ರೈತ ಮಹಿಳೆಯರಿಗೆ ವಿವಿ ಪ್ಯಾಟ್ ಪಾಠ
Team Udayavani, Apr 11, 2019, 3:00 AM IST
ಬೆಂಗಳೂರು: ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಗೊಂಡಿರುವ ಮತದಾರರಿಗೆ ಮತ್ತು ಬೆಂಗಳೂರು ಪಕ್ಕದ ಹಳ್ಳಿಯ ವಯೋವೃದ್ಧರಿಗೆ, ರೈತ ಮಹಿಳೆಯರಿಗೆ ಇವಿಎಂ ಮೂಲಕ ಮತದಾನ ಮತ್ತು ವಿ.ವಿ.ಪ್ಯಾಟ್ ಮತ ಖಾತ್ರಿ ಬಗ್ಗೆ ಅಷ್ಟೊಂದು ತಿಳುವಳಿಕೆಯಿಲ್ಲ. ಅಂತವರಿಗೆ ಇವಿಎಂ ಮತ್ತು ವಿ.ವಿ.ಪ್ಯಾಟ್ ಮಾಸ್ಟರ್ ಟ್ರೆ„ನರ್‌ಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕು ಎಂದು ಪಣ ತೊಟ್ಟಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಹೆಜ್ಜೆಯಿರಿಸಿದೆ. ಜೊತೆಗೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಗಾರ್ಮೆಂಟ್ ಉದ್ಯೋಗಿಗಳು ಮತ್ತು ಐಟಿಬಿಟಿ ನೌಕರರು ನೆಲೆಸಿದ್ದು, ಅವರನ್ನು ಮತಗಟ್ಟೆ ಕೇಂದ್ರದತ್ತ ಸೆಳೆಯುವ ಕೆಲಸ ಸಾಗಿದೆ.
ಸ್ವೀಪ್ ಸಮಿತಿ ಜತೆಗೂಡಿರುವ ಬೆಂಗಳೂರು ನಗರ ಜಿಲ್ಲಾಡಳಿತ ಜನರಲ್ಲಿ ಅರಿವು ಮೂಡಿಸುವಂತ ಹಲವು ಯೋಜನೆ ರೂಪಿಸಿದ್ದು, ಅದರಲ್ಲಿ ಮನೆ ಮನೆಗೆ ತೆರಳಿ ಓಟ್ ಮಾಡುವ ಬಗ್ಗೆ ತಿಳುವಳಿಕೆ ನೀಡುವುದು ಸೇರಿದೆ. ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಮತದಾರರಿಗೆ ಮತ ಶಿಕ್ಷಣದ ಬಗ್ಗೆ ತಿಳಿ ಹೇಳುವ ಕೆಲಸ ಈಗಾಗಲೇ ಪೂರ್ಣ ಗೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಗಣಿಯಲ್ಲಿ ಅಣಕು ಜಾಗೃತಿ: ಅಧಿಕ ಸಂಖ್ಯೆಯಲ್ಲಿ ಕೈಗಾರಿಕಾ ಪ್ರದೇಶಗಳು ನೆಲೆಯೂರಿರುವ ಅನೇಕಲ್‌ನಲ್ಲೂ ಮತದಾನ ಹೆಚ್ಚಳ ಸಂಬಂಧ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಣಕು ಮತದಾನದ ಮೂಲಕ ಎಂ.ಟಿ.ಆರ್ ಫುಡ್ ಪ್ರ„ವೇಟ್ ಲಿಮಿಟೆಡ್ ಸಂಸ್ಥೆ ಉದ್ಯೋಗಿಗಳಿಗೆ ಓಟ್ ಮಾಡುವ ವಿಧಾನದ ಬಗ್ಗೆ ಅರಿವಿನ ಬೀಜ ಬಿತ್ತುತ್ತಿದ್ದಾರೆ.
