ತೋಟಗಾರಿಕೆ ಬೆಳೆಗೂ ಬಂತು ಕುತ್ತು
1,794 ಹೆಕ್ಟೇರ್ ಲಿಂಬೆ ಹಾನಿ ದುಡ್ಡು ಕೊಟ್ಟು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತರು
Team Udayavani, Apr 11, 2019, 10:35 AM IST
ಇಂಡಿ: ಹಿರೇರೂಗಿ ಗ್ರಾಮದಲ್ಲಿ ಲಿಂಬೆ ಬೆಳೆ ಒಣಗಿರುವುದು.
ಇಂಡಿ: ತಾಲೂಕಿನಾದ್ಯಂತ ಭೀಕರ ಬರಗಾಲ ಆವರಿಸಿದ್ದು ಬಿರು ಬಿಸಿಲಿಗೆ ತೋಟಗಾರಿಕೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ತೋಟಕಾರಿಕೆ ಬೆಳೆ ಬೆಳೆಯುವ ರೈತರಿಗೆ ನೀರಿಲ್ಲದೆ ಇರುವುದರಿಂದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ.
ತಾಲೂಕಿನಾದ್ಯಂತ ಒಟ್ಟು 5,418 ಹೆಕ್ಟರ್ ಲಿಂಬೆ, 1,784 ಹೆಕ್ಟೇರ್ ದ್ರಾಕ್ಷಿ, 2,294 ದಾಳಿಂಬೆ, 230 ಹೆಕ್ಟೇರ್ ಬಾಳೆ, 250 ಹೆಕ್ಟೇರ್ ಬಾರೆ, 200 ಹೆಕ್ಟೇರ್
ಹೂ, 147 ಹೆಕ್ಟೇರ್ ಹಣ್ಣಿನ ಗಿಡಗಳು ಸೇರಿ ಒಟ್ಟು 14,874 ಹೆಕ್ಟೇರ್ ತೋಟಗಾರಿಕೆ ಕ್ಷೇತ್ರವಿದೆ. ದೇಶದಲ್ಲಿಯೇ ಲಿಂಬೆ ಬೆಳೆಗೆ ಪ್ರಸಿದ್ಧವಾದ ಇಂಡಿ
ತಾಲೂಕಿನಲ್ಲಿ ಪ್ರತಿ ಬಾರಿಯೂ ಬೇಸಿಗೆಯಲ್ಲಿ ನೀರಿನ ಅಭಾವದಿಂದ ನೂರಾರು ಎಕರೆ ಪ್ರದೇಶದಲ್ಲಿ ಲಿಂಬೆ ಬೆಳೆ ಒಣಗಿ ಲಿಂಬೆ ಕ್ಷೇತ್ರ ಕ್ಷೀಣಿಸುತ್ತ ಹೋಗುತ್ತಿದೆ.
ಪ್ರಸಕ್ತ ವರ್ಷ 5,418 ಹೆಕ್ಟೇರ್ ಪ್ರದೇಶದಲ್ಲಿ ಇದ್ದ ಲಿಂಬೆ ಬೆಳೆ 1,794 ಹೆಕ್ಟೇರ್ ಹಾನಿಗೀಡಾಗಿ ಒಟ್ಟು 3,624 ಹೆಕ್ಟೇರ್ ಪ್ರದೇಶ ಮಾತ್ರ ಲಿಂಬೆ ಬೆಳೆ ಉಳಿದುಕೊಂಡಿದ್ದು ಇನ್ನೂ ನೀರಿನ ಅಭಾವದಿಂದ ಸಾಕಷ್ಟು ಹೆಕ್ಟೇರ್ ಕಡಿಮೆಯಾಗುವ ಸಾಧ್ಯತೆ ಇದೆ. ಇನ್ನು ದಾಳಿಂಬೆ ಬೆಳೆಯೂ ನೀರಿನ ಕೊರತೆಯಿಂದ 50 ಹೆಕ್ಟೇರ್ ಹಾನಿಯಾಗಿದೆ ಎಂದು ಇಲಾಖಾ
ವರದಿಯಿಂದ ತಿಳಿದು ಬಂದಿದೆ.
