ರಫೇಲ್ ಡೀಲ್‌ನಲ್ಲಿ ಬಿಜೆಪಿ ಬಣ್ಣ ಬಯಲು
Team Udayavani, Apr 12, 2019, 6:23 AM IST
ಗದಗ: ಬಹುಕೋಟಿ ರಫೇಲ್ ಹಗರಣ ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇದೀಗ ಸ್ಪಷ್ಟತೆ ತೋರುತ್ತಿದೆ. ರಫೇಲ್ ಹಗರಣಕ್ಕೆ ಸಂಬಂಧಿಸಿ ಸೋರಿಕೆಯಾದ ದಾಖಲೆಗಳನ್ನು ತನಿಖೆಗೆ ಪರಿಶೀಲಿಸಬಹುದು ಎಂದು ಆದೇಶಿಸಿದ್ದು, ಬಿಜೆಪಿ
ಬಣ್ಣ ಬಯಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ರಫೇಲ್ ಹಗರಣ ಪ್ರಸ್ತಾಪವಾದಾಗಲೆಲ್ಲಾ ಬಿಜೆಪಿ ನಾಯಕರು ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ನೀಡಿದೆ ಎಂದು ಬೀಗುತ್ತಿದ್ದರು. ಆದರೆ, ಇದೀಗ ಅದೇ ಸುಪ್ರೀಂ ಕೋರ್ಟ್, ರಫೇಲ್ ವಿವಾದಕ್ಕೆ ಸಂಬಂಧಿಸಿ ಸೋರಿಕೆಯಾಗಿರುವ ದಾಖಲೆಗಳನ್ನು ವಿಚಾರಣೆಗೆ ಪರಿಗಣಿಸಬಹುದೆಮದು ಆದೇಶಿಸಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಗಳು ಮುಂದೊಮ್ಮೆ ಸಾಬೀತಾಗುವ ಸಾಧ್ಯತೆಗಳಿವೆ
ಎಂದರು.
ದೇಶದ ಯುವ ಜನರನ್ನು ಸೆಳೆಯುವ ಮೋದಿ ಸೇನಾ ಸಮವಸ್ತ್ರ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಮೂಲಕ ಚುನಾವಣಾ ಪಾವಿತ್ರ್ಯತೆ ಕಡಿಮೆ ಮಾಡಿದ್ದಾರೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.