7 ವರ್ಷ ಬಳಿಕ ವಿಕಿಲೀಕ್ಸ್ ಸಂಸ್ಥಾಪಕ ಅಸಾಂಜ್ ಸೆರೆ
Team Udayavani, Apr 12, 2019, 6:00 AM IST
ಲಂಡನ್: ಕಳೆದ ಏಳು ವರ್ಷಗಳಿಂದಲೂ ಲಂಡನ್ನ ಈಕ್ವಡಾರ್ ರಾಯಭಾರ ಕಚೇರಿಯಲ್ಲಿ ವಾಸಿಸುತ್ತಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ರನ್ನು ಗುರುವಾರ ಬಂಧಿಸಲಾಗಿದೆ.
ಅಸಾಂಜ್ಗೆ ಈಕ್ವಡಾರ್ ಆಶ್ರಯ ಹಿಂಪಡೆದಿರುವ ಹಿನ್ನೆಲೆಯಲ್ಲಿ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು, 2012ರಲ್ಲಿ ಹೊರಡಿಸಲಾದ ವಾರಂಟ್ ಅಡಿಯಲ್ಲಿ ಬಂಧಿಸಲಾಗಿದೆ ಎಂದಿದ್ದಾರೆ. ಸ್ವೀಡನ್ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಅನಂತರ ದಲ್ಲಿ ಏಳು ವರ್ಷಗಳಿಂದಲೂ ಅವರು ಇಲ್ಲಿ ವಾಸವಾಗಿದ್ದರು. ಅಮೆರಿಕದ ಹಲವು ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸಿದ ಆರೋಪದ ಮೇಲೆ ತನ್ನನ್ನು ಅಮೆರಿಕ ಗಲ್ಲಿಗೇರಿಸುವ ಭೀತಿ ಮೂಡಿದೆ ಎಂದು ಅಸಾಂಜ್ ಆರೋಪಿಸಿದ್ದಾರೆ.
ಗುರುವಾರ ಲಂಡನ್ನ ಕೋರ್ಟ್, 2012ರಲ್ಲಿ ಜಾಮೀನು ಷರತ್ತು ಉಲ್ಲಂಘಿಸಿರುವ ಅಸ್ಸಾಂಜ್ಗೆ 12 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇನ್ನೊಂದೆಡೆ, ಕಂಪ್ಯೂಟರ್ ಹ್ಯಾಕ್ ಮಾಡಿ ಅಮೆರಿಕದ ಸೇನೆಯ ರಹಸ್ಯ ದಾಖಲೆ ಗಳನ್ನು ಬಹಿರಂಗ ಪಡಿಸಿರುವ ಆರೋಪ ಅಸಾಂಜ್ ಮೇಲಿದ್ದು, ಅದು ಸಾಬೀತಾದರೆ 5 ವರ್ಷಗಳ ಜೈಲು ಶಿಕ್ಷೆ ಎದುರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ವೀಡನ್ನಲ್ಲಿ ಈಗಾಗಲೇ ಇವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲಾಗಿದ್ದರೂ ವಾರಂಟ್ ನೀಡಿದರೂ ಹಾಜರಾಗದ ಹಾಗೂ ತಲೆಮರೆಸಿಕೊಂಡಿರುವ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಈಕ್ವಡಾರ್ ಅವರಿಗೆ ಆಶ್ರಯ ನೀಡಿದ್ದರಿಂದಾಗಿ, ರಾಯಭಾರ ಕಚೇರಿ ವ್ಯಾಪ್ತಿಯಲ್ಲಿ ಅವರನ್ನು ಬಂಧಿಸುವಂತಿರಲಿಲ್ಲ. ಆದರೆ ಈಗ ಈಕ್ವಡಾರ್ ತನ್ನ ನಿರ್ಧಾರವನ್ನು ಕೈಬಿಟ್ಟಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.