ವಿಶೇಷ ಅಂದರೆ ಹಲವು ನೌಕರರು ಅಣಕು ಮತದಾನ ಮಾಡುವ ಮೂಲಕ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಜಿಗಣಿ ಕೈಗಾರಿಕಾ ಪ್ರದೇಶದಲ್ಲಿನ ಟೊಯೋಟ ಇಂಡಸ್ಟ್ರೀಸ್ ಇಂಜಿನ್ ಪ್ರ„ವೇಟ್ ಲಿಮಿಟೆಡ್‌ನ ನೌಕರರಿಗೆ ಹಾಗೂ ಯಶವಂತಪುರದ ಶಾಹಿ ಎಕ್ಸ್ ಪೋರ್ಟ್ಸ್ ಸಿದ್ಧ ಉಡುಪು ಕೈಗಾರಿಕೆಯಲ್ಲಿನ ಉದ್ಯೋಗಿಗಳಿಗೆ ಓಟ್ ಮಾಡುವ ವಿಧಾನದ ಬಗ್ಗೆ ಇದ್ದ ಗೊಂದಲವನ್ನು ನಿವಾರಣೆ ಮಾಡಲಾಯಿತು.
ಕೊಡತಿ ಗ್ರಾಮದಲ್ಲಿ ಕಲಿಕೆ: ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯ್ತಿ ವ್ಯಾಪ್ತಿಗೆ ಬರುವ ಕೊಡತಿ ಗ್ರಾಮ ಪಂಚಾಯ್ತಿಯಲ್ಲಿ ಸ್ವೀಪ್ ಸಮಿತಿಯ ಹಿರಿಯ ಅಧಿಕಾರಿಗಳು, ಬೆಂಗಳೂರು ತಾಂತ್ರಿಕ ಸಂಸ್ಥೆ ಕಾಲೇಜಿನ ವಿದ್ಯಾರ್ಥಿಗಳಿಗೆ ಇ.ವಿ.ಎಂ ಮತ್ತು ವಿ.ವಿ.ಪ್ಯಾಟ್‌ಗಳ ಪ್ರಾತ್ಯಕ್ಷಿಕೆ ಹಾಗೂ ಅಣಕು ಮತದಾನದ ಮೂಲಕ ಮತದಾನ ಪಾಠ ಹೇಳಿ ಕೊಟ್ಟಿದ್ದಾರೆ.
ವಿವಿ ಪ್ಯಾಟ್ ಮತ ಯಂತ್ರದ ಬಗ್ಗೆ ವಿದ್ಯಾರ್ಥಿಗಳು ಅಧಿಕಾರಿಗಳಿಂದ ಸ್ಥಳದಲ್ಲೇ ಮಾಹಿತಿ ಪಡೆದರು. ಜತೆಗೆ ಅಣಕು ಮತದಾನದಲ್ಲಿ ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಮತ ಚಲಾಯಿಸಿ ಖುಷಿ ಪಟ್ಟರು.
ಗಾಡಿಪಾಳ್ಯ ಗ್ರಾಮಸ್ಥರಿಗೆ ತಿಳಿವಳಿಕೆ: ವಿವಿ ಪ್ಯಾಟ್ ಮತ ಯಂತ್ರದ ಬಗ್ಗೆ ರೈತ ಮಹಿಳೆಯರಿಗೆ ಅಷ್ಟೊಂದು ತಿಳುವಳಿಕೆಯಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ರೈತ ಮಹಿಳೆಯರಿಗೆ ತಿಳಿವಳಿಕೆ ನೀಡಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಡಿಪಾಳ್ಯ ಗ್ರಾಮದಲ್ಲಿ ಮಾಸ್ಟರ್ ಟ್ರೈನರ್‌ಗಳು ವಿವಿ ಪ್ಯಾಟ್ ಬಗ್ಗೆ ರೈತ ಮಹಿಳೆಯರಿಗೆ ತಿಳಿವಳಿಕೆ ನೀಡಿದರು. ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಯಿತು.
ಮತದಾನದ ಹೆಚ್ಚಳದ ಸಂಬಂಧ ಬೆಂಗಳೂರು ನಗರ ಜಿಲ್ಲಾಡಳಿತ ಹಲವು ಯೋಜನೆಗಳನ್ನು ರೂಪಿಸಿದೆ. ಯುವ ಮತದಾರರನ್ನು ಮತ ಕೇಂದ್ರದತ್ತ ಕರೆತರುವ ಸಂಬಂಧ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
-ಎಂ.ಎಸ್.ಅರ್ಚನಾ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಿಇಒ
* ದೇವೇಶ್ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.