ಅಚ್ಛೇ ದಿನ್ ಬಂದಿದ್ದು ಶ್ರೀಮಂತರಿಗೆ ಮಾತ್ರ: ಈಶ್ವರ ಖಂಡ್ರೆ
ಬೋಗಸ್ ಜನತಾ ಪಕ್ಷ ಬುಡಸಮೇತ ಕಿತ್ತು ಹಾಕಿ
Team Udayavani, Apr 12, 2019, 2:55 PM IST
ಚಿಂಚೋಳಿ: ಕುಂಚಾವರಂ ಗ್ರಾಮದಲ್ಲಿ ಗುರುವಾರ ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಸಚಿವ ರಹೀಮಖಾನ್, ಪಿ.ಟಿ. ಪರಮೇಶ್ವರ ನಾಯಕ, ರಾಜಶೇಖರ ಪಾಟೀಲ, ಮಾಜಿ ಸಚಿವ ಬಾಬುರಾವ ಚವ್ಹಾಣ, ರೇವುನಾಯಕ ಬೆಳಮಗಿ, ಸುಭಾಷ ರಾಠೊಡ ಇನ್ನಿತರರಿದ್ದರು.
ಚಿಂಚೋಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಅಚ್ಛೇ ದಿನ್ ಕೇವಲ ಶ್ರೀಮಂತರಿಗೆ ಮಾತ್ರ ಬಂದಿದ್ದು, ಬಡವರಿಗೆ ಅಚ್ಛೇ ದಿನ್ ಬರಲೇ ಇಲ್ಲ ಎಂದು ಬೀದರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ(ಐ) ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ತಾಲೂಕಿನ ಕುಂಚಾವರಂ, ಚಿಮ್ಮನಚೋಡ, ಸಾಲೇಬೀರನಳ್ಳಿ, ಕೋಡ್ಲಿ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶ ಮತ್ತು ಚುನಾವಣಾ ಪ್ರಚಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾವಿರಾರು ಕೋಟಿ ರೂ. ಸಾಲ ಪಡೆದು ವಿಜಯ ಮಲ್ಯಾ, ನೀರವ ಮೋದಿ ದೇಶವನ್ನು ಬಿಟ್ಟು ವಿದೇಶಕ್ಕೆ ಓಡಿ ಹೋದಾಗ ಚೌಕಿದಾರ್ ಎಲ್ಲಿಗೆ ಹೋಗಿದ್ದರು? ಬಿಜೆಪಿ ಜಾತಿ ಮತ್ತು ಧರ್ಮಗಳ ಮಧ್ಯೆ ಕೋಮುವಾದಿ ಹುಟ್ಟಿಸುತ್ತಿದೆ. ಇಂತಹ (ಬಿಜೆಪಿ)ಬೋಗಸ್ ಜನತಾ ಪಕ್ಷವನ್ನು ದೇಶದಲ್ಲಿ ಬುಡ ಸಮೇತ ಕಿತ್ತು ಹಾಕಬೇಕೆಂದು ಕರೆ ನೀಡಿದರು.
ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿದೆ. ಆದರೆ ಬಿಜೆಪಿ ಅದರ ಪಾಲನೆ ಪೋಷಣೆ ಮಾಡುತ್ತಿಲ್ಲ. ದೇಶದ ಅಖಂಡತೆಗಾಗಿ ಮತ್ತು ಏಕತೆಗಾಗಿ ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ತಮ್ಮ ಜೀವ ತ್ಯಾಗ ಮಾಡಿದ್ದಾರೆ. ಎಲ್ಲ ಜಾತಿ, ಧರ್ಮ ಉದ್ಧಾರ ಸರ್ವರ ಕಲ್ಯಾಣ ಮಾಡುವುದು ಕಾಂಗ್ರೆಸ್ ಪಕ್ಷದ ಮಂತ್ರವಾಗಿದೆ. ಆದರೆ ಬಿಜೆಪಿ ಧರ್ಮ ಮತ್ತು ಜಾತಿಗಳಲ್ಲಿ ಭೇದ ಮಾಡುತ್ತಿದೆ ಇಂತಹ ಪಕ್ಷವನ್ನು ಬೆಂಬಲಿಸಬಾರದು ಎಂದರು.