ಟ್ಯಾಂಕರ್ ನೀರು: ಇನ್ನು ಲಿಂಬೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಬೇಸಿಗೆ ಪ್ರಾರಂಭವಾಗಿದ್ದರಿಂದ ಲಿಂಬೆ ಬೆಳೆಗೆ ಕನಿಷ್ಠ
2,500ರಿಂದ 4,000ರೂ.ವರೆಗೆ ದರ ನಿಗದಿಯಾಗಿದ್ದು ರೈತರು ಲಿಂಬೆ ಹಣ್ಣು ಮಾರಿ ಬಂದ ಹಣವನ್ನು ಆ ಗಿಡಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರುಣಿಸುತ್ತಿದ್ದಾರೆ.
ಲಾರಿಯಲ್ಲಿ ತುಂಬಿಕೊಂಡು ಬರುವ ಟ್ಯಾಂಕರ್ ಗಳಿಗೆ 1500-1800 ಹಾಗೂ ಸಣ್ಣ ಟ್ಯಾಂಕರ್‌ಗಳಿಗೆ 700ರಿಂದ 900 ರೂ. ಕೊಟ್ಟು ಗಿಡಗಳಿಗೆ ನೀರುಣಿಸುವ
ಕಾರ್ಯ ಮಾಡುತ್ತಿದ್ದಾರೆ. ದೊಡ್ಡ ಟ್ಯಾಂಕರ್‌ಗಳ ನೀರು 20ರಿಂದ 22 ಗಿಡಗಳಿಗೆ ನೀರುಣಿಸಿದರೆ, ಸಣ್ಣ ಟ್ಯಾಂಕರಗಳಿಂದ 8-10 ಗಿಡಗಲು ನೀರುಣುತ್ತವೆ. ಸರ್ಕಾರದಿಂದ ಲಿಂಬೆ ಉಳಿಸಿಕೊಳ್ಳಲು ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ ಸರ್ಕಾರ ಇದರ ಬಗ್ಗೆ ಕಿಂಚಿತ್ತೂ ವಿಚಾರ ಮಾಡುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ಸರ್ಕಾರ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಪ್ರತಿ
ರೈತರಿಗೂ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿಕೊಟ್ಟು ಬೆಳೆ
ಉಳಿಸಿ ಕೊಡಬೇಕು. ಒಂದೇ ವರ್ಷದಲ್ಲಿ ತೋಟಗಾರಿಕೆ
ಬೆಳೆ ಬರಲ್ಲ. ಕನಿಷ್ಠ ಐದಾರು ವರ್ಷವಾದರು ಬೇಕಾಗುತ್ತದೆ.
ಆದ್ದರಿಂದ ದೀರ್ಘಕಾಲದ ಬೆಳೆ ಉಳಿಸಲು ಸರ್ಕಾರ
ರೈತರ ನೆರವಿಗೆ ಬರಬೇಕು.
.ರಮೇಶ ಮರಡಿ,
ಬೀರಪ್ಪ ಹೀರಣ್ಣಗೋಳ
ಹಿರೇರೂಗಿ ರೈತರು
ತೋಟಗಾರಿಕೆ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರುಣಿಸಲು ಸರ್ಕಾರಕ್ಕೆ
ಪತ್ರ ಬರೆಯಲಾಗಿದೆ. ಸರ್ಕಾರದಿಂದ ನಿರ್ದೇಶನ ಬಂದರೆ ಮಾತ್ರ ಟ್ಯಾಂಕರ್ ನೀರಿಗೆ ಇಲಾಖೆಯಿಂದ ಸಹಾಯ ಮಾಡಬಹುದಾಗಿದೆ.
.ಆರ್.ಟಿ. ಹಿರೇಮಠ,
ತೋಟಗಾರಿಕೆ
ಇಲಾಖಾಧಿಕಾರಿ, ಇಂಡಿ
ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.