ವೀರ ಉತ್ತರಕುಮಾರನಿಂದ ಗುಲಾಮನ ಸ್ವಾತಂತ್ರ್ಯಯಾತ್ರೆ

ಹೊಂಗಿರಣ ತಂಡದವರ ಪ್ರಸ್ತುತಿ

Team Udayavani, Apr 12, 2019, 6:00 AM IST

h-4

ಮಗುವಿನ ಆಸಕ್ತಿ ಏನೆಂದು ತಿಳಿದುಕೊಳ್ಳದೆ ತನ್ನಿಷ್ಟದಂತೆ ಆಗಬೇಕು ಎನ್ನುವ ಮಿಥ್ಯೆಯ ಬೆನ್ನು ಹಿಡಿದು ಮಗುವಿನ ಭವಿಷ್ಯಕ್ಕೆ ಮಾರಕವಾಗುವ, ಅತಿ ಮುದ್ದಿನಿಂದ ಬೆಳೆಸಿ ವ್ಯಾವಹಾರಿಕ ಜ್ಞಾನದಿಂದ ವಂಚಿತರನ್ನಾಗಿಸುವ ತಾಯಂದಿರಿಗೆ ಒಂದು ನೀತಿಪಾಠ ಉತ್ತರಕುಮಾರನ ಈ ಮಾತಿನಲ್ಲಿ ಅಡಗಿದೆ.

ಉಡುಪಿಯಲ್ಲಿ ಹೊಂಗಿರಣ ಶಿವಮೊಗ್ಗ ಇವರಿಂದ ಡಾ| ಸಾಸ್ವೆಹಳ್ಳಿ ರಚಿಸಿ ಮತ್ತು ನಿರ್ದೇಶಿಸಿದ ಪೌರಾಣಿಕ ನಾಟಕ “ವೀರ ಉತ್ತರಕುಮಾರ’ ಜನಜನಿತವಾದ ಕಥೆಯೊಂದನ್ನು ರಂಗಕ್ಕಿಳಿಸುವ ಪ್ರಯತ್ನವಾಗಿತ್ತು. ತನ್ನಲ್ಲಿ ಇಲ್ಲದ ಪೌರುಷವನ್ನು ಆವಾಹಿಸಿಕೊಂಡು ಇತರರನ್ನು ತುಚ್ಛಿàಕರಿಸುತ್ತಾ, ಪೊಳ್ಳು ಪ್ರತಿಷ್ಠೆಯನ್ನು ವೈಭವೀಕರಿಸುತ್ತಾ ಇದಿರನ್ನು ಹಳಿಯುವ ನೀತಿಯನ್ನು ಮೈಗೂಡಿಸಿಕೊಂಡ ಉತ್ತರಕುಮಾರನ ಅಪರಾವತಾರ ಇಂದಿನ ರಾಜಕಾರಣಿಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಉತ್ತರಕುಮಾರನ ಇಬ್ಬಗೆ ನೀತಿಯನ್ನು ಅರಗಿಸಿಕೊಂಡು ರಂಗದಲ್ಲಿ ಅಭಿನಯಿಸಿ ಯಶಸ್ವಿಯಾದ ಪಾತ್ರಧಾರಿ ಬಹುಕಾಲ ಪ್ರೇಕ್ಷಕರ ನೆನಪಿನಲ್ಲಿ ಉಳಿಯಬಲ್ಲರು. ಕಂಪೆನಿ ನಾಟಕದ ರಂಗಗೀತೆಗಳನ್ನು ಈ ನಾಟಕದಲ್ಲಿ ಆಳವಡಿಸಿಕೊಳ್ಳುವ ಪ್ರಯತ್ನ ಪೂರಕವಾಗುವ ಬದಲು ನಾಟಕದಿಂದ ದೂರನಿಂತಂತೆ ಭಾಸವಾಯಿತು. ಆಸ್ಥಾನದ ದೃಶ್ಯದಲ್ಲೆ ಉದ್ಯಾನವನ, ಯುದ್ಧಭೂಮಿ ಹೀಗೆ ಎಲ್ಲವೂ ಮೂಡಿಬಂದದ್ದು ಅಭಾಸವಾಯಿತು. ಆದರೆ ಸಣ್ತೀಪೂರ್ಣ ಸಂಭಾಷಣೆ ಹಾಗೂ ಸ್ಪಷ್ಟ ಉಚ್ಚಾರ ನಾಟಕದ ಧನಾತ್ಮಕ ಅಂಶಗಳು. ಆಧುನಿಕಯುಗದಲ್ಲಿ ತಮ್ಮ ಮಗುವಿನ ಆಸಕ್ತಿ ಏನೆಂದು ತಿಳಿದುಕೊಳ್ಳದೆ ತನ್ನಿಷ್ಟದಂತೆ ಆಗಬೇಕು ಎನ್ನುವ ಮಿಥ್ಯೆಯ ಬೆನ್ನು ಹಿಡಿದು ಮಗುವಿನ ಭವಿಷ್ಯಕ್ಕೆ ಮಾರಕವಾಗುವ, ಅತಿಮುದ್ದಿನಿಂದ ಬೆಳೆಸಿ ವ್ಯಾವಹಾರಿಕ ಜ್ಞಾನದಿಂದ ವಂಚಿತರನ್ನಾಗಿಸುವ ತಾಯಂದಿರಿಗೆ ಒಂದು ನೀತಿಪಾಠ ಉತ್ತರಕುಮಾರನ ಈ ಮಾತಿನಲ್ಲಿ ಅಡಗಿದೆ. “ಬಾಲ್ಯದಲ್ಲಿ ಅತಿಮುದ್ದಿನಿಂದ ಬೆಳೆಸಿ ಯುದ್ಧವಿದ್ಯೆಗಳನ್ನು ಕಲಿಸದೆ, ವ್ಯಾವಹಾರಿಕ ಜ್ಞಾನವನ್ನು ತಿಳಿಸದೆ, ನನ್ನ ಕಾರ್ಯ ಚಟುವಟಿಕೆಗಳನ್ನು ರಾಣಿಯರ ಅಂತಃಪುರಕ್ಕೆ ಸೀಮಿತಗೊಳಿಸಿ ನನ್ನನ್ನು ಹೇಡಿಯಾಗಿಸಿ ಪ್ರಪಂಚದ ಮುಂದೆ ನಗೆಪಾಟಲಿಗೀಡಾಗುವಂತೆ ಮಾಡಿದ ಮಾತಾಪಿತರೇ ನನ್ನ ಇಂದಿನ ಈ ದುಃಸಿತಿ§ಗೆ ಕಾರಣ’. ಸಮಕಾಲೀನ ವಸ್ತು ಸ್ಥಿತಿಯನ್ನು ನಾಟಕದ ಒಟ್ಟಂದಕ್ಕೆ ಚ್ಯುತಿ ಬಾರದಂತೆ ಅಳವಡಿಸಿಕೊಡ ನಿರ್ದೇಶಕರ ಜಾಣ್ಮೆ ಮೆಚ್ಚಬೇಕಾದದ್ದು.

