ಕಾಸರಗೋಡು ಜಿಲ್ಲೆಯಲ್ಲಿ ಬಿಸಿಲಲ್ಲಿ ನರ್ತಿಸುವ ಹಳದಿ ಚೆಲುವೆ.


Team Udayavani, Apr 12, 2019, 5:54 PM IST

yekllo

ಬದಿಯಡ್ಕ : ಬಿಸಿಲಿನ ಝಳ ಜನರನ್ನು ಕಂಗೆಡಿಸಿ ಗಿಡ ಮರ ಬಳ್ಳಿಗಳು ಮುದುಡುವಂತೆ ಮಾಡಿದರೂ ಇದು ಯಾವುದರ ಪರಿವೇ ಇಲ್ಲದೆ ಬೀಸುವ ಗಾಳಿಯಲಿ ತೇಲಾಡುವ ಹಳದಿ ಹೂಗಳ ಗೊಂಚಲು. ಕಣ್ಣಿಗೂ ಮನಸಿಗೂ ತಂಪು ನೀಡುತ್ತದೆ. ವಿಷು ಹಬ್ಬವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧರಾಗಿ ಮರದ ತುಂಬಾ ಗೊಂಚಲು ಗೊಂಚಲಾಗಿ ಅರಳಿರುವ ಕೊನ್ನೆ ಹೂಗಳ ಅಕರ್ಷಣೆಗೆ ಸಾಟಿಯಿಲ್ಲ.

ಹೀಗೊಂದು ಕತೆ
ಐಶ್ವರ್ಯ ದೇವತೆಯಾಗಿ ಭೂಮಿಗಾಗಮಿಸಿದ ಲಕ್ಷ್ಮಿà ದೇವಿಯು ಬಿಸಿಲಿನ ಬೇಗೆ ತಡೆಯಲಾಗದೆ ವಿಶ್ರಾಂತಿಗಾಗಿ ಪಕ್ಕದಲ್ಲಿರುವ ಮರವನ್ನು ಆಶ್ರಯಿಸಿದಳಂತೆ. ತನಗೆ ನೆರಳಿತ್ತ ವೃಕ್ಷವನ್ನು ಪ್ರೀತಿಯಿಂದ ದೇವಿ ಸ್ಪರ್ಶಿಸಲು ತಕ್ಷಣ ಮರದ ತುಂಬಾ ಚಿನ್ನದ ಬಣ್ಣದ ಹೂಗಳು ಅರಳಿದುವಂತೆ. ಆದುದರಿಂದಲೇ ಬಿಸಿಲಲ್ಲೂ ಈ ಹೂವು ಸುಂದರವಾಗಿ ಶೋಭಿಸುವುದು ಮಾತ್ರವಲ್ಲದೆ ಐಶ್ವರ್ಯದ ದ್ಯೋತಕವೂ ಆಗಿರುವುದು ಎಂದು ಬಲ್ಲವರು ಹೇಳುತ್ತಾರೆ.

ರಾಷ್ಟ್ರ-ರಾಜ್ಯ ಪುಷ್ಪ.
ಕಕ್ಕೆ ಹೂವು, ಸ್ವರ್ಣ ಪುಷ್ಪ ಎಂದೆಲ್ಲ ಕರೆಯಲ್ಪಡುವ ಕೊನ್ನೆ ಹೂವು ಥೆ„ಲಾಂಡ್‌ ದೇಶದ ರಾಷ್ಟ್ರೀಯ ಪುಷ್ಪ ಹಾಗೂ ಕೇರಳದ ರಾಜ್ಯ ಪುಪುಷ್ಪವಾಗಿದೆ. ವರ್ಷದ ಒಂದೆರಡು ತಿಂಗಳು ಮಾತ್ರ ಅರಳಿ ನಗುವ ಕೊನ್ನೆ ಶಿವನಿಗೆ ಪ್ರಿಯ.

ಔಷಧೀಯ ಸಸ್ಯ
ಕೊನ್ನೆ ಮರದ ಹೂ ಮತ್ತು ಕಾಯಿ ಎರಡೂ ಔಷಧೀಯ ಗುಣ ಹೊಂದಿದ್ದು ವಾತ ಸಂಬಂಧಿ ರೋಗಗಳಿಗೆ ಹೆಚ್ಚಾಗಿ ಬಳಕೆಯಾಗುತ್ತದೆ. ಮರದ ತೊಗಟೆಯು ಚರ್ಮ ಹದಮಾಡಲು ಉಪಯೋಗಿಸಲಾಗುತ್ತದೆ. ಚಿಗುರಿನೊಂದಿಗೆ ಜೋತಾಡುವ ಉದ್ದನೆಯ ಹಳದಿ ಬಣ್ಣದ ಹೂಗೊಂಚಲುಗಳು, ಸುಮಾರು ಎರಡು ಮೀಟರು ಉದ್ದದ ಕಂದುಬಣ್ಣದ ಕಾಯಿಗಳು ಈ ಮರದ ತುಂಬಾ ಜೋತಾಡುತ್ತಿರುತ್ತದೆ.


