿ ಮಾತನಾಡಿದರು.
ಉಪ್ಪಿನಂಗಡಿ: ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಜಾಗೃತಿ ಮೂಡಿಸಿ, ಎಲ್ಲರನ್ನೂ ಸುಶಿಕ್ಷಿತರನ್ನಾಗಿಸುವ ಮೂಲಕ ನಾವು ಇಹಪರದಲ್ಲೂ ಸಾಧನೆ ಮಾಡಲು ಸಾಧ್ಯ ಎಂದು ಹೆಸರಾಂತ ವಾಗ್ಮಿ ಪೇರೋಡ್ ಉಸ್ತಾದ್ ಅಬ್ದುಲ್ ರಹಿಮಾನ್ ಸಖಾಫಿ ಹೇಳಿದರು.
ಅವರು ಎ. 8ರಂದು ತೆಕ್ಕಾರು ಗ್ರಾಮದ ಸರಳಿಕಟ್ಟೆಯಲ್ಲಿ 13 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾ ಸಂಸ್ಥೆ ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ 13ನೇ ವಾರ್ಷಿಕ ಹಾಗೂ ಹಿಫ್ ಸನದುದಾನ ಮಹಾ ಸಮ್ಮೇಳನದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಸಮುದಾಯದಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಅನಾಥ, ನಿರ್ಗತಿಕರಾಗಿ, ಅಸಹಾಯಕ ಸ್ಥಿತಿಯಲ್ಲಿ ಇರುವ ಕುಟುಂಬಗಳನ್ನು, ಶಿಕ್ಷಣ ವಂಚಿತರಾಗಿರುವವರನ್ನು ಗುರುತಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡುವ ಮೂಲಕ ಶೆಕ್ಷಣಿಕ ಜಾಗೃತಿ ಮೂಡಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದ ಅವರು ಮೂಡಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ ಈ ವಿಚಾರದಲ್ಲಿ ಮಾದರಿ ಆಗಿದೆ ಎಂದರು.
ಎಲ್ಲರೂ ಆದರಿಸುವ ಮುತ್ತು
ಮೂಡಡ್ಕ ಶರೀಅತ್ ಕಾಲೇಜಿನ ಪ್ರಾಂಶುಪಾಲ ಎಂ.ಎ. ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿ.ಎಚ್. ಉಸ್ತಾದ್ ಸಮಾಜಕ್ಕೆ ನೀಡಿರುವ ಕೊಡುಗೆ ಅಪೂರ್ವವಾಗಿದ್ದು, ಅವರು ಸಮುದಾಯದ ಸೊತ್ತು ಮತ್ತು ಎಲ್ಲರೂ ಆದರಿಸುವ ಮುತ್ತು ಆಗಿದ್ದರು. ಅವರು ಸ್ಥಾಪಿಸಿದ ಅವರ ಕನಸಿನ ಈ ಕೂಸು ಇಂದು ಸಮುದಾಯಕ್ಕೆ ಮತ್ತು ಸಮುದಾಯದಲ್ಲಿರುವ ಬಡವರ ಪಾಲಿಗೆ ನೆರಳಾಗಿ ನಿಂತಿದೆ ಎಂದರು.
