ಲೋಕ ಚುನಾವಣೆಗೆ ಕುಂದಾಪುರ ಕ್ಷೇತ್ರ ಸನ್ನದ್ಧ: ಡಾ| ಮಧುಕೇಶ್ವರ


Team Udayavani, Apr 12, 2019, 6:30 AM IST

madhukeshwara

ಕುಂದಾಪುರ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಅದರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 97,689 ಪುರುಷರು, 1,05,582 ಮಹಿಳೆಯರು ಹಾಗೂ 2 ತೃತೀಯ ಲಿಂಗಿ ಮತದಾರರಿರುತ್ತಾರೆ. ಈ ಪೈಕಿ 2,141 ಅಂಗವಿಕಲ ಮತದಾರರಿದ್ದಾರೆ ಎಂದು ಕುಂದಾಪುರ ಸಹಾಯಕ ಕಮಿಷನರ್‌, ಸಹಾಯಕ ಚುನಾವಣ ಅಧಿಕಾರಿ ಡಾ| ಎಸ್‌.ಎಸ್‌. ಮಧುಕೇಶ್ವರ್‌ ತಿಳಿಸಿದ್ದಾರೆ.

ಮತಗಟ್ಟೆ ವಿವರ
ಒಟ್ಟು 222 ಮತಗಟ್ಟೆಗಳಿದ್ದು, ಕುಂದಾಪುರ ಹೋಬಳಿಯಲ್ಲಿ 33, ಕೋಟ ಹೋಬಳಿಯಲ್ಲಿ 89 ಮತಗಟ್ಟೆಗಳಿವೆ. 64 ಸೂಕ್ಷ್ಮ ಮತಗಟ್ಟೆಗಳಿದ್ದು, 30 ಮತಗಟ್ಟೆಗಳನ್ನು ವಲ್ನರೇಬಲ್‌ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. 4 ಮತಗಟ್ಟೆಗಳು ಸಖೀ ಮತಗಟ್ಟೆಗಳಾಗಿದ್ದು, ಅಲ್ಲಿ ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸುತ್ತಾರೆ. ಒಂದು ಮತಗಟ್ಟೆಯು ಅಂಗವಿಕಲರ ಮತಗಟ್ಟೆಯಾಗಿದ್ದು, ಅಲ್ಲಿ ಅಂಗವಿಕಲ ಸಿಬಂದಿಯಿರುತ್ತಾರೆ. ಕೊರಗ ಸಮುದಾಯ ಹೆಚ್ಚಿಗೆ ಇರುವ ಒಂದು ಮತಗಟ್ಟೆಯನ್ನು ಕೊರಗ ಸಂಪ್ರದಾಯ ಬಿಂಬಿಸುವ ಉದ್ದೇಶಕ್ಕಾಗಿ ಎಥಿ°ಕಲ್‌ ಮತಗಟ್ಟೆಯಾಗಿ ಗುರುತಿಸಲಾಗಿದೆ.

ಮತಗಟ್ಟೆಗಳಲ್ಲಿ ಅಂಗವಿಕಲ ಮತದಾರರ ಅನುಕೂಲಕ್ಕಾಗಿ ಸೂಕ್ತ ರ್‍ಯಾಂಪ್‌, ಗಾಲಿ ಕುರ್ಚಿ ವ್ಯವಸ್ಥೆ ಮತ್ತು ದೃಷ್ಟಿಮಾಂದ್ಯರಿಗೆ ಭೂತಗನ್ನಡಿ, ಎಲ್ಲ ಮತದಾರರಿಗೆ ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಪೇಕ್ಷೆಪಟ್ಟ ನಡೆದಾಡಲು ಬಾರದ ಅಂಗವಿಕಲರಿಗೆ ಮನೆಯಿಂದ ಮತಗಟ್ಟೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆಯ್ದ 26 ಮತಗಟ್ಟೆಗಳ ವೀಡಿಯೋ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ.