ವಿಷು ಕಣಿಯಲ್ಲಿ ಪ್ರಧಾನ ಆಕರ್ಷಣೆಯಾಗಿರುವ ಕೊನ್ನೆ ಹೂಗಳನ್ನು ವಿಷು ಹತ್ತಿರಾದಂತೆ ಮಾರುಕಟ್ಟೆಗಳಲ್ಲಿ ಮಾರಾಟಕ್ಕಿಡುತ್ತಾರೆ. ಪೇಟೆಯಲ್ಲಿ ವಾಸಿಸುವ ಜನರಿಗೆ ಈ ಹೂವು ಸುಲಭವಾಗಿ ಲಭ್ಯವಾಗದೇ ಇರುವುದರಿ ಂದ ಮಾರುಕಟ್ಟೆಯಲ್ಲಿ ಒಂದು ಗೊಂಚಲಿಗೆ 50-100 ರೂಗೆ ಮಾರಾಟವಾಗುತ್ತದೆ.

ಮೀನ ಮಾಸ ಅರ್ಧದಲ್ಲಿ ಸುವರ್ಣ ನಕ್ಷತ್ರಗಳಂತೆ ಮರದ ರೆಂಬೆಗಳನ್ನು ಅಲಂಕರಿಸುವ ಈ ಹೂಗಳು ಪ್ರತಿವರ್ಷ ಬೆಸಗೆಯಲ್ಲಿ ಅರಳುತ್ತವೆ. ಕಾಲ ಬದಲಾದರೂ ಆಚರಣೆಗಳು ಮಹತ್ವ ಕಳೆದುಕೊಂಡರೂ, ವಿಷುವಿನ ಸಮƒದ್ಧಿಯ ಹಿರಿಮೆ ಗತಕಾಲ ಸೇರುವ ದಿನ ದೂರವಿಲ್ಲ ಎನ್ನುವಾಗಲೂ ಪ್ರಕೃತಿ ಮಾತ್ರ ಎಲ್ಲವನ್ನೂ ಒಡಲಲ್ಲಿ ಮುಚ್ಚಿಟ್ಟು ಕಾಲ ಕಾಲಕ್ಕೆ ತೆರೆದಿಡುವ, ಹಬ್ಬ ಹರಿದಿನಗಳನ್ನು ನೆನಪಿಸುವ ಕಾರ್ಯ ಮಾಡುತ್ತಲೇ ಇದೆ.


ನಮ್ಮ ವಿಶಿಷ್ಟವಾದ ಸಂಪದ್ಭರಿತವಾದ ಆಚರಣೆಯಲ್ಲಿ ಕೊನ್ನೆ ಹೂವಿಗೆ ಪ್ರತ್ಯೇಕ ಸ್ಥಾನವಿದೆ. ಹೊಸ ವರ್ಷದ ಆದಿಯಲಿ ಪ್ರಕೃತಿಯ ಮಡಿಲಲ್ಲಿ ಶೋಭಿಸುವ ಲಕ್ಷ್ಮಿಯ ಕರ ಸ್ಪರ್ಶದಿಂದ ಅರಳಿದ ಹೂಗಳಿಗೆ ಪವಿತ್ರ, ಪೂಜನೀಯ ಸ್ಥಾನವನ್ನೂ ನೀಡಲಾಗಿದೆ. ಸಮೃದ್ಧಿಯ ಸಂಕೇತವಾದ ಸ್ವರ್ಣ ಪುಷ್ಪ ಅಥವಾ ಕೊನ್ನೆ ಹೂವನ್ನು ನೀಡಿ ವಿವಿಧ ಪಕ್ಷಗಳ ಅಭ್ಯರ್ಥಿಗಳನ್ನು ಸ್ವಾಗತಿಸುವ ಮೂಲಕ ಜನರ ಪ್ರೀತಿ, ಗೌರವ ಹಾಗೂ ಮುಂದಿನ ಚುನಾವಣೆಯಲ್ಲಿ ವಿಜಯ ಮಾಲೆ ಧರಿಸಲು ಇದೊಂದು ಮುನ್ನುಡಿಯಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.

ಚಿತ್ರ, ವರದಿ: ಅಖಿಲೇಶ್ ನಗುಮುಗಮ್

ಟಾಪ್ ನ್ಯೂಸ್

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Yuva rajkumar’s Ekka movie muhurtha

Ekka: ಯುವ ರಾಜಕುಮಾರ್‌ ಹೊಸ ಸಿನಿಮಾ ʼಎಕ್ಕʼ ಮುಹೂರ್ತ

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

17-

Bengaluru: ದೆಹಲಿಯ ನೇಲ್‌ ಆರ್ಟಿಸ್ಟ್ ನೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.