ಪ್ರಸಾದ್ ಪರ ಪುತ್ರಿ, ಅಳಿಯ ಮತಯಾಚನೆ
Team Udayavani, Apr 13, 2019, 3:00 AM IST
ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಪರ ಅವರ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ ಹಾಗೂ ಅವರ ಹಿರಿಯ ಪುತ್ರಿ ಪ್ರತಿಮಾ ಕ್ಷೇತ್ರದಲ್ಲಿ ಪ್ರತ್ಯೇಕವಾಗಿ ಮತಯಾಚಿಸಿದರು.
ಹರ್ಷವರ್ಧನ ಪ್ರಚಾರ: ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ತಾಂಡವಪುರ, ಹದಿನಾರು , ಬಿಳಗೆರೆ ,ಸುತ್ತೂರು, ಹೊಸಕೋಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಹರ್ಷವರ್ಧನ ತೆರಳಿ, ತಮ್ಮ ಮಾವ ಶ್ರೀನಿವಾಸ ಪ್ರಸಾದ್‌ಗೆ ಮತ ನೀಡುವಂತೆ ಮನವಿ ಮಾಡಿದರು.
ಕ್ಷೇತ್ರದಲ್ಲಿ ಐದು ಬಾರಿ ಸಂಸದರಾಗಿ, ಶಾಸಕರಾಗಿ, ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಯಾಗಿದ್ದಾರೆ. ಕ್ಷೇತ್ರದಾದ್ಯಂತ ಚಿರ ಪರಿಚಿರತರಾಗಿರುವ ಪ್ರಸಾದರ ಪ್ರಾಮಾಣಿಕತೆ ಬೇರೆಯವರಿಗೆ ಮಾದರಿಯಾಗಿದೆ. ಅವರ ರಾಜಕೀಯ ಹಿರಿತನಕ್ಕೆ ಪ್ರಾಮಾಣಿಕತೆಗೆ ನೀವೆಲ್ಲ ಮತ ನೀಡಿ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್‌ನಿಂದ ದಲಿತರಿಗೆ ಅನ್ಯಾಯವಾಗಿದೆ. ಮೊದಲು ಅಂಬೇಡ್ಕರ್ ನಂತರ ಬಸವಲಿಂಗಪ್ಪ, ಕೊನೆಗೆ ಶ್ರೀನಿವಾಸ ಪ್ರಸಾದ್ ಸೇರಿದಂತೆ ಎಲ್ಲಾ ದಲಿತರಿಗೂ ಕಾಂಗ್ರೆಸ್ ಅನ್ಯಾಯ ಹಾಗೂ ಅವಮಾನ ಮಾಡಿದೆ ಎಂದು ದೂರಿದರು.
ಆರ್.ಧ್ರುವನಾರಾಯಣ ಸ್ವಾರ್ಥ ಹಾಗೂ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ. ಒಬ್ಬರ ಮೇಲೆ ಮತ್ತೂಬ್ಬರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರು ಎಂದಿಗೂ ದಲಿತರ ಪರ ನಿಂತಿಲ್ಲ, ನಿಲ್ಲುವುದೂ ಇಲ್ಲ. ಈ ಬಾರಿ ಮತದಾರರು ಅವರನ್ನು ಸೋಲಿಸಿ ಪ್ರಪ್ರಥಮ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂದು ಕೋರಿದರು.
ಪುತ್ರಿ ಪ್ರತಿಮಾ ಪ್ರಚಾರ: ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಅವರ ಹಿರಿಯ ಪುತ್ರಿ ಪ್ರತಿಮಾ ಚುನಾವಣಾ ಪ್ರಚಾರ ನಡೆಸಿದರು. ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಅವರು, 20 ವರ್ಷಗಳ ಬಳಿಕ ಲೋಕಸಭೆಗೆ ಸ್ಪರ್ಧಿಸಿರುವ ತಮ್ಮ ತಂದೆಯನ್ನು ಈ ಬಾರಿ ಸಂಸತ್‌ಗೆ ಕಳುಹಿಸಬೇಕು. ದೇಶಕ್ಕೆ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕಿದ್ದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.
ಈ ವೇಳೆ ಮುಖಂಡರಾದ ಕಾಪು ಸಿದ್ಧಲಿಂಗಸ್ವಾಮಿ, ಜಿಪಂ ಸದಸ್ಯ ಗುರುಸ್ವಾಮಿ, ಸದಾನಂದ, ತಾಪಂ ಅಧ್ಯಕ್ಷ ಬಿ ಮಹದೇವಪ್ಪ, ವರುಣಾ ಕ್ಷೇತ್ರದ ಅಧ್ಯಕ್ಷ ಶಿವಯ್ಯ, ಮುಖಂಡರಾದ ಮಾಂಬಳ್ಳಿ ಮೂರ್ತಿ, ತಾಂಡವಪುರ ಸಂದೀಪ್, ಸುತ್ತೂರು ಚಿಕ್ಕಮಾದಪ್ಪ, ತಾಪಂ ಸದಸ್ಯ ಸತೀಶ್ ಇತರರಿದ್ದರು.
ಪ್ರಸಾದ್ ಕುಟುಂಬದಿಂದ ಮತಬೇಟೆ: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ನಾಲ್ಕು ದಶಕಗಳ ರಾಜಕೀಯವ ಜೀವನದಲ್ಲಿ ಎಂದಿಗೂ ಅವರ ಪುತ್ರಿಯರು ಹಾಗೂ ಸಂಬಂಧಿಕರು ಭಾಗಿಯಾಗಿರಲಿಲ್ಲ.
ಆದರೆ, ಈ ಬಾರಿ ಅವರ ಮೂವರು ಪುತ್ರಿಯರು, ಅಳಿಯಂದರು ಹಾಗೂ ಹತ್ತಿರದ ಸಂಬಂಧಿಕರು ಉರಿ ಬಿಸಿಲನ್ನು ಲೆಕ್ಕಿಸದೇ ಹಳ್ಳಿಗಳನ್ನು ಸುತ್ತುತ್ತಾ ಮತಬೇಟಿಗೆ ಇಳಿದಿದ್ದಾರೆ. ಪ್ರಸಾದ್ ಅಳಿಯ, ನಂಜನಗೂಡು ಶಾಸಕ ಹರ್ಷವರ್ಧನ್, ಮತ್ತೂಬ್ಬ ಅಳಿಯ ಡಾ|ಮೋಹನ್, ಹಿರಿಯ ಪುತ್ರಿ ಪ್ರತಿಮಾ ಸೇರಿದಂತೆ ಸಂಬಂಧಿಕರು ಕ್ಷೇತ್ರ ವ್ಯಾಪ್ತಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.