9 ಹಾಲಿ ಶಾಸಕರು, ತಲಾ ಓರ್ವ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಕಣದಲ್ಲಿ

ಮಹಾಚುನಾವಣೆ; ಕೇರಳ ಲೋಕಸಭೆ ಹುರಿಯಾಳುಗಳು

Team Udayavani, Apr 13, 2019, 6:00 AM IST

c-13

ಕುಂಬಳೆ: ಹದಿನೇಳನೇ ಲೋಕಸಭಾ ಚುನಾವಣೆಯ ಫಲಿತಾಂಶವು ಈ ಬಾರಿ ಕೇರಳದಲ್ಲಿ ಕುತೂಹಲ ಸೃಷ್ಟಿಸಲಿದೆ. 140 ಶಾಸಕರನ್ನು ಹೊಂದಿದ ಸರಕಾರದ ಹಾಲಿ ರಾಜ್ಯ ವಿಧಾನಸಭೆಯ ಎಂ.ಎಲ್‌.ಎ. ಮತ್ತೆ ಎಂ.ಪಿ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಓರ್ವ ಸಹಾಯಕ ಸಚಿವ ಸ್ಥಾನವನ್ನು ಹೊಂದಿರುವ ಇಬ್ಬರು ಹಾಲಿ ಎಂಪಿಗಳ ಸಹಿತ ಒಟ್ಟು ಹನ್ನೊಂದು ಜನಪ್ರತಿನಿಧಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ ಇಬ್ಬರು ಗೆದ್ದರೆ ಲೋಕಸಭೆ ಸಂಸತ್‌ ಸದಸ್ಯರಾಗುತ್ತಾರೆ. ಸೋತರೆ ರಾಜ್ಯಸಭಾ ಸದಸ್ಯರಾಗಿಯೇ ಉಳಿಯುತ್ತಾರೆ. ಒಂಬತ್ತು ಮಂದಿ ಶಾಸಕರು ಚುನಾವಣ ಕಣದಲ್ಲಿದ್ದಾರೆ ಇವರು ಗೆಲುವು ಸಾಧಿಸಿದರೆ ಲೋಕಸಭಾ ಸದಸ್ಯರಾಗಲಿದ್ದಾರೆ. ಸೋತರೆ ಶಾಸಕರಾಗಿಯೇ ಮುಂದುವರಿಯಲಿದ್ದಾರೆ. ಶಾಸಕರು ಗೆದ್ದರೆ ಎಂ.ಪಿ.ಗಳು, ಸೋತರೆ ಎಂ.ಎಲ್‌. ಎ. ಗಳಾಗಿ ಮತ್ತೆ ಇಲ್ಲೇ ಉಳಿಯಲಿದ್ದಾರೆ.

ಎನ್‌.ಡಿ.ಎ.ಯಿಂದ ಕೇಂದ್ರ ಪ್ರವಾಸೋದ್ಯಮ ಸಹಾಯಕ ಸಚಿವ ಆಲ್ಫೋನ್ಸ್‌ ಕಣ್ಣಾತ್ತಾ¤ನಂ ಹಾಲಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರು ಎರ್ನಾಕುಳಂ ಲೋಕಸಭಾ ಕ್ಷೇತ್ರದ ಎನ್‌.ಡಿ.ಎ. ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿರುವರು.ಇನ್ನೋರ್ವ ರಾಜ್ಯಸಭಾ ಸದಸ್ಯರಾಗಿರುವ ಮಲಯಾಳ ಚಲನಚಿತ್ರ ಮೇರು ನಟ ಸುರೇಶ್‌ ಗೋಪಿ ತೃಶ್ಯೂರ್‌ ಲೋಕಸಭಾ ಕ್ಷೇತ್ರದ ಎನ್‌.ಡಿ.ಎ. ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವರು.

ಆರು ಮಂದಿ ಶಾಸಕರು ಎಡರಂಗದಿಂದ, ಐಕ್ಯರಂಗದಿಂದ ಮೂರು ಮಂದಿ ಶಾಸಕರು ರಾಜ್ಯದ ಲೋಕಸಭಾ ಚುನಾವಣ ಕಣದಲ್ಲಿದ್ದಾರೆ. ಇಷ್ಟು ಮಂದಿ ಚುನಾಯಿತರು ಇದೇ ಮೊದಲ ಬಾರಿಗೆ ಚುನಾವಣ ಕಣದಲ್ಲಿದ್ದಾರೆ ಒಂಬತ್ತು ಮಂದಿ ಶಾಸಕರಲ್ಲಿ ಯಾರಾದರೂ ಲೋಕಸಭೆ ಚುನಾವಣೆ ಯಲ್ಲಿ ಚುನಾಯಿತರಾದರೆ ಆ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಬೇಕಿದೆ..

