ಬಿಸಿಲ ಧಗೆಗೆ ತಂಪು ತಂಪು ಪಾನೀಯಗಳು
Team Udayavani, Apr 12, 2019, 6:00 AM IST
ಹೊರಗೆ ಬಿಸಿಲ ಧಗೆ ಏರುತ್ತಿದ್ದಂತೆ ದೇಹದಲ್ಲಿ ಸಹಜವಾಗಿ ನೀರಿನಂಶ ಕಡಿಮೆ ಆಗಿ ಸುಸ್ತು, ನಿರ್ಜಲೀಕರಣ, ವಿಪರೀತ ದಾಹ, ಎಸಿಡಿಟಿ, ಉರಿಮೂತ್ರ ಇತ್ಯಾದಿ ಹಲವಾರು ತೊಂದರೆಗಳು ಕಾಡಲು ಪ್ರಾರಂಭವಾಗುತ್ತದೆ. ರಾಗಿ, ಎಳ್ಳು, ಗುಲಕನ್ ಇತ್ಯಾದಿಗಳ ಜೊತೆಗೆ ಹಾಲನ್ನು ಸೇರಿಸಿ ತಯಾರಿಸುವ ಪಾನೀಯಗಳ ಸೇವನೆಯಿಂದ ದೇಹ ತಂಪಾಗುವುದರ ಜೊತೆಗೆ ನವ ಚೈತನ್ಯವನ್ನೂ ಪಡೆಯಬಹುದು.
ಎಳ್ಳು ವಿದ್ ಬಾದಾಮಿ ಹಾಲು
ಬೇಕಾಗುವ ಸಾಮಗ್ರಿ: ನೆನೆಸಿದ ಬಾದಾಮಿ- ಐದು, ಬಿಳಿ ಎಳ್ಳು- ನಾಲ್ಕು ಟೇಬಲ್ ಸ್ಪೂನ್, ತೆಂಗಿನ ತುರಿ- ಎರಡು ಚಮಚ, ಹಾಲು- ಎರಡು ಕಪ್, ಬೆಲ್ಲ ಮತ್ತು ಐಸ್‌ಪೀಸ್ ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಎಳ್ಳನ್ನು ಹತ್ತು ನಿಮಿಷ ನೆನೆಸಿ. ನಂತರ, ಬಾದಾಮಿ ಮತ್ತು ತೆಂಗಿನತುರಿಯ ಜೊತೆ ನುಣ್ಣಗೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಬೇಕಷ್ಟು ನೀರು, ಹಾಲು, ಬೆಲ್ಲ ಮತ್ತು ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು.
ಗುಲಕನ್ ವಿದ್ ಕಸಕಸೆ ಹಾಲು
ಬೇಕಾಗುವ ಸಾಮಗ್ರಿ: ಹಾಲು- ಎರಡು ಕಪ್, ನೆನೆಸಿದ ಕಸಕಸೆ ಕಾಮಕಸ್ತೂರಿ ಬೀಜ- ನಾಲ್ಕು ಚಮಚ, ಖರ್ಜೂರ- ಎರಡು, ಗುಲಾಬಿ ಎಸೆನ್ಸ್ – ಎರಡು ಚಮಚ ಬೇಕಿದ್ದರೆ ಗುಲ್‌ಕನ್- ಎರಡು ಚಮಚ, ಐಸ್ ಪೀಸ್ ಸ್ವಲ್ಪ.
ತಯಾರಿಸುವ ವಿಧಾನ: ಕುದಿಸಿ ಆರಿಸಿದ ಹಾಲಿಗೆ ಗುಲ್‌ಕನ್ ಮತ್ತು ಖರ್ಜೂರ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ . ಮಿಕ್ಸಿಂಗ್ ಬೌಲ್‌ಗೆ ಹಾಕಿ ಹಾಲು, ಕಸಕಸೆ, ಗುಲಾಬಿ ಶರಬತ್ ಮತ್ತು ಐಸ್‌ಪೀಸ್ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸರ್ವ್ ಮಾಡಬಹುದು.
ರಾಗಿ ಹಾಲು
ಬೇಕಾಗುವ ಸಾಮಗ್ರಿ: ರಾಗಿ- ಎಂಟು ಚಮಚ, ಹಾಲು- ಎರಡು ಕಪ್, ಏಲಕ್ಕಿ ಪುಡಿ- ಕಾಲು ಚಮಚ, ತೆಂಗಿನತುರಿ- ನಾಲ್ಕು ಚಮಚ, ಬೆಲ್ಲ ಮತ್ತು ಐಸ್‌ಪೀಸ್ ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ರಾಗಿಯನ್ನು ಹತ್ತು ನಿಮಿಷ ನೆನೆಸಿ. ನಂತರ, ತೆಂಗಿನತುರಿಯ ಜೊತೆ ಸೇರಿಸಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿ, ಸೋಸಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಬೆಲ್ಲ, ಹಾಲು, ಏಲಕ್ಕಿಪುಡಿ ಮತ್ತು ಐಸ್‌ಪೀಸ್ ಸೇರಿಸಿ ಸರ್ವ್ ಮಾಡಬಹುದು.
ಬಾರ್ಲಿ ಹಾಲು
ಬೇಕಾಗುವ ಸಾಮಗ್ರಿ: ಬಾರ್ಲಿಹುಡಿ- ಎರಡು ಚಮಚ, ರಾಗಿಹುಡಿ- ಎರಡು ಚಮಚ, ಶುಂಠಿತರಿ- ಅರ್ಧ ಚಮಚ, ಏಲಕ್ಕಿ- ಕಾಲು ಚಮಚ, ಹಾಲು- ಎರಡು ಕಪ್, ಬೆಲ್ಲ ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಬಾರ್ಲಿಯನ್ನು ಬಿಸಿಲಲ್ಲಿಟ್ಟು ಪುಡಿಮಾಡಿಕೊಳ್ಳಿ. ಒಲೆಯ ಮೇಲೆ ನಾಲ್ಕು ಕಪ್ ನೀರು ಇಟ್ಟು ಬಿಸಿಯಾಗಲು ಇಡಿ. ಬಾರ್ಲಿಪುಡಿಗೆ ರಾಗಿಪುಡಿ ಸೇರಿಸಿ, ಗಂಟಿಲ್ಲದಂತೆ ಕಲಸಿ, ಬಿ-ಸಿಯಾಗಲು ಇಟ್ಟ ನೀರಿಗೆ ಸೇರಿಸಿ, ಸೌಟಿನಿಂದ ಮಗುಚುತ್ತ ಸಣ್ಣ ಉರಿಯಲ್ಲಿ ಸ್ವಲ್ಪ$ ಹೊತ್ತು ಕುದಿಸಿ. ನಂತರ, ಒಂದು ಕಪ್ ಹಾಲು ಮತ್ತು ರುಚಿಗೆ ಬೇಕಷ್ಟು ಬೆಲ್ಲ ಸೇರಿಸಿ, ಕುದಿಸಿ, ಒಲೆಯಿಂದ ಇಳಿಸಿ. ಇದು ಆರಿದ ಮೇಲೆ ಬೇಕಷ್ಟು ಹಾಲು ಮತ್ತು ಏಲಕ್ಕಿಪುಡಿ ಸೇರಿಸಿ ಚೆನ್ನಾಗಿ ಮಿಶ್ರಮಾಡಿ ಸರ್ವ್ ಮಾಡಬಹುದು.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.