ಮೂಡಡ್ಕ ಅಲ್ ಮದೀನತುಲ್ ಮುನವ್ವರ ಇದರ ಜನರಲ್ ಮೆನೇಜರ್ ಕೆ.ಎ. ಅಶ್ರಫ್ ಸಖಾಫಿ ಮಾಡಾವು ಮಾತನಾಡಿ, ಸಮಾಜದ ಉನ್ನತಿಯಲ್ಲಿ ಉಲಮಾಗಳ ಪಾತ್ರ ಅತ್ಯಂತ ಪ್ರಾಮುಖ್ಯ ಪಡೆಯುತ್ತಿದ್ದು, ಉಲೆಮಾ, ವಿದ್ವಾಂಸರೂ ಆಗಿದ್ದ ಟಿ.ಎಚ್. ಉಸ್ತಾದ್‌ರ ಸಾರಥ್ಯದಲ್ಲಿ 2006ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ, ಇಂದು ಅನಾಥ, ನಿರ್ಗತಿಕ ಮಂದಿರ, ಹಿಫ್ಲುಲ್ ಕುರ್‌ಆನ್ ಕಾಲೇಜು, ಮಹಿಳಾ ಶರೀಅತ್ ಕಾಲೇಜು, ಶರೀಅತ್ ಕಾಲೇಜು, ದಹ್‌ವಾ ಕಾಲೇಜು, ಅಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆ, ಅಲ್ ಮುನವ್ವರ ಹೋಂ ಕೇರ್, ಅಲ್ ಮುನವ್ವರ ಕಂಪ್ಯೂಟರ್ ಸೆಂಟರ್, ಉಚಿತ ವಸತಿ ನಿಲಯ ವ್ಯವಸ್ಥೆಯನ್ನು ಹೊಂದಿ ಬಹಳ ವಿಸ್ತಾರವಾಗಿ ಬೆಳೆದಿದ್ದು, ಇದರ ಬೆಳವಣಿಗೆಯ ಹಿಂದೆ ಇರುವ ದಾನಿಗಳಿಗೆ ನಾವು ಆಭಾರಿ ಆಗಿದ್ದೇವೆ ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಅಸ್ಸಯ್ಯದ್ ಇಸ್ಮಾಯಿಲ್ ಅಲ್‌ಹಾದಿ ಮದನಿ ತಂšಳ್ ಉಜಿರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ದಾನ ಅತ್ಯಂತ ಪವಿತ್ರವಾಗಿದ್ದು, ಅಲ್ಲಾಹನ ಸಂಪ್ರೀತಿ ಪಡೆಯಲು ಇದು ರಹದಾರಿ. ಕಲಿತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಗಳಿಸುವಂತಾಗಲಿ ಎಂದರು.
ಇಬ್ರಾಹಿಂ ಹಂಝ ತಂಳ್ ಪಾಟ್ರಕೋಡಿ, ಹೈದರ್ ಮದನಿ ಕರಾಯ, ಹಾಫಿಲ್ ಅಬ್ದುಲ್ ಖಾದಿರ್ ಸಖಾಫಿ, ಹಾಫಿಲ್ ಇಲ್ಯಾಸ್ ಸಖಾಫಿ ಮಾಡನ್ನೂರು, ಕಾಸರಗೋಡು ಪಿ.ಎಂ. ಗ್ರೂಪ್ ಸಂಸ್ಥೆಯ ಅಬ್ದುಲ್ ನಾಸಿರ್ ವಳ್ಳಂಗೋಡು, ಮೂಡಡ್ಕ ಅಲ್ ಮದೀನತುಲ್ ಮುನವ್ವರ ಸಂಸ್ಥೆಯ ಉಪಾಧ್ಯಕ್ಷ ಉಸ್ಮಾನ್ ಸರಳಿಕಟ್ಟೆ, ಸಂಚಾಲಕ ಟಿ.ಎಚ್. ಅತಾವುಲ್ಲಾ, ಸದಸ್ಯ ಮಜೀದ್ ಎಂ.ಎಂ., ಮಸೀದಿ ಮುದರ್ರಿಸ್ ಅಬ್ಟಾಸ್ ಸಹದಿ ಸರಳಿಕಟ್ಟೆ, ಮಹಮೂದ್ ಫೈಝಿ ವಾಲೆಮುಂಡೋವು, ಅಬೂಬಕ್ಕರ್ ಮದನಿ ಬೇನಪ್ಪು, ದರ್ಗಾ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್, ದುಬೈ ಪ್ರತಿನಿಧಿ ಟಿ.ಕೆ. ಖಾಸಿಂ ಮದನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶರೀಅತ್ ಕಾಲೇಜಿನ ಸಹ ಮುದರ್ರಿಸ್ ಅಬ್ದುಲ್ ಅಜೀಜ್ ನಈಮಿ ಸ್ವಾಗತಿಸಿ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಂ. ಅಬ್ದುಲ್ ಹಕೀಂ ಸರಳಿಕಟ್ಟೆ ವಂದಿಸಿದರು. ಅಮಜದಿ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.