![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 12, 2019, 6:30 AM IST
ಮೂಲ್ಕಿ: ಹಿಂದುತ್ವವನ್ನು ನಾನು ನಳಿನ್ ಕುಮಾರ್ ಕಟೀಲು ಅವರಲ್ಲಿ ಕಲಿಯುವ ಅಗತ್ಯವಿಲ್ಲ . ನಾನು ಒಬ್ಬ ಹಿಂದೂವಾಗಿ ನನ್ನ ದೇವರನ್ನು ರಾಜಕಾಣಕ್ಕೆ ತಾರದೇ ನನ್ನ ಮನೆಯ ದೇವರ ಗರ್ಭಗುಡಿಯಲ್ಲಿ ಇಟ್ಟು ಪೂಜಿಸಿ ಜನರಲ್ಲಿ ಸಾಮರಸ್ಯದ ವಾತಾವರಣ ಮೂಡಿಸಿ ಸಹಬಾಳ್ವೆಯನ್ನು ನಡೆಸುವ ಮೂಲಕ ಕೇಸರಿ ಬಣ್ಣವನ್ನು ಬಳಸಿಕೊಳ್ಳುವ ಹಿಂದುತ್ವ ನಮ್ಮದು ಎಂದು ಮಂಗಳೂರು ಸಭಾ ಕಾಂಗ್ರೆಸ್ ಆಭ್ಯರ್ಥಿ ಮಿಥುನ್ ರೈ ಹೇಳಿದರು.
ಮೂಲ್ಕಿಯಲ್ಲಿ ನಡೆದ ರ್ಯಾಲಿಯ ಅನಂತರ ಕಾರ್ನಾಡು ಸದಾಶಿವ ರಾವ್ ನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ ಸಂಸದ ನಳಿನ್ ಕುಮಾರ್ ಮಂಗಳೂರಿನ ವಿಮಾನ ನಿಲ್ದಾಣ, ಪಣಂಬೂರಿನ ಬಂದರು ಮಂಡಳಿಯನ್ನು ಖಾಸಾಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರಕಾರಕ್ಕೆ ಸಾಥ್ ಕೊಟ್ಟು , ಜತೆಗೆ ವಿಜಯ ಬ್ಯಾಂಕನ್ನು ಬಲಿ ಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆ ಯಲ್ಲಿ ತಿರಸ್ಕರಿಸಿ ಎಂದು ಹೇಳಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮಾತನಾಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರಾದ ಧನಂಜಯ ಮಟ್ಟು,ಇಕ್ಬಾಲ್ ಅಹಮ್ಮದ್, ವಸಂತ್ ಬೆರ್ನಾಡ್, ಚಂದ್ರಹಾಸ ಸನಿಲ್, ಪ್ರಸಾದ್ ಕಾಂಚನ್, ಬಾಲಾದಿತ್ಯ ಆಳ್ವ, ಗೋಪಿನಾಥ ಪಡಂಗ, ಪದ್ಮಾವತಿ ಶೆಟ್ಟಿ, ಬಿ.ಎಂ. ಆಸೀಪ್, ಶಾಲೆಟ್ ಪಿಂಟೋ, ವೀರಯ್ಯ ಹಿರೇಮs…, ಶಶಿಕಾಂತ ಶೆಟ್ಟಿ, ವಿಮಲಾ ಪೂಜಾರಿ, ಬಶೀರ್ ಕುಳಾಯಿ, ಮಹಾಬಲ ಸನಿಲ್, ಜನಾರ್ದನ ಬಂಗೇರ, ಎ.ಎಚ್. ಶಮೀರ್, ನವೀನ್ ಪುತ್ರನ್, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಅನ್ವಿತ್ ಕಟೀಲು, ವೇಲೇರಿಯನ್ ಸಿಕ್ವೇರಾ, ದಿವಾಕರ ತೋಡಾರ್, ಗುರುರಾಜ ಮುಂತಾದವರಿದ್ದರು.
You seem to have an Ad Blocker on.
To continue reading, please turn it off or whitelist Udayavani.