ಸ್ಪರ್ಧೆಯಲ್ಲಿರುವ ಶಾಸಕರಿವರು
ಈ ಬಾರಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸುಸುತ್ತಿರುವ ಎಡರಂಗದ ಅರೂರ್‌ ಕ್ಷೇತ್ರದ ಎ.ಎಂ. ಆರೀಫ್‌, ಆರನ್ಮುಳ ಶಾಸಕಿ ವೀಣಾ ಜಾರ್ಜ್‌, ಕಲ್ಲಿಕೋಟೆ ನಾರ್ತ್‌ ಶಾಸಕ ಎ. ಪ್ರದೀಪ್‌ ಕುಮಾರ್‌, ನಿಲಂಬೂರು ಶಾಸಕ ಪಿ.ವಿ. ಅನ್ವರ್‌, ನಿಡುಮ್ಮಾಂಗಾಡ್‌ ಶಾಸಕ ಸಿ. ದಿವಾಕರನ್‌, ಅಡೂರು ಶಾಸಕ ಚಿಟ್ಟಯಂ ಗೋಪ ಕುಮಾರ್‌ ಎಂಬವರಾಗಿರುವರು. ಐಕ್ಯರಂಗದ ವಟ್ಟಿಯೂರ್‌ಕಾವ್‌ ಶಾಸಕ ಕೆ. ಮುರಳೀಧರನ್‌, ಕೋನಿ ಶಾಸಕ ಅಡೂರ್‌ ಪ್ರಕಾಶ್‌, ಎರ್ನಾಕುಳಂ ಶಾಸಕ ಹೈಬಿ ಈಡನ್‌ ಎಂಬವರು ಈ ಬಾರಿ ಚುನಾವಣ ಕಣದಲ್ಲಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಹೈ ಅಲರ್ಟ್‌ ಆಗಿದ್ದು ಯು.ಡಿ.ಎಫ್‌. ಮತ್ತು ಎಲ್‌.ಡಿ.ಎಫ್‌. ರಂಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಅನಿವಾರ್ಯವಾದ ಕಾರಣ ಸಮರ್ಥ ಶಾಸಕರನ್ನೇ ಆಯ್ಕೆಮಾಡಿ ಚುನಾವಣಾ ಕಣಕ್ಕಿಳಿಸಿದೆ.

ಹಾಲಿ ಎಂ.ಪಿ.ಗಳು ಸುರಕ್ಷಿತರು: ಗೆದ್ದರೂ ಸೋತರೂ ನಷ್ಟವಿಲ್ಲ
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಾಜ್ಯ ಸಭಾ ಸದಸ್ಯರಾದ ಅಲ್ಫೋನ್ಸ್‌ ಕಣ್ಣಾತ್ತಾನಂ ಮತ್ತು ಸುರೇಶ್‌ ಗೋಪಿಯವರು ಕ್ಷೇತ್ರದಲ್ಲಿ ಪರಾಜಿತರಾದರೂ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯಲಿರುವರು. ಈ ಎಂ.ಪಿ.ಗಳು ಗೆಲುವು ಸಾಧಿಸಿದಲ್ಲಿ ಲೋಕಸಭಾ ಸದಸ್ಯರಾಗುತ್ತಾರೆ. ಆದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಶಾಸಕರು ಪರಾಜಿತರಾದಲ್ಲಿ ಶಾಸಕರಾಗಿ ಮುಂದುವರಿಯಲಿರುವರು. ಗೆದ್ದರೆ ಸಂಸದರಾಗಿ ಆಯ್ಕೆಯಾಗಲಿರುವರು. ಅದುದರಿಂದ ಇವರು ಸೋತರೂ ಗೆದ್ದರೂ ಪಕ್ಷಕ್ಕಾಗಲೀ, ಅಭ್ಯರ್ಥಿಗಳಿಗಾಗಲೀ ಯಾವುದೇ ನಷ್ಟವಿಲ್ಲ. ಆದರೆ ಶಾಸಕರು ಗೆದ್ದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಬೇಕಿದೆ. ಹಾಲಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾದಲ್ಲಿ ಆ ಕ್ಷೇತ್ರದಲ್ಲಿ ಮುಂದೆ ನಡೆಯಲಿರುವ ಉಪಚುನಾವಣೆಯ ಖರ್ಚು ವೆಚ್ಚವನ್ನು ಇವರಿಂದಲೇ ಭರಿಸಬೇಕೆಂಬುದಾಗಿ ಓರ್ವ ಮತದಾರರು ನ್ಯಾಯಾಲಯದ ಮೆಟ್ಟಲೇರಿದ್ದಾರೆ.