ಬಿಜೆಪಿ ಅಧಿಕಾರದಲ್ಲಿ ಕೇವಲ ಶ್ರೀಮಂತರ ಕೆಲಸಗಳಾಗಿವೆ. ಬಡವರ ಉದ್ಧಾರ ಆಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದೆ. ರೈತರ ಸಾಲ ಮನ್ನಾ ಮಾಡಲಾಗಿದೆ. ಸಮ್ಮಿಶ್ರ ಸರಕಾರದಲ್ಲಿಯೂ ರೈತರ ಸಾಲ ಮಾಡಲಾಗಿದೆ. ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿಲ್ಲ. ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲವೆಂದು ಟೀಕಿಸಿದರು. ಚಿಂಚೋಳಿ ತಾಲೂಕಿನ ಕುಂಚಾವರಂ, ಚಿಮ್ಮನಚೋಡ, ಚಿಂಚೋಳಿಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇಲ್ಲಿನ ಕಬ್ಬು ಬೆಳೆಗಾರರು
ಕಬ್ಬು ಮಾರಾಟ ಮಾಡಿಕೊಳ್ಳುವುದಕ್ಕಾಗಿ ಸಹಕಾರಿ ಸಕ್ಕರೆ ಕಾರ್ಖಾನೆ ಇಲ್ಲವೆ ಖಾಸಗಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು ಹಲವು ವರ್ಷಗಳ ಬೇಡಿಕೆ ಇದೆ. ಇದರ ಬಗ್ಗೆ ಪ್ರಯತ್ನಿಸುವುದಾಗಿ ಹೇಳಿದರು. ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಬೀದರ ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. 2014ರಲ್ಲಿ ಕೇವಲ ಮೋದಿ ಅವರ ಗಾಳಿಯಲ್ಲಿ ಇವರು ಗೆಲುವು ಕಂಡಿದ್ದಾರೆ. ಈಗ ಮೋದಿ ಗಾಳಿಯೂ ಇಲ್ಲ, ಅಲೆಯೂ ಇಲ್ಲ ಎಂದರು.
ಸಚಿವ ಪಿ.ಟಿ. ಪರಮೇಶ್ವರ ನಾಯಕ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ ಪಕ್ಷದ ಅಧಿ ಕಾರ ಅವಧಿ ಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ, ಮನಸ್ವಿನಿ, ಮಾತೃಪೂರ್ಣ ಯೋಜನೆ, ಬಡವರಿಗೆ 30ಕೆಜಿ ಅಕ್ಕಿ ಉಚಿತವಾಗಿ ನೀಡಿದ್ದಾರೆ ಎಂದು ಹೇಳಿದರು. ಮಾಜಿ ಶಾಸಕ ಡಾ| ಉಮೇಶ ಜಾಧವ ಅವರಿಗೆ ಕಾಂಗ್ರೆಸ ಪಕ್ಷ ಸಾಕಷ್ಟು ಅವಕಾಶ ನೀಡಿತ್ತು. ಅವರು ಅಧಿಕಾರ ಆಸೆಗಾಗಿ ಬೇರೆ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಅವರ ಭವಿಷ್ಯ ಅವರೇ ಹಾಳು ಮಾಡಿಕೊಳ್ಳಲಿದ್ದಾರೆ ಎಂದರು.
ಮಾಜಿ ಸಚಿವ ರೇವು ನಾಯಕ ಬೆಳಮಗಿ ಮಾತನಾಡಿ, ನನಗೆ ಬಿಜೆಪಿಯಿಂದ ಸ್ಪ ರ್ಧಿಸಲು ಟಿಕೆಟ ವಂಚಿತಗೊಳಿಸುವಲ್ಲಿ ಬೀದರ ಸಂಸದ ಭಗವಂತ ಖೂಬಾ ಪಾತ್ರ ದೊಡ್ಡದಾಗಿದೆ ಎಂದರು.