ಚುನಾವಣ ಸಿಬಂದಿ
ಕಾದಿರಿಸಿದ ಸಿಬಂದಿ ಸೇರಿ ಅಧ್ಯûಾಧಿಕಾರಿಗಳು 238, ಸಹಾಯಕ ಅಧ್ಯûಾಧಿಕಾರಿ 238, ಪೋಲಿಂಗ್‌ ಆಫೀಸರ್‌ 546 ಒಟ್ಟು 1,022 ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ಸಿಬಂದಿಗೆ ಈಗಾಗಲೇ ಎರಡು ಹಂತದಲ್ಲಿ ತರಬೇತಿ ನೀಡಿ ಸನ್ನದ್ಧಗೊಳಿಸಲಾಗಿದೆ.

ಸಿಬಂದಿಗೆ ಸಾರಿಗೆ ವ್ಯವಸ್ಥೆ
ಚುನಾವಣ ಪ್ರಕ್ರಿಯೆಯಲ್ಲಿ ನಿಯೋಜಿತ ಅಧಿಕಾರಿ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ವಾಹನ ಸೌಲಭ್ಯ ಮಾಡಲಾಗಿದ್ದು, ಇದಕ್ಕಾಗಿ 37 ಬಸ್‌ಗಳು, 28 ವ್ಯಾನ್‌ಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಹೊರ ತಾಲೂಕುಗಳಿಂದ ಆಗಮಿಸುವ ಸಿಬಂದಿಗೆ ಆಯಾ ತಾಲೂಕು ಕೇಂದ್ರಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.

ಮತಯಂತ್ರಗಳ ತಯಾರಿ
ಚುನಾವಣ ಅಂತಿಮ ಕಣದಲ್ಲಿರುವ 12 ಅಭ್ಯರ್ಥಿಗಳ ಕ್ಯಾಂಡಿಡೇಟ್‌ ಸೆಟ್ಟಿಂಗ್‌ ಕಾರ್ಯವನ್ನು ಎ. 10ರಂದು ಭಂಡಾರ್‌ಕಾರ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ವಿವಿಧ ರಾಜಕೀಯ ಪಕ್ಷಗಳ ಏಜೆಂಟ್‌ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸಿ, ಭದ್ರತಾ ಕೊಠಡಿ ಯಲ್ಲಿ ಬಿಗು ಆರಕ್ಷಕ ಬಂದೋಬಸ್ತಿನೊಂದಿಗೆ ದಾಸ್ತಾನು ಇರಿಸಲಾಗಿದೆ.

ಚುನಾವಣ ಭದ್ರತೆ
ರಕ್ಷಣಾ ತುಕಡಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, ವಿಶೇಷವಾಗಿ ವನ್ಯಮೃಗಗಳ ಉಪಟಳವಿರುವಲ್ಲಿ ಅಗತ್ಯ ಅರಣ್ಯ ಇಲಾಖೆಯ ರಕ್ಷಣಾ ತಂಡವನ್ನು ಹಾಗೂ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಅರೆಸೇನಾ ಭದ್ರತಾ ಪಡೆಗಳನ್ನು ಬಳಸಿಕೊಳ್ಳಲಾಗಿದೆ.

