ಬೆಳ್ತಂಗಡಿ ಪಟ್ಟಣಕ್ಕೆ ಸೋಮಾವತಿ ನದಿ ನೀರು ಸ್ಥಗಿತ

14 ಕೊಳವೆ ಬಾವಿಗಳಿಂದ ದಿನಕ್ಕೆ 2 ತಾಸು ಪೂರೈಕೆ

Team Udayavani, Apr 13, 2019, 6:00 AM IST

i-8

ಬೆಳ್ತಂಗಡಿ ನಗರಕ್ಕೆ ನೀರು ಪೂರೈಕೆ ಮಾಡುವ ಸೋಮಾವತಿ ನದಿ ಬತ್ತಿಹೋಗಿದೆ.

ಬೆಳ್ತಂಗಡಿ: ಬೆಳ್ತಂಗಡಿ ತಾ|ನಲ್ಲಿ ತಾಪಮಾನ ದಿನೇದಿನೇ ಹೆಚ್ಚುತ್ತಿದ್ದು, ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಸೋಮಾವತಿ ನದಿ ಈ ವರ್ಷ ಮಾರ್ಚ್‌ ಅಂತ್ಯಕ್ಕೇ ಬತ್ತಿಹೋಗಿದೆ. ಇರುವ ಅಲ್ಪಸ್ವಲ್ಪ ನೀರು ಕುಡಿಯಲು ಯೋಗ್ಯವಿಲ್ಲದಷ್ಟು ಕಲುಷಿತಗೊಂಡಿರುವುದರಿಂದ ಅನಿವಾರ್ಯ ವಾಗಿ ಪಟ್ಟಣಕ್ಕೆ ಸರಬರಾಜು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಿರುವ 14 ಸರಕಾರಿ ಕೊಳವೆ ಬಾವಿ ಹಾಗೂ 3 ಖಾಸಗಿ ಕೊಳವೆ ಬಾವಿ ಆಶ್ರಯದಿಂದ ದಿನಕ್ಕೆ ಎರಡೂವರೆ ಗಂಟೆ ನೀರು ಸರಬರಾಜು ಮಾಡಲಾಗುತ್ತಿದೆ. ಕೊಳವೆ ಬಾವಿ ಅಂತರ್ಜಲ ಮಟ್ಟ ಸುಧಾರಿಸುವ ದೃಷ್ಟಿಯಿಂದ ಹೆಚ್ಚು ನೀರು ಮೇಲೆತ್ತಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಜನಸಾಮಾನ್ಯರು ಮನದಲ್ಲಿಟ್ಟು ನೀರು ಮಿತ ಬಳಕೆ ಅನಿವಾರ್ಯವಾಗಿದೆ.

ದಿನಕ್ಕೆ 5ಲಕ್ಷ ಲೀ. ಪೂರೈಕೆ
ಈ ಹಿಂದೆ 1.05 ಎಂಎಲ್‌ಡಿ ನೀರು ಪೂರೈಕೆ ಮಾಡ ಲಾಗುತ್ತಿದ್ದು, ಈಗ ಅದನ್ನು 0.65 ಎಂಎಲ್‌ಡಿಗೆ ಇಳಿಸ ಲಾಗಿದೆ. ಪ್ರತಿದಿನ ಒಬ್ಬ ವ್ಯಕ್ತಿಗೆ 130 (ಎಲ್‌ಪಿ ಸಿಡಿ) ಲೀಟರ್‌ ಅವಶ್ಯದಂತೆ 7,746 ಮಂದಿಗೆ 5ರಿಂದ 7 ಲಕ್ಷ ಲೀಟರ್‌ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಒಬ್ಬ ವ್ಯಕ್ತಿಗೆ 100 ಎಲ್‌ಪಿಸಿಡಿ (ಲೀಟರ್‌) ನಂತೆ 5 ಲಕ್ಷ ಲೀಟರ್‌ ನೀರು ಸರಬರಾಜು ಕಷ್ಟಕರ ವಾಗಿದೆ. ಆದರೂ ನಗರ ಪಂ. ಐದೂವರೆ ಲಕ್ಷ ಲೀ. ನೀರು ಸರಬರಾಜು ಮಾಡುತ್ತಿದೆ.

