ಯಾವ ಅಂಶವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುತ್ತೀರಿ?
Team Udayavani, Apr 12, 2019, 11:27 AM IST
ನಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಇಲ್ಲಿನ ಜನರೊಂದಿಗೆ ಆ ಅಭ್ಯರ್ಥಿ ಹೊಂದಿರುವ ಒಡನಾಟವನ್ನು ಗಮನದಲ್ಲಿಟ್ಟು
ಕೊಂಡು ಮತ ಹಾಕುವೆ.
● ಮುನಿ, ಆರ್.ಟಿ.ನಗರ ನಿವಾಸಿ
ಭಾರತಕ್ಕೆ ವಿಶ್ವ ಮಟ್ಟದಲ್ಲಿ ಸ್ಥಾನ ದೊರಕಿಸುವವರಿಗೆ ನನ್ನ ಮತ. ದೇಶವನ್ನು ಉಗ್ರಗಾಮಿಗಳಿಂದ ರಕ್ಷಿಸುವ ಸಂಕಲ್ಪ ಹೊಂದಿದವರು ನನ್ನ ಆಯ್ಕೆ.
● ಪವನ್.ಎ.ಎಸ್, ವಿದ್ಯಾರ್ಥಿ
ಪಕ್ಷ ಮತ್ತು ಸಿದ್ಧಾಂತವನ್ನು ಗಮನದಲ್ಲಿರಿಸಿಕೊಂಡು ಮತ ಚಲಾವಣೆ ಮಾಡುತ್ತೇನೆ. ಯುವ ಪೀಳಿಗೆಗೆ ಆದ್ಯತೆ ನೀಡಿ, ಅವರಿಗೂ ಮಹತ್ತರ ಜವಾಬ್ದಾರಿ ನೀಡಿದ ಪಕ್ಷಕ್ಕೆ ಓಟ್ ಹಾಕಲು ನಿರ್ಧರಿಸಿದ್ದೇನೆ.
● ಸಾಗರ್, ಐಟಿಐ ವಿದ್ಯಾರ್ಥಿ
ದೇಶದ ಆಡಳಿತ ಸಮ್ಮಿಶ್ರ ಸರ್ಕಾರದ ಕೈಯಲ್ಲಿದ್ದರೆ ಎತ್ತು ಎರಿಗೆ ಎಳೆದರೆ ಕೋಣ ನೀರಿಗೆ ಎಳೆದಂತೆ ಆಗಲಿದೆ. ಪೂರ್ಣ ಬಹುಮತವಿರುವ ಪಕ್ಷ ಆಡಳಿತಕ್ಕೆ ಬರಬೇಕು. ಹೀಗಾಗಿ ಪಕ್ಷ ನೋಡಿ ಓಟ್ ಮಾಡುವೆ.
● ಅರ್ಜುನ್, ರೇಷ್ಮೆ ಸೀರೆ ವ್ಯಾಪಾರಿ
ಕಾವೇರಿ, ಗಡಿ ವಿವಾದ ಹಾಗೂ ಕನ್ನಡ ಭಾಷೆ ವಿಷಯದ ಬಗ್ಗೆ ಪಕ್ಷಗಳ ನಿಲುವು ಗಮನಿಸಿ ಮತ ಚಲಾವಣೆ ಮಾಡಲಾಗುವುದು. ಕೇಂದ್ರದಲ್ಲಿ ರಾಜ್ಯದ ಪರವಾಗಿ ಮಾತನಾಡುವವರಿಗೆ ನನ್ನ ಮತ.
● ದಕ್ಷಿಣಾಮೂರ್ತಿ, ಕಲಾವಿದ
ಇದು ದೇಶದ ಸಮರ್ಥ ನಾಯಕ ನನ್ನು ಆಯ್ಕೆ ಮಾಡುವ ಸಮಯ. ಹಾಗಾಗಿ ರಾಷ್ಟ್ರೀಯ ವಿಷಯಗಳಲ್ಲಿ ನಾಯಕರು ನಡೆದುಕೊಂಡ ರೀತಿಯನ್ನು ಗಮನಿಸಿ ಮತ ಚಲಾವಣೆ ಮಾಡಲಾಗುವುದು.
● ಶಿವಾನಂದ ಕೆ. ಬಡಿಗೇರ್, ಶಿಕ್ಷಕ
ರಾಷ್ಟ್ರೀಯ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕೈಕೊಂಡ ನಿರ್ಧಾರ ಹಾಗೂ ಈ ಬಗ್ಗೆ ವಿರೋಧ ಪಕ್ಷಗಳು ಚರ್ಚಿಸಿದ ರೀತಿ ಗಮನಿಸಿ ಓಟ್ ಮಾಡಿದರೆ ದೇಶಕ್ಕೆ ಉತ್ತಮ ನಾಯಕರು ದೊರೆಯುತ್ತಾರೆ.
● ಲಾವಣ್ಯ, ಖಾಸಗಿ ಕಂಪನಿ ಉದ್ಯೋಗಿ
ಅಭ್ಯರ್ಥಿಗಳು ಸ್ಥಳೀಯ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಿದ್ದಾರೆ, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಯಾವೆಲ್ಲಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂಬು ದನ್ನು ನೋಡಿ ಓಟ್ ಮಾಡುವೆ.
● ಲಕ್ಷ್ಮೀ, ಹೊರಗುತ್ತಿಗೆ ಸಿಬ್ಬಂದಿ
ಮೊದಲು ನನ್ನ ಕ್ಷೇತ್ರದ ಅಭ್ಯರ್ಥಿ, ನಂತರ ರಾಜ್ಯ ಮತ್ತು ರಾಷ್ಟ್ರ. ಸಂಸ ದರು ತಾವು ಪ್ರತಿನಿಧಿಸಿದ ಕ್ಷೇತ್ರದ ಅಭಿವೃದ್ಧಿಯನ್ನು ಯಾವ ರೀತಿ ಮಾಡಿದ್ದಾರೆ ಎಂದು ಗಮನಿಸಿ ಅಭ್ಯರ್ಥಿಗೆ ಮತ ಹಾಕಲಾಗುವುದು.
● ಆಯಿಷಾ, ಹೊರಗುತ್ತಿಗೆ ಸಿಬ್ಬಂದಿ
ಕಳಂಕರಹಿತ, ಭ್ರಷ್ಟಚಾರ ರಹಿತ ಶುದ್ಧ ವ್ಯಕ್ತಿಗೆ ಮತ ಈ ಬಾರಿ ನನ್ನ ಮತ ಮೀಸಲಿರಲಿದೆ. ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ಸಿಗುವಂತೆ ಮಾಡುವವರಿಗೆ ಓಟ್ ಮಾಡಲಾಗುವುದು.
● ವಿಭಾ, ಖಾಸಗಿ ಸಂಸ್ಥೆ ಉದ್ಯೋಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.