ಪ್ರವಾಸವೂ ಪ್ರಯಾಸವೂ
Team Udayavani, Apr 12, 2019, 6:00 AM IST
ಅದೊಂದು ದಿನ ಕಾಲೇಜು ಮುಗಿಸಿ ಮನೆಯತ್ತ ತೆರಳುತ್ತಿದ್ದೆ. ಬಸ್ಸಿನ ಸೀಟಿನಲ್ಲಿ ಮೊಬೈಲ್ ನೋಡುತ್ತ ಪಯಣಿಸುತ್ತಿದ್ದಾಗ ಗಡಾಯಿಕಲ್ಲು ಸ್ಥಳದ ಹೆಸರು ಗೋಚರಿಸಿತು. ತಕ್ಷಣವೇ ಅಂದು ಶಾಲೆಯಿಂದ ಗಡಾಯಿಕಲ್ಲಿಗೆ ಪ್ರವಾಸ ಹೋದ ಘಟನೆಯನ್ನು ನೆನಪಿಸುವಂತೆ ಮನಸ್ಸು ಪ್ರೇರೇಪಿಸಿತು.
ಅದು ನಾನು ಏಳನೆಯ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ. ಈ ಭಾರಿ ಗಡಾಯಿ ಕಲ್ಲಿನತ್ತ ಪ್ರವಾಸ ಹೋಗಲಿದ್ದೇವೆ ಎಂಬ ಮಾಹಿತಿಯ ಮೇರೆಗೆ ಸ್ನೇಹಿತರೊಂದಿಗೆ ಸೇರಿ ಹೆಸರು ನೋಂದಾಯಿಸಿದೆ. ಪ್ರವಾಸ ಹೋಗುವ ದಿನ ಬೆಳಗಿನ ಜಾವ ಶಾಲೆಯಿಂದ ಎಲ್ಲರೂ ಒಟ್ಟಾಗಿ ಬಸ್ಸನ್ನು ಏರಿದೆವು. ಬೇರೆ ಸ್ಥಳಗಳನ್ನು ಸಂದರ್ಶಿಸಿ ಸಂಜೆಯ ವೇಳೆಗೆ ಗಡಾಯಿಕಲ್ಲು ತಲುಪಿ ಬೆಟ್ಟವನ್ನೇರಿದೆವು. ಮೊದಲೇ ಬಳಲಿದ್ದರಿಂದಲೋ ಸಂಜೆಯ ಬಿಸಿಲಿನ ಕಾವಳದಿಂದಲೋ ಬೆಟ್ಟವನ್ನು ಅರ್ಧಭಾಗ ಕ್ರಮಿಸುವ ಹೊತ್ತಿಗೆ ನಿಶ್ಶಕ್ತಿಯಿಂದ ಕುಳಿತವರೆಷ್ಟೋ ಮಂದಿ. ತಿರುಗಿ ಕೆಳಗಿಳಿಯಲಾರಂಭಿಸಿದವರೆಷ್ಟೋ ! ಆದರೆ, ಅಧ್ಯಾಪಕರು ಧೈರ್ಯ ತುಂಬಿದ ಕಾರಣ ಎಲ್ಲರೂ ಜೊತೆಯಾಗಿ ಬೆಟ್ಟವನ್ನು ಏರಿದೆವು. ಬೆಟ್ಟವನ್ನು ತಲುಪಿದ ತತ್‌ಕ್ಷಣ “ಅಬ್ಟಾ’ ಎಂಬ ಉದ್ಗಾರ ಹಲವರ ಬಾಯಿಯಿಂದ ಬಂದಿತ್ತು. ನಮ್ಮ ಅಧ್ಯಾಪಕರು ಗಡಾಯಿಕಲ್ಲಿನ ಬಗೆಗೆ ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ಈ ಬೆಟ್ಟವನ್ನು ಪ್ರತಿದಿನವೂ ಏರುತ್ತಿದ್ದರೋ ಹೇಗೆ ಎಂಬ ಅಲೋಚನೆಯು ತಲೆಯಲ್ಲಿ ಬಂದಾಗಿತ್ತು. ಅಂದು ಅಧ್ಯಾಪಕರು ತೋರಿದ ಉತ್ಸಾಹ ನಮಗೆ ಆಶ್ಚರ್ಯವನ್ನುಂಟು ಮಾಡಿತ್ತು. ಆ ಸಮಯದಲ್ಲಿ ಇನ್ನೂ ಸೆಲ್ಫಿ ಮುಂತಾದ ಉಪಕರಣಗಳು ಬಂದಿರದ ಕಾರಣ ಕೆಲ ಸಮಯದಲ್ಲಿ ಬೆಟ್ಟವನ್ನಿಳಿದು ಬಂದಿ¨ªೆವು.
ಯೋಚನಾ ಲಹರಿಯಿಂದ ಹೊರಬಂದಾಗ ನಾನಿಳಿಯಬೇಕಿದ್ದ ಸ್ಥಳವು ಆಗಲೇ ಬಂದಿತ್ತು.
ಅಕ್ಷಯಕೃಷ್ಣ ಪಳ್ಳತ್ತಡ್ಕ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಂಗಳೂರು ವಿ. ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.