ಎಲ್ಲ ವರ್ಗದ ಜನರೇ ನನ್ನ ಆಸ್ತಿ
ವಿಪಕ್ಷದ ಯಾವುದೇ ಅಪಪ್ರಚಾರ ಟೀಕೆ-ಟಿಪ್ಪಣಿಗಳಿಗೆ ಉತ್ತರಿಸುವ ಅಗತ್ಯವಿಲ್ಲ: ಸಿದ್ದೇಶ್ವರ್
Team Udayavani, Apr 11, 2019, 12:00 PM IST
ಹೊನ್ನಾಳಿ: ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಮಾತನಾಡಿದರು.
ಹೊನ್ನಾಳಿ: ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲ ವರ್ಗದ ಜನರೇ ನನ್ನ ಆಸ್ತಿ ನಾನು ಅವರ ಸೇವಕನೇ ಹೊರತು ಜನನಾಯಕನಲ್ಲ ಎಂದು ದಾವಣಗೆರೆ
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 5 ಬಾರಿಯಿಂದ ನಮಗೆ ಸತತ ಅಧಿಕಾರ ನೀಡಿದರೂ ನಾನೆಂದು ಹಣ ಬಲ, ತೋಳಬಲ ಪ್ರದರ್ಶಿಸಿದ ಉದಾಹರಣೆಯಿಲ್ಲ. ವಿಪಕ್ಷದ ಯಾವುದೇ ಅಪಪ್ರಚಾರ ಟೀಕೆ- ಟಿಪ್ಪಣಿಗಳಿಗೆ ಉತ್ತರಿಸುವ ಅಗತ್ಯವಿಲ್ಲ. ಕ್ಷೇತ್ರದಲ್ಲಿ ಬಿಜೆಪಿಯ ಕಡೆ ಜನತೆ ಒಲವು ವ್ಯಕ್ತಪಡಿಸುತ್ತಿದ್ದು, ಕಮಲದ ಗುರುತಿಗೆ
ಮತ ನೀಡಲು ತೀರ್ಮಾನಿಸಿದ್ದಾರೆ ಎಂದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಮತದಾರರ ಜ್ವಲಂತ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಸಾಮರ್ಥ್ಯ
ಜನಪ್ರತಿನಿಧಿ ಗಳಿಗಿದ್ದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ಚುನಾವಣೆ ಬಂದಾಗ ಎದುರಾಳಿಗಳ ಟೀಕೆ-ಟಿಪ್ಪಣೆ ಸಹಜ. ಆದರೆ, ಜಿಲ್ಲೆಯಲ್ಲಿ
ವಿಪಕ್ಷದವರು ವಿನಾಕಾರಣ ಚುನಾವಣೆ ಬಂದಾಗ ಮಾತ್ರ ಅಪಪ್ರಚಾರ ಮಾಡುತ್ತಿರುವುದು ಶೋಭೆ ತರುವ ವಿಚಾರವಲ್ಲ. ಕ್ಷೇತ್ರದಲ್ಲಿ ಎಲ್ಲೂ ಪುಟ್ಟಿ ಮಣ್ಣು ಉಗ್ಗಿಲ್ಲ ಎಂಬುದಾಗಿ ಕಾಂಗ್ರೆಸ್ಸಿನವರು ಅಪಪ್ರಚಾರ ಮಾಡುತ್ತಿದ್ದು, ನಾನು ಮಣ್ಣು ಉಗ್ಗುವನಲ್ಲ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಆಯಾ ಕ್ಷೇತ್ರದ ಶಾಸಕರ ಸಹಕಾರದಿಂದ ಶಾಶ್ವತವಾದ ಕಾಂಕ್ರೀಟ್ ರಸ್ತೆಗಳನ್ನು
ಮಾಡಿಸಿದ್ದೇನೆ ಎಂದರು.
ಶಾಸಕ ರೇಣುಕಾಚಾರ್ಯ ಮಾತನಾಡಿ, ಕೇವಲ ಚುನಾವಣೆಗಳು ಬಂದಾಗ ಮಾತ್ರ ಕಾಂಗ್ರೆಸ್ ಪಕ್ಷದ ಮುಖಂಡರು ಜನರಿಗೆ ಮುಖ ತೋರಿಸುತ್ತಾರೆ.
ಅಧಿಕಾರ ಪಡೆಯಲು ಅಪಪ್ರಚಾರ ಮಾಡುವುದೇ ಅವರ ಕಾಯಕ. ಜನತೆ ಇವರ ವರ್ತನೆಗೆ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡುತ್ತಾ ಬಂದಿದ್ದರೂ
ಇನ್ನೂ ಬುದ್ಧ ಬಂದಿಲ್ಲ ಎಂದರು.
ದೇಶದಲ್ಲಿ ಕಳೆದ 70 ವರ್ಷಗಳಿಂದ ಜನರ ಕಣ್ಣಿಗೆ ಮಣ್ಣೆರಚಿ ಹಣ, ಹೆಂಡದ ಹೊಳೆಯಿಂದ ಅಧಿಕಾರ ಪಡೆದು ದೇಶವನ್ನೆ ಕೊಳ್ಳೆ ಹೊಡೆದವರು ಅಭಿವೃದ್ಧಿ
ಬಗ್ಗೆ ಮಾತನಾಡುತ್ತಾರೆ. ವಿಶ್ವ ಮೆಚ್ಚಿದ ನಾಯಕ ನರೇಂದ್ರ ಮೋದಿಯವರ ಕೈ ಬಲಪಡಿಸಲು ಲೋಕಸಭೆಗೆ ಸಿದ್ದೇಶ್ವರ್ ಅವರನ್ನು ಮತ್ತೂಮ್ಮೆ ಆಯ್ಕೆ
ಮಾಡಿ ಕಳುಹಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಜಿಪಂ ಸದಸ್ಯರಾದ ಜಿ. ವೀರಶೇಖರಪ್ಪ, ಎಂ.ಆರ್. ಮಹೇಶ್, ತಾಪಂ ಸದಸ್ಯರಾದ ರಂಗನಾಥ್,
ಮರಿಖನ್ನಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ ಪಾಟೀಲ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರೆಕೆರೆ ನಾಗರಾಜ್, ಎಸ್ಸಿ
ಮೋರ್ಚಾದ ಮಾರುತಿನಾಯ್ಕ, ರೈತ ಮೊರ್ಚಾ ಅಧ್ಯಕ್ಷ ರವೀಂದ್ರನಾಥ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದಣ್ಣ, ಜಿಪ ಮಾಜಿ ಉಪಾಧ್ಯಕ್ಷ ಕೆ.ವಿ.
ಚನ್ನಪ್ಪ, ಮುಖಂಡರಾದ ದಿಡಗೂರು ಪಾಲಕ್ಷಪ್ಪ, ಮಾಧೇನಹಳ್ಳಿ ರುದ್ರೇಗೌಡ, ಚಂದ್ರಣ್ಣ, ಹರಳಹಳ್ಳಿ ಹನುಮಂತಪ್ಪ, ಟಿ.ಎಸ್.ಜಗದೀಶ್, ಮಾದನಭಾವಿ ಆನಂದಪ್ಪ, ಬಿಂಬ ಮಂಜಣ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.