ರಿಲಯನ್ಸ್; ರೇಮಂಡ್ ನಿಂದ ಪರಿಸರ ಸ್ನೇಹಿ “ಇಕೋವೇರಾ” ಬಟ್ಟೆ ಬಿಡುಗಡೆ

Team Udayavani, Apr 11, 2019, 3:16 PM IST

Ecovera

ಮುಂಬಯಿ: ಫ್ಯಾಶನ್ ಹಾಗೂ ಜವಳಿ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರತದ ಪ್ರಮುಖ ಸಂಸ್ಥೆಯಾದ ರೇಮಂಡ್ ಗ್ರೂಪ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅತ್ಯಾಧುನಿಕR|Elan ತಂತ್ರಜ್ಞಾನ ಬಳಸಿ ತಯಾರಿಸಲಾದ ‘ಇಕೋವೇರಾ’ ಪರಿಸರ ಸ್ನೇಹಿ ವಸ್ತ್ರಗಳ ಶ್ರೇಣಿಯನ್ನು ಅನಾವರಣಗೊಳಿಸಿದೆ.

ಇಕೋವೇರಾ ಶ್ರೇಣಿಯು ಸದ್ಯದಲ್ಲೇ 700 ನಗರಗಳಲ್ಲಿರುವ 1500 ಮಳಿಗೆಗಳ ಮೂಲಕ ಲಭ್ಯವಾಗಲಿದೆ. ಈ ಶ್ರೇಣಿಯ ವಸ್ತ್ರಗಳನ್ನು ಪ್ರಪಂಚದಲ್ಲೇ ಅತ್ಯಂತ ಪರಿಸರ ಸ್ನೇಹಿ ಫೈಬರ್ ಆದ R|Elan ಗ್ರೀನ್‌ಗೋಲ್ಡ್ ಬಳಸಿ ತಯಾರಿಸಲಾಗಿದೆ. ಗ್ರಾಹಕರ ಬಳಕೆಯ ನಂತರ ಕಸಕ್ಕೆ ಸೇರುವ ನಿರುಪಯುಕ್ತ ಪೆಟ್ ಬಾಟಲುಗಳನ್ನು ಜೈವಿಕ ಇಂಧನ ಹಾಗೂ ಇಂಧನ ದಕ್ಷ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಿ R|Elan ಗ್ರೀನ್‌ಗೋಲ್ಡ್ ಅನ್ನು ತಯಾರಿಸಲಾಗುತ್ತದೆ.

ರಿಲಯನ್ಸ್‌ನ R|Elan ನಿಂದ ಸಶಕ್ತವಾದ ರೇಮಂಡ್‌ನ ಇಕೋವೇರಾ, ಸರಿಸುಮಾರು 1 ಮಿಲಿಯನ್ ಪೆಟ್ ಬಾಟಲುಗಳನ್ನು ಮಣ್ಣಿಗೆ ಸೇರದಂತೆ ತಡೆಯಲಿದೆ. ಭೂಮಿಯನ್ನು ರಕ್ಷಿಸುವ ಆರ್‌ಐಎಲ್ ಹಾಗೂ ರೇಮಂಡ್ಸ್ ಬದ್ಧತೆಗೆ ಈ ಬೆಳವಣಿಗೆ ಸಾಕ್ಷ್ಯವಾಗಿದೆ.