ಚುನಾವಣ ಸಂಬಂಧ ಮಸ್ಟರಿಂಗ್‌ ಕಾರ್ಯವನ್ನು ಎ. 17ರಂದು ಹಾಗೂ ಡಿಮಸ್ಟರಿಂಗ್‌ ಕಾರ್ಯವನ್ನು ಎ. 18ರಂದು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ
ಒಟ್ಟು 17 ರೆವಿನ್ಯೂ ಸೆಕ್ಟರ್‌ ಅಧಿಕಾರಿಗಳ, 30 ಪೊಲೀಸ್‌ ಇನ್‌ಸ್ಪೆಕ್ಟರ್‌ ಅಧಿಕಾರಿಗಳ ತಂಡ ರಚಿಸಲಾಗಿದೆ. ಕ್ಷೇತ್ರದಲ್ಲಿ 3 ಫ್ಲೆ„ಯಿಂಗ್‌ ಸ್ಕ್ವಾಡ್‌ ತಂಡ ರಚಿಸಲಾಗಿದ್ದು, ಪ್ರತಿ ತಂಡದಲ್ಲೂ ತಲಾ 3 ಅಧಿಕಾರಿಗಳಂತೆ ಒಟ್ಟು 9 ಅಧಿಕಾರಿಗಳಿದ್ದಾರೆ. ಈ ತಂಡವು 24×7 ರಂತೆ ಕಾರ್ಯಾ ಚರಿಸುತ್ತದೆ. ತಂಡದಲ್ಲಿ ಒಬ್ಬ ಅಧಿಕಾರಿ ಪೊಲೀಸ್‌ ಹಾಗೂ ವೀಡಿಯೋ ಗ್ರಾಫರ್‌ ಒಳಗೊಂಡಿ ರುತ್ತಾರೆ. ಕ್ಷೇತ್ರದಲ್ಲಿ ವೀಡಿಯೋ ಸರ್ವೆಲೈನ್ಸ್‌ ತಂಡಗಳನ್ನು ರಚಿಸಲಾಗಿದ್ದು, ಈ ತಂಡದಲ್ಲೂ ಸಹ ಒಬ್ಬ ಅಧಿಕಾರಿ, ಪೊಲೀಸ್‌ ಹಾಗೂ ವೀಡಿಯೋ ಗ್ರಾಫರ್‌ ಒಳಗೊಂಡಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಕಚೇರಿಯಲ್ಲಿ ಒಂದು ವೀಡಿಯೋ ವ್ಯೂವಿಂಗ್‌ ತಂಡವನ್ನು ರಚಿಸಲಾಗಿದೆ. 24×7 ಮಾದರಿಯಲ್ಲಿ ಕಂಟ್ರೋಲ್‌ ರೂಂ (08254-298058) ಹಾಗೂ ಟೋಲ್‌ ಫ್ರೀ ನಂಬರ್‌ 1950 ನ್ನು ತೆರೆಯಲಾಗಿದೆ. ಏಕ ಗವಾಕ್ಷಿ ತೆರೆಯಲಾಗಿದ್ದು, ಇದರಲ್ಲಿ ವಿವಿಧ ಸಭೆ/ ಸಮಾರಂಭಗಳನ್ನು ನಡೆಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ನಿಯಮಾನುಸಾರ ಅನುಮತಿ ನೀಡಲಾಗುತ್ತದೆ. ಲೆಕ್ಕ ಪತ್ರ ಪರಿಶೀಲನೆ ತಂಡವನ್ನು ರಚಿಸಲಾಗಿದೆ. ಚುನಾವಣ ಆಯೋಗ ಬಿಡುಗಡೆ ಮಾಡಿದ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ಸಲ್ಲಿಸಲು ಸೀವಿಜಿಲ್‌ ಮೊಬೈಲ್‌ ಆ್ಯಪ್‌ ಇದೆ.

ಮತದಾನ ಜಾಗೃತಿ
ಪ್ರತಿ ಗ್ರಾಮದ‌ಲ್ಲಿ ಸಂಘ ಸಂಸ್ಥೆಗಳು ಹಾಗೂ ವಿವಿಧ ಅಧಿಕಾರಿಗಳ ತಂಡಗಳ ಮೂಲಕ ಮತದಾನ ಜಾಗೃತಿ ಮಾಡಲಾಗಿದೆ. ಅರ್ಹ ಮತದಾರರಿಗೆ ಭಾವಚಿತ್ರವಿರುವ ವೋಟರ್‌ ಸ್ಲಿಪ್‌ ಹಾಗೂ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡವರಿಗೆ ಮತದಾರರ ಗುರುತು ಚೀಟಿ ಹಂಚುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮತದಾನದ ಪ್ರಕ್ರಿಯೆಯಲ್ಲಿ ಬಿಎಲ್‌ಒ ಅವರು ನೀಡಿದ ವೋಟರ್‌ಸ್ಲಿಪ್‌ಅನ್ನು ಗುರುತುಚೀಟಿ (ಎಪಿಕ್‌) ಹಾಗೂ ಚುನಾವಣ ಆಯೋಗ ನಿರ್ದೇಶಿಸಿದ ಇನ್ನಿತರ 11 ದಾಖಲೆಗಳನ್ನು ಬಳಸಿ ಪಾಲ್ಗೊಳ್ಳುವಂತೆ ಸಲಹೆ ನೀಡಲಾಗಿದೆ.

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Road Mishap: ಅಂಪಾರು ತಲಕಲ್‌ಗುಡ್ಡೆ: ಬೈಕ್‌ ಸ್ಕಿಡ್‌; ಸವಾರ ಸಾವು

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

5

Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.