ಪ.ಪಂ. ವ್ಯಾಪ್ತಿಯಲ್ಲಿ 14 ಕೊಳವೆಬಾವಿ ಗಳಿದ್ದು, 11ರಿಂದ ಮಾತ್ರ ನೀರು ತೆಗೆಯ ಲಾಗುತ್ತಿದೆ. ಉಳಿದಂತೆ ಸಂತೆಕಟ್ಟೆ, ಸಂತೆಕಟ್ಟೆ ಚಾಮುಂಡೇಶ್ವರಿ, ಉದಯನಗರದಿಂದ 3 ಖಾಸಗಿ ಬೋರ್‌ವೆಲ್‌ನ ನೀರು ಬಳಸ ಲಾಗುತ್ತಿದೆ. ಆದರೆ ವಿದ್ಯುತ್‌ ವ್ಯತ್ಯಯಗೊಂ ಡರೆ ಪೂರೈಕೆಯೂ ಕಷ್ಟವಾಗಲಿದೆ.

ಪ್ರಸ್ತುತ ತಾಲೂಕಿನಾದ್ಯಂತ 40 ಕೊಳವೆ ಬಾವಿ ತೆರೆಯಲು ಟಾಸ್ಕ್ಪೋರ್ಸ್‌ ಮುಖೇನ ಮಂಜೂರಾತಿ ಸಿಕ್ಕಿರುವುದರಿಂದ ಈಗಾಗಲೇ ಪಟ್ಟಣ ಹೊರತುಪಡಿಸಿ ತೀರಾ ನೀರಿನ ಅಭಾವ ಇರುವಲ್ಲಿ ಕೊಳವೆಬಾವಿ ಕೊರೆಸಲಾಗುತ್ತಿದೆ.

ಕೆಸರು ತೆಗೆದರೂ ಪ್ರಯೋಜನವಿಲ್ಲ
ಪಟ್ಟಣ ಪಂಚಾಯತ್‌ನ ಜಾಕ್‌ವೆಲ್‌ ಬಳಿ ಸೋಮಾವತಿ ನದಿಗೆ ತಾತ್ಕಾಲಿಕವಾಗಿ ಕಟ್ಟಿರುವ ಕಟ್ಟದಿಂದ ಈ ಹಿಂದೆ ಪ್ರತಿನಿತ್ಯ ಸುಮಾರು 4 ಲಕ್ಷ ಲೀ.ನಷ್ಟು ನೀರು ತೆಗೆಯಲಾಗುತ್ತಿತ್ತು. ಹೀಗಾಗಿ ನೀರು ನಿಲ್ಲಬೇಕು ಎಂದು ಅಲ್ಲಿನ ಸುತ್ತಮುತ್ತಲ ಕೆಸರನ್ನು ಜೆಸಿಬಿ ಮೂಲಕ ತೆಗೆದರೂ ದೊಡ್ಡ ಪ್ರಯೋಜನವಾಗಿಲ್ಲ.

ಬೇಸಗೆ ಆರಂಭದ ಮೊದಲು ಪಟ್ಟಣ ಪಂಚಾಯತ್‌ ಬೆಳಗ್ಗೆ 6ರಿಂದ ಅಪರಾಹ್ನ 2ರ ವರೆಗೆ ಅಂದರೆ ದಿನಕ್ಕೆ ಒಟ್ಟು 8 ಗಂಟೆಗಳ ಕಾಲ ನೀರು ಪೂರೈಕೆ ಮಾಡುತ್ತಿತ್ತು. ಆದರೆ ಈಗ ನೀರಿನ ಲಭ್ಯತೆ ಆಧಾರದಲ್ಲಿ ಬರೀ 2 ಗಂಟೆ ಮಾತ್ರ ನೀರು ಕೊಡಬೇಕಾದ ಸ್ಥಿತಿ ಬಂದಿದೆ. ಮುಂದಿನ ಎರಡು ತಿಂಗಳು ಮಳೆ ಬಾರದಿದ್ದಲ್ಲಿ ಪರಿಸ್ಥಿತಿ ತೀರ ಬಿಗಡಾಯಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.