ಸುಸ್ಥಿರ ಶ್ರೇಣಿಯ ಜಂಟಿ ಅಭಿವೃದ್ಧಿಯ ಕುರಿತು ಮಾತನಾಡಿದ ರೇಮಂಡ್ಸ್ ಲಿಮಿಟೆಡ್‌ನ ಜವಳಿ ವಿಭಾಗದ ಅಧ್ಯಕ್ಷ ಶ್ರೀ ಸುಧಾಂಶು ಪೋಖ್ರಿಯಾಲ್, “ನೈಸರ್ಗಿಕ ಹಾಗೂ ಮಾನವ ನಿರ್ಮಿತ ಫೈಬರ್‌ಗಳೆರಡನ್ನೂ ಬಳಸಿಕೊಂಡು ಹೊಸ ಬದಲಾವಣೆಗಳೊಡನೆ ಅತ್ಯುತ್ತಮ ಗುಣಮಟ್ಟದ ವಸ್ತ್ರಗಳ ತಯಾರಿಕೆಗೆ ನಮ್ಮ ಸಂಸ್ಥೆ ಹೆಸರುವಾಸಿ. ಪರಿಸರ ಸ್ನೇಹಿ, ಸುಸ್ಥಿರ ವಸ್ತ್ರಗಳನ್ನು ಸೃಷ್ಟಿಸುವ ನಮ್ಮ ಪ್ರಯತ್ನದಲ್ಲಿ ಹಲವಾರು ವೈಶಿಷ್ಟ್ಯಗಳುಳ್ಳ ವಸ್ತ್ರಗಳನ್ನು ತಯಾರಿಸಲು R|Elan ಗ್ರೀನ್‌ಗೋಲ್ಡ್ ನಿಜಕ್ಕೂ ಅತ್ಯುತ್ತಮ ಆಯ್ಕೆ. ನಮ್ಮ ಸಂಸ್ಥೆಯನ್ನು ಸುಸ್ಥಿರ ಹಾಗೂ ಪರಿಸರ ಸ್ನೇಹಿಯಾಗಿ ಬೆಳೆಸುವ ನಿಟ್ಟಿನಲ್ಲೂ R|Elan ಗ್ರೀನ್‌ಗೋಲ್ಡ್ ಒಂದು ಮಹತ್ವದ ಹೆಜ್ಜೆ.” ಎಂದು ಹೇಳಿದರು.

ಲಂಬವಾಗಿ ಹಾಗೂ ಅಡ್ಡಡ್ಡಲಾಗಿ ಸಂಯೋಜಿತವಾಗಿರುವ ಪ್ರಪಂಚದ ಅತಿದೊಡ್ಡ ವರ್‌ಸ್ಟೆಡ್ ಸೂಟಿಂಗ್ ವಸ್ತ್ರಗಳ ನಿರ್ಮಾತೃಗಳ ಪೈಕಿ ರೇಮಂಡ್‌ನದು ಪ್ರಮುಖ ಹೆಸರು. ಭಾರತದ ವರ್‌ಸ್ಟೆಡ್ ಸೂಟಿಂಗ್ ವಸ್ತ್ರಗಳ ಮಾರುಕಟ್ಟೆಯಲ್ಲಿ ಅದು ಶೇಕಡ 60ಕ್ಕಿಂತ ಅಧಿಕ ಪಾಲನ್ನು ಹೊಂದಿದೆ. ಆಧುನಿಕ ಪುರುಷನಿಗೆ ಸರಿಯಾದ ಉಡುಪುಗಳನ್ನು ಒದಗಿಸುವುದು (‘ಡ್ರೆಸಿಂಗ್ ದ ಮಾಡರ್ನ್ ಮ್ಯಾನ್ ರೈಟ್’) ಹಿಂದಿನಿಂದಲೂ ರೇಮಂಡ್‌ನ ಗುರಿಯಾಗಿದೆ.

ರಿಲಯನ್ಸ್‌ನ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಫೈಬರ್‌‍ಗಳನ್ನು ಕುರಿತ ಅಗಾಧ ಅನುಭವದ ಹಿನ್ನೆಲೆಯಲ್ಲಿ ರೂಪುಗೊಂಡಿರುವ R|Elan ಸಾಮಾನ್ಯಕ್ಕಿಂತ ಹೆಚ್ಚನ್ನು ಸಾಧಿಸುವ ವಿನೂತನ ವಸ್ತ್ರಗಳ ಸಂಗ್ರಹವಾಗಿದೆ. ಆರ್‌ಐಎಲ್‌ನ R|Elan ಗ್ರೀನ್‌ಗೋಲ್ಡ್ ಜಾಗತಿಕವಾಗಿ ಅತ್ಯುತ್ತಮ ಇಕೋ ಕ್ರೆಡೆನ್‌ಶಿಯಲ್‌ಗಳನ್ನು ಹೊಂದಿರುವ ಹೊಸ ತಲೆಮಾರಿನ ತಂತ್ರಜ್ಞಾನವಾಗಿದ್ದು, ಸುಸ್ಥಿರ ಫ್ಯಾಶನ್‌ಗಾಗಿ ಗ್ರಾಹಕರ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅದನ್ನು ರೂಪಿಸಲಾಗಿದೆ. ಫ್ಯಾಶನ್ ಉದ್ದಿಮೆಗೆ ಅತ್ಯಂತ ಪರಿಸರ ಸ್ನೇಹಿ ಕಚ್ಚಾ ಪದಾರ್ಥಗಳಲ್ಲೊಂದಾದ ಗ್ರೀನ್‌ಗೋಲ್ಡ್, ಪ್ರಮುಖ ಬ್ರಾಂಡುಗಳಿಗೆ ಪರಿಸರದ ಕುರಿತ ತಮ್ಮ ಬದ್ಧತೆಯನ್ನು ಪೂರ್ಣಗೊಳಿಸಲು ನೆರವಾಗುತ್ತಿದೆ.

