ಬೆಂಗಳೂರಲ್ಲಿ ವಿಷ್ಣು ಸ್ಮಾರಕ ನಿರ್ಮಾಣ: ಸಿಎಂ
Team Udayavani, Apr 11, 2019, 3:00 AM IST
ಶ್ರೀರಂಗಪಟ್ಟಣ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬುಧವಾರ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ನಂತರ ಗೋಪೂಜೆ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಪ್ರಚಾರದ ವೇಳೆ ಅವರಿಗೆ ಬೃಹತ್ ಗಾತ್ರದ ಹೂವಿನ ಹಾರ, ಒಣದ್ರಾಕ್ಷಿ ಹಾರ, ಸೇಬಿನ ಹಾರಗಳನ್ನು ಹಾಕಿ, ಅಭಿಮಾನಿಗಳು ಅಭಿಮಾನ ಮೆರೆದರು. ತಾಲೂಕಿನ ಪಾಲಹಳ್ಳಿ ಮತ್ತು ಬೆಳಗೊಳದಲ್ಲಿ ಎತ್ತಿನಗಾಡಿ ಹಾಗೂ ಕುದುರೆ ಸವಾರಿ ಮಾಡುವ ಮೂಲಕ ಅವರನ್ನು ಸ್ವಾಗತಿಸಲಾಯಿತು. ಕುಮಾರಸ್ವಾಮಿಯವರ ಪ್ರಚಾರದ ವೈಖರಿ ಹೀಗಿತ್ತು:
– ನಮ್ಮ ಕುಟುಂಬ ಸಂಪೂರ್ಣವಾಗಿ ರೈತರ ಪರ ಇದ್ದು, ನಿಮ್ಮ ಕುಟುಂಬದ ಮಕ್ಕಳಾಗಿ ನಿಮ್ಮ ಸೇವೆ ಮಾಡುತ್ತಿದ್ದೇವೆ.
– ಮಂಡ್ಯಕ್ಕೆ ಹೆಚ್ಚು ಅನುದಾನ ನೀಡಿದ್ದಕ್ಕೆ ಬಿಜೆಪಿಯವರು ರಾಜ್ಯ ಸರ್ಕಾರದ ಬಜೆಟ್‌ನ್ನು ಮಂಡ್ಯ ಬಜೆಟ್ ಎಂದು ಟೀಕಿಸಿದ್ದಾರೆ. ನಾನು ಮಂಡ್ಯ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿರುವುದು ತಪ್ಪೆ?.
– ನಾನು ನನ್ನ ಕೊನೆಯ ಉಸಿರಿರುವವರೆಗೂ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ನಮ್ಮ ಎದುರಾಳಿ ಸುಮಲತಾಗೆ ಬಿಜೆಪಿಯವರು ಬೆಂಬಲ ನೀಡಿದ್ದಾರೆ.
– ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ ಯಾವುದೇ ಕುಟುಂಬವನ್ನು ಒಕ್ಕಲೆಬ್ಬಿಸಿ ಹೊರಗೆ ಕಳುಹಿಸುವ ಪ್ರಶ್ನೆಯೇ ಇಲ್ಲ. ಈ ಯೋಜನೆಯಿಂದ 50 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ.
– ವಿಷ್ಣು ಅಭಿಮಾನಿಗಳ ಇಚ್ಛೆಯಂತೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಕೆಲಸ ಮಾಡುತ್ತೇನೆ. ಚುನಾವಣೆ ಮುಗಿದ ಬಳಿಕ ಅಂತಿಮ ನಿರ್ಧಾರ ಮಾಡಿ, ಸ್ಮಾರಕ ನಿರ್ಮಾಣ ಕಾಮಗಾರಿಗೆ ಚುರುಕು ನೀಡುತ್ತೇನೆ. ವಿಷ್ಣು ಅಭಿಮಾನಿಗಳು ತಮ್ಮ ಮನಸ್ಸಿನಲ್ಲಿ ನೋವಿದ್ದರೂ ನನಗೆ ಬೆಂಬಲ ಕೊಡುವುದಕ್ಕೆ ಬಂದಿದ್ದೀರಿ. ಆದರೆ, ನಾನು ಯಾರಿಂದ ಗೌರವ ನಿರೀಕ್ಷೆ ಮಾಡಿದ್ಧೇನೋ ಅವರೆಲ್ಲಾ ಈಗ ಏನೇನು ಮಾಡುತ್ತಿದ್ದಾರೆ ಅನ್ನೋದನ್ನು ನೀವೆಲ್ಲರೂ ನೋಡುತ್ತಿದ್ದೀರಿ.
– ಬ್ಯಾಂಕ್ ಸಾಲದ ಬಗ್ಗೆ ನೋಟಿಸ್ ಬಂದರೆ ಹೆದರಬೇಡಿ. ಅನಾಹುತ ಮಾಡಿಕೊಳ್ಳದೆ ನನ್ನ ಬಳಿ ಬನ್ನಿ. ಸಾಲ ತೀರಿಸಲು ನಾನಿದ್ದೇನೆ.
– ಮಂಡ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸೋಕೆ ವಿರೋಧಿಗಳು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.