ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ
ಆರು ದಶಕಗಳ ಕಾಲ ಆಳಿರುವ ಕಾಂಗ್ರೆಸ್ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ: ರಾಜೂ ಗೌಡ
Team Udayavani, Apr 11, 2019, 1:39 PM IST
ಸುರಪುರ: ದೇವರಗೋನಾಲ ಗ್ರಾಮದಲ್ಲಿ ಶಾಸಕ ರಾಜೂಗೌಡ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಪರ ಮತಯಾಚಿಸಿದ ಮಾತನಾಡಿದರು.
ಸುರಪುರ: ದೇಶದ ಅಭಿವೃದ್ಧಿಗಾಗಿ ಮತದಾರರು ಬಿಜೆಪಿ ಬೆಂಬಲಿಸಬೇಕು. ಅಖಂಡತೆ ಮತ್ತು ಸಾರ್ವಭೌಮತ್ವ ರಕ್ಷಣೆ ಮತ್ತು ದೇಶದ ಭದ್ರತೆಗಾಗಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವ ನಾಯಕ ಅವರನ್ನು ಗೆಲ್ಲಿಸಿ ತರುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ
ಮಾಡಬೇಕು ಎಂದು ಶಾಸಕ ನರಸಿಂಹ ನಾಯಕ ರಾಜೂಗೌಡೆ ಕರೆ ನೀಡಿದರು.
ತಾಲೂಕಿನ ದೇವರ ಗೋನಾಲ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವ ನಾಯಕ ಪರ ಮತ ಯಾಚಿಸಿ ಅವರು ಮಾತನಾಡಿದರು. ಆರು ದಶಕಗಳ ಕಾಲ ಆಳಿರುವ ಕಾಂಗ್ರೆಸ್ ದೇಶಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಸ್ವಾತಂತ್ರ್ಯ ಚಳವಳಿ ಕಥೆ ಹೇಳುವ ಕಾಂಗ್ರೆಸಿಗರಿಗೆ ಹೋರಾಟ ದ ನಿಜವಾದ ಕಥೆಯೇ ಗೊತ್ತಿಲ್ಲ. ದೇಶಕ್ಕೆ ಮಹಾನ್ ಸಂವಿಧಾನ ಕೊಡುಗೆ ನೀಡಿದ ಮಹಾತ್ಮ
ಡಾ| ಬಾಬಾಸಾಹೇಬ ಅವರನ್ನು ಗೌರವಿಸಲಿಲ್ಲ. ಗೌರವದಿಂದ ಕಂಡಿಲ್ಲ. ಪ್ರತಿ ಚುನಾವಣೆಗಳಲ್ಲಿ ರಣತಂತ್ರ ರೂಪಿಸಿ ಅವರನ್ನು ಸೋಲಿಸಿದರು. ಅವರ ಅಂತಿಮ ಸಂಸ್ಕಾರಕ್ಕೂ ಕೂಡ ನಿವೇಶನ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಡಾ| ಬಾಬಾಸಾಹೇಬ ಅವರ ಸಮಾದಿ ಸ್ಥಳವನ್ನು ಅಭಿವೃದ್ಧಿ ಮಾಡಲು ವಿಶೇಷ ಅನುದಾನ ನೀಡಿ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಿದ್ದಾರೆ.
ಇದು ಬಿಜೆಪಿ ಸಂಸ್ಕೃತಿ. ಈ ವಾಸ್ತವಿಕ ಸತ್ಯವನ್ನು ದೇಶದ ಜನರು ಅರಿತುಕೊಳ್ಳಬೇಕು ಎಂದು ಹೇಳಿದರು. ಸಂವಿಧಾನದ 371ನೇ(ಜೆ) ಕಲಂ ನಾನೇ ಜಾರಿಗೆ ತಂದಿದ್ದೇನೆ. ದೇಶದ ಅಭಿವೃದ್ದಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. 60 ವರ್ಷ ಮಾಡದ ಅಭಿವೃದ್ದಿಯನ್ನು ಪ್ರಧಾನಿ ಮೋದಿ ಕೇವಲ ಐದು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಇಡೀ ದೇಶದಾಧ್ಯಂತ ಇವತ್ತು ಮೋದಿ ಅಲೆ ಇದೆ. ಇದನ್ನು ಸಹಿಸಲಾಗದೆ ಸೋಲಿನ ಭೀತಿಯಿಂದ ಮೋದಿ ಅವರ ವಿರುದ್ಧ ವ್ಯರ್ಥ ಆರೋಪ ಮಾಡುತ್ತಿದ್ದಾರೆ
ಎಂದು ದೂರಿದರು.
ಹಾಲಿ ಸಂಸದ ಬಿ.ವಿ. ನಾಯಕ ನಿಷ್ಕಿಯ ಸಂಸದ. ಅಪ್ಪ ಮಗ ನಾಲ್ಕು ಬಾರಿ ಗೆದ್ದು ಬಂದಿದ್ದು, ಕ್ಷೇತ್ರದಲ್ಲಿ ಏನನ್ನು ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಗೆ ಮಂಜೂರಿಯಾಗಿದ್ದ ಐಐಟಿಯನ್ನು ಉಳಿಸಿ ಕೊಳ್ಳಲಾಗಲಿಲ್ಲ. ಕೈಗಾರಿಕೆ ಸ್ಥಾಪಿಸಲಾಗಲಿಲ್ಲ ಎಂದು ಆರೋಪಿಸಿದರು. ರಾಜಾ ಅಮರೇಶ ನಾಯಕ ಅವರಿಗೆ ಎರಡು ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಅನುಭವ ಇದೆ.
ಸರಳ ಸಜ್ಜನಿಕೆ ರಾಜಕಾರಣಿ. ಅವರು ಚುನಾಯುತರಾದರೆ ಪ್ರತಿ ತಾಲೂಕಿನಲ್ಲಿ ಸಂಸದರ ಕಚೇರಿ ಆರಂಭಿಸಲಾಗುವುದು. ಸಣ್ಣ ಸಣ್ಣ ಕೈಗಾರಿಕಾ ಘಟಕ ಸ್ಥಾಪಿಸಿ ಯುವಕರಿಗೆ ಉದ್ಯೋಗ ಒದಗಿಸಲಾಗುವುದು. ಕಾರಣ ಅಮರೇಶ ನಾಯಕ ಅವರನ್ನು ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ರಾಜಾ ಹನುಮಪ್ಪ ನಾಯಕ ತಾತಾ, ಎಚ್.ಸಿ. ಪಾಟೀಲ, ದೊಡ್ಡ ದೇಸಾಯಿ, ಸಣ್ಣ ದೇಸಾಯಿ ದೇವರಗೋನಾಲ, ಮರಿಲಿಂಗಪ್ಪ ಕರ್ನಾಳ, ಬಿ.ಎಂ. ಹಳ್ಳಿಕೋಟಿ, ಶಂಕರ ನಾಯಕ, ಬಲಭೀಮ ನಾಯಕ, ಶರಣು ಬೈರಿಮಡ್ಡಿ, ಮಾನಪ್ಪ ದಾಡಿ, ಭೀಮಾಶಂಕರ ಬಿಲ್ಲವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.