ಚುನಾವಣೆ: ಕೆಲವು ಫಲಕ ಹಾಗೇ; ಕೆಲವಕ್ಕೆ ಕಿರಿಕ್!
Team Udayavani, Apr 11, 2019, 6:00 AM IST
2018ರ ಚುನಾವಣೆ ವೇಳೆ ಹಾಕಿದ ಪ್ರಚಾರ ಫಲಕ.
ಉಡುಪಿ: ಚುನಾವಣೆ ಸಮೀಪಿಸುವಾಗ ಚುನಾವಣಾ ಆಯೋಗ ರಾಯಭಾರಿಗಳ ಚಿತ್ರಗಳನ್ನು ಹಾಕಿ ಮತದಾನ ಜಾಗೃತಿ ರೂಪಿಸುತ್ತದೆ. ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ ತಿರುಗುವ ಮಾರ್ಗದಲ್ಲಿರುವ ಈ ಫಲಕ ಇನ್ನೂ 2018ರ ಚುನಾವಣೆಯಲ್ಲಿಯೇ ಇದೆ.
ಚುನಾವಣೆ ನಡೆಯುವ ಸಂದರ್ಭ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಡಳಿತ ಪೂರ್ವ ತಯಾರಿಯಲ್ಲಿ ರುತ್ತದೆ.ನೀತಿಸಂಹಿತೆ ಜಾರಿ ಬಂದ ಕ್ಷಣಾರ್ಧದಲ್ಲಿಯೇ ಎಲ್ಲ ರಾಜಕೀಯ ಪಕ್ಷಗಳ ಬೋರ್ಡ್‌ಗಳನ್ನು ತೆಗೆದು ಚುನಾವಣಾ ಇಲಾಖೆ ಕಾರ್ಯಪ್ರವೃತ್ತರಾದರೂ ರಾಹುಲ್ ದ್ರಾವಿಡ್ ಚಿತ್ರ ಹೊತ್ತ ಈ ಫಲಕ ಇನ್ನೂ ಹಾಗೇ ಇದೆ. ವಿಧಾನಸಭಾ ಚುನಾವಣೆ ಬಳಿಕ ವಿಧಾನ ಪರಿಷತ್, ನಗರಸಭೆ ಚುನಾವಣೆ ನಡೆದು ಈಗ 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕೆಲವರು ಈ ಬಗ್ಗೆ ದೂರವಾಣಿ ಮೂಲಕ ತಿಳಿಸಿ ತಿಂಗಳು ಕಳೆದರೂ ಫಲಕದಲ್ಲೇನೂ ಬದಲಾವಣೆ ಕಂಡುಬರಲಿಲ್ಲ.
ಅಧಿಕಾರಿಗಳು ಕಾರುಗಳಿಗೆ ಹಾಕಿದ ಸ್ಟಿಕ್ಕರ್‌ತೆಗೆಯುತ್ತಿದ್ದಾರೆ. ಜನರ ಕಣ್ಣಿಗೆ ಢಾಳಾಗಿ ಕಾಣುವ ಈ ಫಲಕ ಮಾತ್ರ ಹಾಗೇ ತೋರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.