ಇನ್ನೂ ವಾರಕ್ಕೆ ನಾಲ್ಕೇ ದಿನ ನೀರು
ಮಂಗಳೂರಿನಲ್ಲಿ ನೀರು ರೇಷನಿಂಗ್ ಜಾರಿ
Team Udayavani, Apr 12, 2019, 6:00 AM IST
ಮಹಾನಗರ: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗುತ್ತಿರುವ ಹಿನ್ನೆಲೆಯಲ್ಲಿ,ಮನಪಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಮಳೆಗಾಲ ಆರಂಭವಾಗುವವರೆಗೆ ಸಮರ್ಪಕವಾಗಿ ವಿತರಣೆ ಮಾಡಲು ಅನುಕೂಲವಾಗುವ ನೆಲೆಯಲ್ಲಿ ತತ್‌ಕ್ಷಣದಿಂದ ನೀರು ರೇಷನಿಂಗ್ ಆರಂಭಿಸಲು ಪಾಲಿಕೆ ನಿರ್ಧರಿಸಿದೆ.ಇದರಂತೆ, ಎ. 11ರಿಂದ 4 ದಿನ ನೀರು ಸರಬರಾಜು ಮಾಡಿ, ಮುಂದೆ 2 ದಿನ ನೀರು ಸರಬರಾಜು ಸ್ಥಗಿತವಾಗಲಿದೆ.
ಎ. 10ರಂದು ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 5.80 ಮೀ.ಮಾತ್ರ ಲಭ್ಯವಿದ್ದು, ಮಳೆಗಾಲ ಆರಂಭವಾಗುವ ಜೂನ್ ಮೊದಲನೇ ವಾರದವರೆಗೆ ನೀರನ್ನು ಸಮರ್ಪಕವಾಗಿ ಬಳಸಿ ವಿತರಿಸ ಬೇಕಿದೆ. ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಿರಲು ಮುಂದಿನ ದಿನದಲ್ಲಿ 4 ದಿನಗಳ ಒಟ್ಟು 96 ಗಂಟೆ ಅವಧಿಯಲ್ಲಿ ಎಲ್ಲ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಬಳಿಕ 2 ದಿನಗಳ 48 ಗಂಟೆಗಳ ಅವಧಿಯಲ್ಲಿ ನೀರು ಸರಬರಾಜು ಸಂಪೂರ್ಣ ಸ್ಥಗಿತ ಮಾಡಲಾಗುತ್ತದೆ.
ತಾತ್ಕಾಲಿಕವಾಗಿ ಈ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದ್ದು, ಮುಂದಿನ ದಿನದಲ್ಲಿ ನದಿಯಲ್ಲಿ ಒಳ ಹರಿವು ಕಂಡುಬಂದರೆ ನೀರು ಸರಬರಾಜು ವ್ಯವಸ್ಥೆಯನ್ನು ಈ ಹಿಂದಿನಂತೆಯೇ ಪೂರೈಕೆ ಮಾಡಲಾಗುತ್ತದೆ ಎಂದು ಮನಪಾ ತಿಳಿಸಿದೆ.
ಸದ್ಯ ತುಂಬೆ ಡ್ಯಾಂನಲ್ಲಿ ನೀರಿನ ಒಳ ಹರಿವು ಸಂಪೂರ್ಣ ಸ್ಥಗಿತವಾಗಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಮಂಗಳವಾರ ಸಂಜೆಯಿಂದ ಎಎಂಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಸಲಾಗಿತ್ತು.ಸದ್ಯ ತುಂಬೆ ಡ್ಯಾಂನಲ್ಲಿ 5.8 ಮೀ. ನೀರು ಸಂಗ್ರಹವಿದೆ.ಆದರೆ ಎಎಂಆರ್ ಡ್ಯಾಂನಲ್ಲಿ ಈಗ ಕೇವಲ ಅರ್ಧ ಮೀಟರ್ ಮಾತ್ರ ನೀರು ಸಂಗ್ರಹವಿದ್ದು, ಮಳೆ ಬಾರದಿದ್ದರೆ ತುಂಬೆ ಡ್ಯಾಂನಲ್ಲಿರುವ ನೀರು ಖಾಲಿಯಾದರೆ, ಎಎಂಆರ್ ಡ್ಯಾಂನ ನೀರಿಗೆ ನಿರೀಕ್ಷಿಸುವಂತಿಲ್ಲ.