ಎಡರಂಗ ಮತ್ತು ಐಕ್ಯರಂಗಗಳು ಅತ್ಯಂತ ಹೆಚ್ಚು ಸ್ಥಾನ ಗಳಿಸುವ ವಿಶ್ವಾಸದಲ್ಲಿದೆ.ಎನ್‌ಡಿಎ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖಾತೆ ತೆರೆದಂತೆ ಈ ಬಾರಿ ಲೋಕಸಭಾ ಚುನಾವಣೆ ಯಲ್ಲೂ ಖಾತೆ ತೆರೆಯಿರುವ ಭರವಸೆಯಲ್ಲಿದೆ.ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶದಲ್ಲಿ ರಾಜ್ಯ ಎಡರಂಗ ಸರಕಾರದ ಆಚಾರ ಉಲ್ಲಂಘನೆಯ ನಿಲುವು ಮತ್ತು ಅದರ ಪ್ರತಿಫಲವು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂಬುದು ಎನ್‌.ಡಿ.ಎ. ಮತ್ತು ಕಾಂಗ್ರೆಸ್‌ ಪಕ್ಷಗಳ ಅಭಿಪ್ರಾಯವಾಗಿದೆ. ಶಬರಿಮಲೆ ಕ್ಷೇತ್ರ ಹೊಂದಿರುವ ಪತ್ತನಂತಿಟ್ಟ ಲೋಕಸಭಾ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಂಕಿ ಚೆಂಡು ಕೆ. ಸುರೇಂದ್ರನ್‌ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.ಉಳಿದಂತೆ ತಿರುವನಂತಪುರ, ತೃಶ್ಯೂರ್‌,ವಡಗರ, ಕಣ್ಣೂರು, ಆಲಪ್ಪುಯ ಎರ್ನಾಕುಳಂ, ಕಾಸರಗೋಡು ಸೇರಿದಂತೆ ಜಿದ್ದಾಜಿದ್ದಿನ ತ್ರಿಕೋನ ಸ್ಫರ್ಧೆಯ ಹೋರಾಟದ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗೂ ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ.

ರಾಹುಲ್‌ ಕೇಂದ್ರ ಬಿಂದು
ಕೇರಳದ ವಯನಾಡ್‌ನ‌ಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಫರ್ಧಿಸುತ್ತಿರುವುದು ದೇಶದಾದ್ಯಂತ ಗಮನ ಸೆಳೆದಿದೆ. ಐಕ್ಯರಂಗದಲ್ಲಿ ಸಂಚಲನ ಮೂಡಿಸಿದರೆ ಎಡರಂಗದಲ್ಲಿ ಆತಂಕಕ್ಕೆಡೆ ಮಾಡಿದೆ. ನೆರೆಯ ಕರ್ನಾಟಕದಲ್ಲಿ ಮಹಾಘಟಬಂದನ್‌ ಮೂಲಕ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ ಮೈತ್ರಿ ಪಕ್ಷಗಳು ಇಲ್ಲಿ ಪರಸ್ಪರ ವಿರುದ್ಧ ಸ್ಪ‌#ರ್ಧಿಗಳಾಗಿವೆ. ಮಹಾಘಟಬಂದನ್‌ ನಿಲುವಿನ ವಿರುದ್ಧ ಹೇಳಿಕೆಗಳಾಗಿವೆ. ಒಟ್ಟಿನಲ್ಲಿ ಮಾಗಿದ ರಾಜಕೀಯ ರಾಜ್ಯದಲ್ಲಿ ಬಿಸಿಲ ತಾಪಮಾನದೊಂದಿಗೆ ಚುನಾವಣೆಯ ಕಾವು ಏರುತ್ತಿದೆ.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.