ಆರ್‌ಐಎಲ್ ಪಾಲಿಯೆಸ್ಟರ್ ಬಿಸಿನೆಸ್‌ನ ಸಿಎಂಓ ಶ್ರೀ ಗುಂಜನ್ ಶರ್ಮಾ ಮಾತನಾಡಿ, “ರೇಮಂಡ್‌ನೊಡನೆ ಜೊತೆಗೂಡಲು ನಮಗೆ ಹೆಮ್ಮೆಯೆನಿಸುತ್ತದೆ. ಪರಿಸರಕ್ಕಾಗಿ ನಮ್ಮ ಪಾಲಿನ ಕೊಡುಗೆ ನೀಡಲು ಇದು ನಮಗೊಂದು ಅವಕಾಶ ನೀಡಿದೆ. ಸುಸ್ಥಿರತೆಯ ಹೆಚ್ಚುವರಿ ಸೇರ್ಪಡೆಯೊಡನೆ ವಿನೂತನವಾದ ಫ್ಯಾಶನಬಲ್ ವಸ್ತ್ರಗಳನ್ನು ರೂಪಿಸಲು ರೇಮಂಡ್ ಸಂಸ್ಥೆಗೆ R|Elan ಗ್ರೀನ್‌ಗೋಲ್ಡ್ ನೆರವಾಗುತ್ತದೆ” ಎಂದು ಹೇಳಿದರು.

ಸರ್ಕ್ಯುಲರ್ ಇಕಾನಮಿ, ಮರುಬಳಕೆ ಹಾಗೂ ಕಸ ತಗ್ಗಿಸುವಿಕೆಯ ಪರಿಕಲ್ಪನೆಗಳನ್ನು ಅವಲಂಬಿಸಲು ಆರ್‌ಐಎಲ್‌ನ ಪೆಟ್ರೋಕೆಮಿಕಲ್ಸ್ ಬಿಸಿನೆಸ್ ಬದ್ಧವಾಗಿದೆ. ಈ ಪರಿಕಲ್ಪನೆಗಳನ್ನು ಬಳಸುವಲ್ಲಿ ಭಾರತದ ಜವಳಿ ಹಾಗೂ ಫ್ಯಾಶನ್ ಉದ್ದಿಮೆಯನ್ನು ಮುಂಚೂಣಿ ಸ್ಥಾನಕ್ಕೆ ತರುವುದು ಅದರ ಗುರಿ. ಹೀಗೆ, R|Elan ಉತ್ಪನ್ನಗಳು ಇತ್ತೀಚಿನ ಫ್ಯಾಶನ್ ಟ್ರೆಂಡ್‌ಗಳಿಗೆ ಅನುಗುಣವಾದ ಹೊಸ ತಲೆಮಾರಿನ ವಸ್ತ್ರಗಳನ್ನು ಗ್ರಾಹಕರಿಗೆ ನೀಡುವುದರ ಜೊತೆಗೆ ಅವರ ಜೀವನಶೈಲಿಯ ಅಗತ್ಯಗಳನ್ನೂ ಪೂರೈಸಲಿವೆ. ಹೊರಗೆ R|Elan ಇದ್ದರೆ, ಒಳಗೆ ವಿಶೇಷವಾದದ್ದೇನೋ ಇದೆ ಎನ್ನುವ ಖಾತರಿಯನ್ನು ಆರ್‌ಐಎಲ್‌ನ ಪ್ರಯತ್ನಗಳು ಗ್ರಾಹಕರಿಗೆ ನೀಡಲಿವೆ.

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.