ಜನಸಂಖ್ಯೆ, ನೀರಿನ ಸಂಪರ್ಕ
ನಗರದ ಹಿಂದಿನ ಜನಸಂಖ್ಯೆ- 7,746 (2011)ರ ಜನಗಣತಿ
ಪ್ರಸ್ತುತ ಜನಸಂಖ್ಯೆ ಅಂದಾಜು- 8,200
ಒಟ್ಟು ಮನೆಗಳು -3,300
ಪಂ.ನಿಂದ ನೀರಿನ ಸಂಪರ್ಕ-1,423
ಉಳಿದವರಿಗೆ ಸ್ವಂತ ಕೊಳವೆಬಾವಿ, ಬಾವಿ ಆಶ್ರಯ

ಕಲ್ಲಗುಡ್ಡೆ ಮದರ್‌ ಟ್ಯಾಂಕ್‌ಗಿಲ್ಲ ನೀರು
ಬೆಳ್ತಂಗಡಿಯ ಕಲ್ಲಗುಡ್ಡೆಯಲ್ಲಿ 13 ಲಕ್ಷ ರೂ. ವೆಚ್ಚದ 5 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಮದರ್‌ಟ್ಯಾಂಕ್‌ ನಿರ್ಮಿಸಲಾಗಿತ್ತು. ಆದರೆ ನದಿಯಲ್ಲಿ ಅಷ್ಟು ಪ್ರಮಾಣದಲ್ಲಿ ನೀರಿಲ್ಲದಿರುವುದರಿಂದ ಈವರೆಗೆ ಒಮ್ಮೆಯೂ ನೀರು ಸಂಗ್ರಹವಾಗಿಲ್ಲ.

ಪೋಲು ಮಾಡದಂತೆ ಮನವಿ
ಕೊಳವೆಬಾವಿ ಅಂತರ್ಜಲ ಬತ್ತಿಹೋದರೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸಾಧ್ಯತೆ ಇದೆ. ಪ್ರಸ್ತುತ ಪಟ್ಟಣಕ್ಕೆ 5 ಲಕ್ಷ ಲೀಟರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ಎರಡು ತಿಂಗಳು ಜನಸಾಮಾನ್ಯರು ನೀರಿನ
ಬಳಕೆಯಲ್ಲಿ ಏರುಪೇರಾಗದಂತೆ ಎಚ್ಚರ ವಹಿಸಬೇಕು.
ಮಹಾವೀರ ಆರಿಗ, ಎಂಜಿನಿಯರ್‌, ಪ.ಪಂ. ಬೆಳ್ತಂಗಡಿ

ತಾಲೂಕು ಪಂಚಾಯತ್‌ ಮುನ್ನೆಚ್ಚರಿಕೆ
ಪಟ್ಟಣ ಪಂಚಾಯತ್‌ನಿಂದ ನೀರು ಪಡೆಯುವ ಎಲ್ಲರಿಗೆ ವಾಹನ, ಕೃಷಿ ಬಳಕೆಗೆ ನೀರು ಬಳಸದಂತೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಜತೆಗೆ ನೀರಿನ ಅವಶ್ಯವಿರುವಲ್ಲಿ ದೂರು ಬಂದರೆ ತತ್‌ಕ್ಷಣ ಕ್ರಮ ಕೈಗೊಳ್ಳುವಲ್ಲಿ ತಾಲೂಕು ಪಂಚಾಯತ್‌ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ.
ಗಣಪತಿ ಶಾಸ್ತ್ರಿ, ತಹಶೀಲ್ದಾರ್‌

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌

Delhi: ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಸ್ಫೋಟ… ಪೊಲೀಸ್, ಅಗ್ನಿಶಾಮಕ ದಳ ದೌಡು

Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ

Belagavi: ಸಿಪಿಐ ಕಿರುಕುಳ ಆರೋಪ, ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

3

Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ

2(1

Belthangady: ಕೃಷಿ, ಕರಕುಶಲ ಕಲೆಗಳ ವೈಭವ

1(1

Madanthyar: ಬಾಲಕಿಯರ ಹಾಸ್ಟೆಲ್‌ ಕಟ್ಟಡ ಅನಾಥ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

kuladalli keelyavudo kannada movie

Kannada Cinema: ಕ್ಲೈಮ್ಯಾಕ್ಸ್‌ ನತ್ತ ʼಕುಲದಲ್ಲಿ ಕೀಳ್ಯಾವುದೋʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.