ಪೌರಾಣಿಕ ನಾಟಕದ ಮರುದಿನ ರಂಗಾರಾಧನಾ ಸವದತ್ತಿ ತಂಡದವರ”ಗುಲಾಮನ ಸ್ವಾತಂತ್ರ್ಯಯಾತ್ರೆ’ ಐತಿಹಾಸಿಕ ನಾಟಕ‌‌ ನಾಂದೀ ಹಾಡಿನೊಂದಿಗೆ ಅನಾವರಣಗೊಂಡಿತು. ಗುಲಾಮರನ್ನು ಮಾರಾಟ ಮಾಡುವ ದಲ್ಲಾಳಿ ಸದ್ಯದ ಸುಲ್ತಾನನನ್ನು ತಾನು ಹಿಂದಿನ ದೊರೆಗೆ ಮಾರಾಟ ಮಾಡಿರುವ ಸತ್ಯಸಂಗತಿಯನ್ನು ಬಾಯ್ಬಿಟ್ಟ ಕಾರಣಕ್ಕೆ ಮರಣದಂಡನೆಗೊಳಗಾಗಿ ಸೆರೆಮನೆಯಲ್ಲಿ ಬಂಧಿಯಾಗುವನು. ಸ್ಥಳೀಯ ಘರಾÌಲಿಯ ಕಾರಸ್ಥಾನದಿಂದಾಗಿ ದಲ್ಲಾಳಿಯು ಮರಣ ದಂಡನೆಯಿಂದ ಪಾರಾಗಿ ರಾಜಾಸ್ಥಾನದಲ್ಲಿ ಸುಲ್ತಾನ್‌, ವಜೀರ್‌ ಹಾಗೂ ಖಾಜಿಯ ಮುಂದೆ ನ್ಯಾಯತೀರ್ಮಾನಕ್ಕೆ ಹಾಜರಾಗುವಲ್ಲಿಂದ ನಾಟಕ ವೇಗ ಪಡೆದುಕೊಂಡಿತು. ನ್ಯಾಯಬದ್ಧವಾಗಿ ಗುಲಾಮಗಿರಿಯಿಂದ ವಿಮೋಚನೆ ಪಡೆಯಬೇಕೆಂದು ಖಾಜಿ ಸೂಚಿಸಿದ ಮೇರೆಗೆ ಸುಲ್ತಾನನನ್ನು ಕೊಂಡವರು ಕೂಡಲೇ ಬಿಡುಗಡೆ ಮಾಡಬೇಕೆನ್ನುವ ಕರಾರಿನೊಂದಿಗೆ ಬಹಿರಂಗ ಸಾರ್ವಜನಿಕ ಹರಾಜಿಗೆ ಏರ್ಪಾಡು ಮಾಡಲಾಗುತ್ತದೆ. ಶತ್ರುಗಳನ್ನು ಅದರಲ್ಲೂ ಮುಖ್ಯವಾಗಿ ಮಂಗೋಲರನ್ನು ಸಂಹಾರಗೈದ ಸುಲ್ತಾನನು ತನ್ನ ಕತ್ತಿಯ ಬಲದಿಂದ ಗುಲಾಮಗಿರಿಯಿಂದ ವಿಮೋಚನೆ ಹೊಂದುವ ಆಯ್ಕೆ ಇದ್ದರೂ ಅದನ್ನು ತಿರಸ್ಕರಿಸಿ ನ್ಯಾಯ ಸಮ್ಮತವಾದ ದಾರಿಯನ್ನು ಆರಿಸಿಕೊಳ್ಳುವಾಗಿನ ಸಂಭಾಷಣೆ ನಾಟಕದ ಧನಾತ್ಮಕ ಅಂಶ. ಮುಂದೆ ಊರಿನ ಘರಾನಾದ ಮಾಲಕಿ ಸಿಂಗಾರಿ ಸುಲ್ತಾನನನ್ನು ಬಹಿರಂಗ ಹರಾಜಿನಲ್ಲಿ ಖರೀದಿಸಿ, ಕಾನೂನುಬಾಹಿರವೆಂದು ವಿಮೋಚನಾ ಪತ್ರಕ್ಕೆ ಸಹಿ ಹಾಕಲು ನಿರಕಾರಿಸಿದಾಗ ಒಬ್ಬ ಸಾಮಾನ್ಯ ಗುಲಾಮನಂತೆ ಸುಲ್ತಾನನು ಆಕೆಯನ್ನು ಹಿಂಬಾಲಿಸಿ ಹೋಗುವುದು, ನ್ಯಾಯದೇವತೆಯ ಅಂಗಣದಲ್ಲಿ ಕನಿಷ್ಠನೂ ಶ್ರೇಷ್ಠನೂ ಒಂದೇ ಎನ್ನುವ ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸಿತು. ಒಂದುರಾತ್ರಿ ಸುಲ್ತಾನನು ತನ್ನೊಡನೆ ಇರಿಸಿಕೊಂಡು ಆತನನ್ನು ಉಪಚರಿಸಿ ಮಾರನೆದಿನ ಬಿಡುಗಡೆ ಮಾಡುವ ಸಿಂಗಾರಿ ಆ ರಾತ್ರಿ ನಡೆಸಿದ ಸಂವಾದ ಗುಲಾಮರು ಯಾರು, ಸ್ವತಂತ್ರರು ಯಾರು ಎನ್ನುವ ವಿವೇಚನೆಯೊಂದಿಗೆ ಪಟ್ಟಭದ್ರ ಹಿತಾಸಕ್ತಿಗಳ ವಿತಂಡವಾದ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಒಳಹೊರಗನ್ನು ತೆರದಿಟ್ಟ ಪರಿ ಮೆಚ್ಚುವಂತಾದ್ದು. ಅದರಲ್ಲೂ ಸಿಂಗಾರಿ ನಾಯಕಿಯಾಗಿ ಪಾತ್ರಾಭಿನಯ ಹಾಗೂ ಮೊನಚಾದ ಮಾತುಗಳ ಸಂಭಾಷಣ ಲಹರಿ ಮನದಲ್ಲಿ ಅಚ್ಚೊತ್ತಿತು.

ಜನನಿ ಭಾಸ್ಕರ್‌ ಕೊಡವೂರು

ಟಾಪ್ ನ್ಯೂಸ್

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Jammu – Kashmir: ಬೆಳ್ಳಂಬೆಳಗ್ಗೆ ಕುಲ್ಗಾಮ್ ನಲ್ಲಿ ಎನ್‌ಕೌಂಟರ್‌… 5 ಭಯೋತ್ಪಾದಕರು ಹತ

Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.