ಸಮಾವೇಶದಲ್ಲಿ ಸಚಿವ ರಹೀಮ ಖಾನ್, ಜೇವರ್ಗಿ ಶಾಸಕ ಡಾ| ಅಜಯಸಿಂಗ್, ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ, ಮಾಜಿ ಶಾಸಕ ಕೈಲಾಶನಾಥ ಪಾಟೀಲ ಪ್ರಚಾರ ಭಾಷಣ ಮಾಡಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ, ಸುಭಾಷ ರಾಠೊಡ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಜಿಪಂ ಸದಸ್ಯ ಗೌತಮ ಪಾಟೀಲ, ಭೀಮರಾವ ಟಿ.ಟಿ, ಬಸಯ್ಯ ಗುತ್ತೇದಾರ, ಮಹೆಮೂದ ಪಟೇಲ್, ಚಿರಂಜೀವಿ, ನರಸಿಂಹಲು ಕುಂಬಾರ, ಗೋಪಾಲರಾವ ಕಟ್ಟಿಮನಿ, ಭೀಮರಾವ ತುಮ್ಮ, ಬೀದರ ಜಿಲ್ಲಾ ಕಾಂಗ್ರೆಸ್ ಮುಖಂಡ ಬಸವರಾಜ ಜಾಬಶೆಟ್ಟಿ, ರಾಮಶೆಟ್ಟಿ ಪವಾರ, ಗೋಪಾಲರೆಡ್ಡಿ ಕಸ್ತೂರಿ, ಕೆ.ಎಂ. ಬಾರಿ, ಬಸವರಾಜ ಮಲಿ, ಸವಿತಾ ಸಜ್ಜನ ಇನ್ನಿತರರಿದ್ದರು. ತಾಲೂಕು ಬ್ಲಾಕ ಕಾಂಗ್ರೆಸ್ ಕಮಟಿ ಅಧ್ಯಕ್ಷ ಅನೀಲಕುಮಾರ ಜಮಾದಾರ ಸ್ವಾಗತಿಸಿದರು, ಆರ್. ಗಣಪತರಾವ ವಂದಿಸಿದರು.
ಗೂಂಡಾಗಿರಿ ಬಿಟ್ಟುಬಿಡಿ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಗ್ಧ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಲಬುರಗಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಅವರಿಗೆ ಸೋಲಿನ ನಡುಕ ಶುರುವಾಗಿದೆ. ಅದಕ್ಕಾಗಿ ಪ್ರಚಾರಕ್ಕೆ ಹೋದವರ ಮೇಲೆ ಗೂಂಡಾಗಿರಿ ಜನರಿಂದ ಅಡ್ಡಿಪಡಿಸುತ್ತಿದ್ದಾರೆ. ಇದು ರಾಜಕೀಯ ಜೀವನಕ್ಕೆ ಶೋಭೆ ತರುವಂತಹದಲ್ಲ. ನಾನು 2009 ಮತ್ತು 2014ರಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಪರಸ್ಪರ ಎದುರಾಳಿ ಆಗಿದ್ದರೂ ಖರ್ಗೆ ಅವರನ್ನು ಮನೆಗೆ ಕರೆದುಕೊಂಡು ಚಹಾ ಉಪಹಾರ ಮಾಡಿಸಿದ್ದೇನೆ. ಆದರೆ ಯಾವುದೇ ಗೂಂಡಾಗಿರಿ ಮಾಡಿಲ್ಲ. ಬಿಜೆಪಿಯವರು ಗೂಂಡಾಗಿರಿ ಬಿಟ್ಟು ಬಿಡಿ.
ರೇವು ನಾಯಕ ಬೆಳಮಗಿ,
ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.