ಮರದ ಕೆಲಸ ಮಾಡ್ತೀರಾ?
Team Udayavani, Apr 13, 2019, 3:00 AM IST
ಇಲ್ಲೊಂದು ವಿನೂತನ ಬೇಸಗೆ ಶಿಬಿರವೊಂದು ಮಕ್ಕಳಿಗಾಗಿ ಆಯೋಜನೆಗೊಂಡಿದೆ. ಶಾಲೆಗಳಲ್ಲಿ ಮಕ್ಕಳು ಮರದ ಬೆಂಚು ಡೆಸ್ಕಾಗಳ ಮೇಲೆಲ್ಲಾ ಗೀಚುವುದು, ಕೆತ್ತುವುದನ್ನೆಲ್ಲಾ ಮಾಡುತ್ತಿದ್ದರು. ಅದು ಶಿಕ್ಷಕರ ಗಮನಕ್ಕೇನಾದರೂ ಬಂದಿತೆಂದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಶಿಕ್ಷೆ ಕೊಡದೇ ಮಕ್ಕಳನ್ನು ಈ ಕೆಲಸದಲ್ಲಿ ತೊಡಗಿಸುವ ಹಾಗಿದ್ದಿದ್ದರೆ ಚೆಂದವಿತ್ತಲ್ಲವೇ?
ಮಕ್ಕಳಲ್ಲಿ ಈ ರೀತಿಯ ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಅವರಿಗೆ ಪೀಠೊಪಕರಣ ತಯಾರಿ ಕಲಿಸುವ “ವುಡ್ ವರ್ಕಿಂಗ್ ವರ್ಕ್‌ಶಾಪ್’ ಬೇಸಗೆ ಶಿಬಿರ ಆಯೋಜನೆಗೊಂಡಿದೆ. ಸಂಗೀತ, ನಾಟ್ಯ, ನಾಟಕ, ವ್ಯಾಯಾಮ ಕಲಿಸುವ ಶಿಬಿರಗಳ ನಡುವೆ ಮರದ ಕೆಲಸ ಕಲಿಸುವ ಶಿಬಿರ ವಿಭಿನ್ನವಾಗಿ ನಿಲ್ಲುತ್ತದೆ.
ವೈಶಿಷ್ಟ್ಯ
-ವಿವಿಧ ಬಗೆಯ ಮರಗಳ ಪರಿಚಯ ಮತ್ತದರ ಗುಣಸ್ವಭಾವ
-ಉಪಕರಣಗಳ ಬಳಕೆ
-ಅಳತೆ ಮಾಡುವುದು
-ಸರಳವಾದ ಪ್ರಾಜೆಕ್ಟ್ಗಳು
-ಸುರಕ್ಷತಾ ಕ್ರಮಗಳು
ಇವು ಜತೆಗಿರಲಿ
-ಟೋಪಿ
-ಹಣ್ಣು ಅಥವಾ ತಿಂಡಿ ಡಬ್ಬಿ
-ಸೇಫ್ಟಿ ಗಾಗಲ್ಸ್
ವಯೋಮಿತಿ: 10- 15
ಎಲ್ಲಿ?: ಚಿಲುಮೆ ಕೇಂದ್ರ, ಬನಶಂಕರಿ 6ನೇ ಹಂತ
ಯಾವಾಗ?: ಏಪ್ರಿಲ್ 19ರವರೆಗೆ
ಸಂಪರ್ಕ: 9845390160, 9945942175
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.