2016ರಲ್ಲಿ ನೀರಿಗಾಗಿ ಪರದಾಟ
2016ರ ಆರಂಭದ ತಿಂಗಳಿನಿಂದ ಮಂಗಳೂರು ಮಹಾನಗರ ಹಿಂದೆಂದೂ ಕಂಡರಿಯದ ಭೀಕರ ನೀರಿನ ಕೊರತೆ ಎದುರಿಸುವಂತಾಗಿತ್ತು. ತುಂಬೆ ಡ್ಯಾಂನಲ್ಲಿ ನೀರಿಲ್ಲದ ಪರಿಸ್ಥಿತಿ ಎದುರಾಗಿ, ನಗರದಲ್ಲಿ ಟ್ಯಾಂಕರ್ ನೀರು ಬಳಸಲಾಗಿತ್ತು. ಅದೂ ಖಾಲಿಯಾದಾಗ, ಖಾಸಗಿ ಬಾವಿಗಳಿಂದ ನೀರು ತರಿಸಲಾಗಿತ್ತು. ಅದೂ ಪೂರ್ಣ ವಾಗಿ ಸಾಧ್ಯವಾಗದಾಗ ಲಕ್ಯಾ ಡ್ಯಾಂ ನೀರನ್ನು ತರಿಸಲಾಗಿತ್ತು. ಇದರಿಂದ ಎಚ್ಚೆತ್ತ ಮಂಗಳೂರು ಪಾಲಿಕೆಯು 2017ರಲ್ಲಿ ಪ್ರತೀ 48 ಗಂಟೆ ನಿರಂತರ ನೀರು ಪೂರೈಕೆ ಮಾಡಿದರೆ, ಬಳಿಕದ 36 ಗಂಟೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ರೇಷನಿಂಗ್ ಆರಂಭಿಸಿತ್ತು.
ನೀರು ಮಿತವಾಗಿ ಬಳಸಿ
ಸಾರ್ವಜನಿಕರು ಮನೆಯಲ್ಲಿನ ಕೈತೋಟಗಳಿಗೆ ವಾಹನ ತೊಳೆಯಲು ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು. ತಗ್ಗು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿರುವ ಬಳಕೆ ದಾರರು ಕುಡಿಯುವ ನೀರನ್ನು ಮಿತವಾಗಿ ಬಳಸಿ, ಮನೆಯ ಗೇಟ್ ವಾಲ್Ì ಗಳನ್ನು ಬಂದ್ ಮಾಡಿ, ಎತ್ತರದ ಪ್ರದೇಶದಲ್ಲಿನ ಸಾರ್ವಜನಿಕರಿಗೆ ನೀರು ಪೂರೈಕೆಯಾಗುವಂತೆ ಸಹಕರಿಸುವಂತೆ ಮನಪಾ ಕೋರಿದೆ.
ಮಳೆ ಬರುವವರೆಗೂ ರೇಷನಿಂಗ್
ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಬಾರದೆಂಬ ಕಾರಣಕ್ಕೆ 4 ದಿನ ನೀರು ಪೂರೈಕೆ ಮಾಡಲಾಗುವುದು. ಬಳಿಕ 48 ಗಂಟೆಗಳ ಅವಧಿಯಲ್ಲಿ ನೀರು ಸರಬರಾಜು ಸ್ಥಗಿತಗೊಳಿಸಲಾಗುವುದು. ಮಳೆ ಬಂದು ನದಿಯಲ್ಲಿ ಒಳಹರಿವು ಕಾಣುವವರೆಗೂ ನೀರು ರೇಷ ನಿಂಗ್ ಮುಂದುವರಿಯಲಿದೆ.
- ನಾರಾಯಣಪ್ಪ,
ಆಯುಕ್ತರು, ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.