ಪೊಳಲಿ: ಇಂದು ವಾರ್ಷಿಕ ಜಾತ್ರೆ ಸಂಪನ್ನ


Team Udayavani, Apr 12, 2019, 6:00 AM IST

1104malali2

ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಐದು ದಿನಗಳ ಚೆಂಡು ಸಂಪನ್ನಗೊಂಡಿದೆ.ದೇವಸ್ಥಾನದ ಸಮೀಪದ ವಿಶಾಲ ಗದ್ದೆಯಲ್ಲಿ ಐದು ದಿನಗಳವರೆಗೆ ಚೆಂಡು ಉತ್ಸವ ನಡೆದಿದ್ದು, ನೂರಾರು ಮಂದಿ ಉತ್ಸಾಹಿ ತರುಣರು ಪಾಲ್ಗೊಂಡಿದ್ದರು.

ಅಮ್ಮುಂಜೆ ಹಾಗೂ ಮಣೇಲ್‌(ಮಳಲಿ) ಊರುಗಳ ಪರಂಪ ರಾಗತವಾಗಿ ಮಧ್ಯೆ ಚೆಂಡಾಟ ನಡೆಯುತ್ತಾ ಬಂದಿದೆ. ಚೆಂಡಾಟ ನಡೆದ ಬಳಿಕ ಉತ್ಸವ ಬಲಿ ನಡೆಯುತ್ತಿದ್ದು, ಇದಾದ ಬಳಿಕ ಆಯಾ ದಿನಗಳ ಚೆಂಡಿನ ದಿವಸ ಆಯಾ ರಥೋತ್ಸವ ಜರಗಿತು.ಕಡೇ ಚೆಂಡಿನ ದಿನ ಆಳುಪಲ್ಲಕಿ ರಥ,ಬೆಳ್ಳಿ ರಥೋತ್ಸವ ಜರಗಿತು.ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿ ಯನ್ನು ವಸಂತ ಮಂಟಪದಲ್ಲಿ ಪೂಜೆ ಬಳಿಕ ಪಲ್ಲಕಿ ಸೇವೆ,ಧಾರ್ಮಿಕ ಕಾರ್ಯಗಳು ಜರಗಿದವು.

ರಥೋತ್ಸವ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ರಥಕ್ಕೆ ಕಳಸ ಪೂಜೆ ನೆರವೇರಿತು. ದೇಗುಲದ ತಂತ್ರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದ ಅನಂತರ ಸುಬ್ರ ಹ್ಮಣ್ಯ ದೇವರ ಬಲಿ ಉತ್ಸವ ನೆರವೇರಿತು.ಅನಂತರ ರಥೋತ್ಸವ ಜರಗಿತು.

ಉಳ್ಳಾಕ್ಲು ಮಂಗೃಂತಾಯಿ ದೈವಗಳ ನೇಮ
ಈ ಬಾರಿ ಉಳ್ಳಾಕ್ಲು ಮಂಗೃಂತಾಯಿ ದೈವಗಳ ನೇಮ ಜರಗಲಿರುವುದು ವಿಶೇಷ. ಬ್ರಹ್ಮಕಲಶೋತ್ಸವದಂದು ಇದು ನಡೆದಿದ್ದು,ಇನ್ನು ಪ್ರತೀವರ್ಷ ಜಾತ್ರೆಯ ದಿನದಂದು ಈ ದೈವಗಳ ನೇಮ ಜರಗಲಿದೆ.ಜಾತ್ರೆಯ ಸಂದರ್ಭ ಪೂರ್ವಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಎ. 12ರಂದು ಧ್ವಜಾವರೋಹಣದ ದಿನ ಆಗಮಿಸಿ ರಾತ್ರಿ ನೇಮ ಸೇವೆ ಸಂಪನ್ನ ಗೊಳ್ಳಲಿದೆ.ಎ. 12ರಂದು ಅರ್ಕುಳ ಬೀಡಿನಿಂದ ಪುಂಚಮೆ ಮಾರ್ಗವಾಗಿ ಶ್ರೀ ಕ್ಷೇತ್ರ ಪೊಳಲಿ ಶೋಭಾಯಾತ್ರೆ ಜರಗಲಿದೆ.

“ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಅಲ್ಬಂ ಸಾಂಗ್‌ ಬಿಡುಗಡೆ
ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ನಿಮಿತ್ತ ಬುಧವಾರ “ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಎಂಬ ಅಲ್ಬಂ ಸಾಂಗ್‌ ಅನ್ನು ಶಾಸಕ ರಾಜೇಶ್‌ ನಾೖಕ್‌ ಬಿಡುಗಡೆಗೊಳಿಸಿದರು.ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿದರು.

ಸ್ವಾಮಿ ಪ್ರಣವಾನಂದ ಸರಸ್ವತಿ,ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ತಾರಾನಾಥ ಆಳ್ವ ಉಳಿಪಾಡಿಗುತ್ತು,ಪ್ರವೀಣ್‌,ಹರೀಶ್ಚಂದ್ರ,ಅರ್ಚಕ ರಾಮ್‌ ಭಟ್‌, ಪೊಳಲಿ ಗಿರೀಶ್‌ ತಂತ್ರಿ,ಲೀಲಾಕ್ಷ ಕರ್ಕೇರ, ಕದ್ರಿ ನವನೀತ್‌ ಶೆಟ್ಟಿ,ವೆಂಕಟೇಶ್‌ ನಾವಡ, ಭಾಸ್ಕರ ಭಟ್‌, ಕೃಷ್ಣಾನಂದ ಹೊಳ್ಳ,ರಿತೇಶ್‌,ಅಮ್ಮುಂಜೆ ಗುತ್ತು ದೇವ್‌ದಾಸ್‌ ಹೆಗ್ಡೆ,ರಂಗನಾಥ ಶೆಟ್ಟಿ,ಸುಬ್ರಾಯ ಕಾರಂತ್‌, ಪ್ರಶಾಂತ್‌ ಗುರುಪುರ,ಭರತ್‌ ಗುರುಪುರ ಹಾಗೂ ವಾಮನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.ದಿನೇಶ್‌ ರಾಯಿ ನಿರೂಪಿಸಿದರು.

ಇಂದು ಜಾತ್ರೆ ಸಂಪನ್ನ
ನಿತ್ಯಬಲಿ,ದಂಡಮಾಲೆ,ಐದು ದಿನಗಳ ಚೆಂಡಾಟ ರಥೋತ್ಸವ ಅನಂತರ ಎ.12ರಂದು ಫಲ್ಗುಣಿ ನದಿಯಲ್ಲಿ ಅವಭೃಥ ಸ್ನಾನ ನಡೆದು ಧ್ವಜಾವರೋಹಣದೊಂದಿಗೆ ಒಂದು ತಿಂಗಳ ಜಾತ್ರೆ ಸಂಪನ್ನಗೊಳ್ಳುತ್ತದೆ. ಈ ಬಾರಿ ಈ ದಿನ ಉಳ್ಳಾಕ್ಲು ದೈವಗಳ ಭಂಡಾರ ಆಗಮಿಸಿ ಈ ದೇವಗಳ ನೇಮ ನಡೆದು ಕೊನೆಗೆ.ಎ.13ರಂದು ಕೊಡಮಣಿತ್ತಾಯ ದೈವಗಳ ನೇಮ, ಎ.14ರಂದು ಸಂಪ್ರೋಕ್ಷಣೆ,ಮಂತ್ರಾಕ್ಷತೆ ಜರಗಲಿದೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.