ಕುಂದಾಪುರ: ಅರ್ಧದಷ್ಟು ತಾಲೂಕಿನಲ್ಲಿ ನೀರಿನ ಬರ!

ಹಲವೆಡೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಆರಂಭ

Team Udayavani, Apr 13, 2019, 6:00 AM IST

1204KDLM7PH

ಕುಂದಾಪುರದ ಪಂಚಗಂಗಾವಳಿ.

ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಅರ್ಧದಷ್ಟು ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಟ್ಯಾಂಕರ್‌ ನೀರು ಸರಬರಾಜು ಆರಂಭಗೊಂಡಿದೆ. ಒಟ್ಟು 65 ಪಂಚಾಯತ್‌ಗಳ ಪೈಕಿ ಈಗಾಗಲೇ 30 ಪಂಚಾಯತ್‌ಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಆರಂಭಗೊಂಡಿದೆ. ಇನ್ನೊಂದಷ್ಟು ಪಂಚಾಯತ್‌ಗಳಲ್ಲಿ ಇದಕ್ಕಾಗಿ ಸಿದ್ಧತೆ ನಡೆದಿದೆ.

ಬೇಡಿಕೆ
ಹಾರ್ದಳ್ಳಿ ಮಂಡಳ್ಳಿ, ಅಂಪಾರು, ಶಂಕರನಾರಾಯಣ, ಗುಲ್ವಾಡಿ, ತ್ರಾಸಿ, ಹೆಮ್ಮಾಡಿ, ಹೊಂಬಾಡಿ ಮಂಡಾಡಿ, ಗುಜ್ಜಾಡಿ, ಹಕ್ಲಾಡಿ, ಯಡ್ತರೆ, ಶಿರೂರು, ಪಡುವರಿ, ಕಾವ್ರಾಡಿ, ಹಳ್ಳಿಹೊಳೆ, ಅಮಾಸೆಬೈಲು, ಕೊರ್ಗಿ, ಕಾಲೊ¤àಡು, ಗೋಪಾಡಿ, ಬೈಂದೂರು, ಮೊಳಹಳ್ಳಿ, ಚಿತ್ತೂರು, ಆಜ್ರಿ, ಬಸೂÅರು, ಹೊಸಂಗಡಿ, ಕೆದುರು, ಸಿದ್ದಾಪುರ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಕಿರಿಮಂಜೇಶ್ವರ ಪಂಚಾಯತ್‌ಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಅನುದಾನ ನೀಡುವಂತೆ ತಾಲೂಕು ಆಡಳಿತದ ಕದ ತಟ್ಟಲಾಗಿದೆ. ಕಳೆದ ವರ್ಷ ಸಮಸ್ಯೆ ಇಲ್ಲದಲ್ಲಿಯೂ ಈ ಬಾರಿ ಸಮಸ್ಯೆ ತಲೆದೋರಿದೆ.

ಸಮಸ್ಯೆ
ಕುಂದಾಪುರ, ಬೈಂದೂರಿನಲ್ಲಿ ಐದು ಪ್ರಮುಖ ನದಿಗಳ ಜತೆ ಜಂಬೂ, ಹಾಲಾಡಿ, ಉಪ್ಪುಂದ, ಗಂಗೊಳ್ಳಿ ಮೊದಲಾದ ಉಪನದಿಗಳೂ ಇವೆ. ಆದರೆ ಬೇಸಗೆ ಬಂದರೆ ಕುಡಿಯಲು ನೀರಿಲ್ಲ. ಇರುವ 101 ಗ್ರಾಮಗಳ 65 ಗ್ರಾ.ಪಂ.ಗಳ ಪೈಕಿ 52 ಗ್ರಾ.ಪಂ. ವ್ಯಾಪ್ತಿಗೆ ಬೇಸಗೆಯಲ್ಲಿ ಟ್ಯಾಂಕರ್‌ ನೀರು ಹಂಚಬೇಕಾಗುತ್ತದೆ ಎಂದರೆ ಇಲ್ಲಿನ ನೀರಿನ ಸಮಸ್ಯೆಯ ಗಂಭೀರ ಅರಿವಾಗಬಹುದು. ಇದ್ದುದರಲ್ಲಿ ನಗರದ ಜನತೆಯೇ ಸಂತೃಪ್ತರು. ಅವರಿಗೆ ಜಂಬೂ ನದಿಯಿಂದ ಜಪ್ತಿಯಲ್ಲಿ ಶುದ್ಧಗೊಂಡ ನೀರು ಬರುತ್ತದೆ. ಪೈಪ್‌ಲೈನ್‌ ಹಾದು ಹೋಗುವ 6 ಗ್ರಾ.ಪಂ.ಗಳಿಗೂ ಇದೇ ನೀರುಣಿಸಲಾಗುತ್ತದೆ. ಹಾಗಾಗಿ ಆ ಪಂಚಾಯತ್‌ಗಳಲ್ಲಿ ಒಂದಷ್ಟು ನೀರಿನ ಸಮಸ್ಯೆ ವಿರಳ. ಉಳಿದಂತೆ ಎಲ್ಲೆಡೆ ನೀರಿಗಾಗಿ ಹಾಹಾಕಾರವಿದೆ.

ಕಳೆದ ವರ್ಷ
ಕರ್ಕುಂಜೆ-6.35 ಲಕ್ಷ ರೂ., ಶಂಕರನಾರಾಯಣ – 7.50 ಲಕ್ಷ ರೂ., ಶಿರೂರು-12 ಲಕ್ಷ ರೂ., ಸಿದ್ದಾಪುರ-5.50 ಲಕ್ಷ ರೂ., ಬೆಳ್ವೆ- 6.5 ಲಕ್ಷ ರೂ., ಕಾಳಾವರ- 5 ಲಕ್ಷ ರೂ., ಅಂಪಾರು – 10 ಲಕ್ಷ ರೂ., ಕೆದೂರು- 5 ಲಕ್ಷ ರೂ.ಗಳಿಗೆ ಕೊಟ್ಟದ್ದು ಸಾಲದೇ ಹೆಚ್ಚುವರಿ ಅನುದಾನಕ್ಕೆ ಬೇಡಿಕೆಯಿತ್ತು. ಆಜ್ರಿಯಲ್ಲಿ 1.50 ಲಕ್ಷ ರೂ., ಗಂಗೊಳ್ಳಿ 1 ಲಕ್ಷ ರೂ., ಗುಜ್ಜಾಡಿ 3 ಲಕ್ಷ ರೂ., ಹಳ್ಳಿಹೊಳೆ 3.5 ಲಕ್ಷ ರೂ. , ಹಟ್ಟಿಯಂಗಡಿ 3 ಲಕ್ಷ ರೂ., ಕಟ್‌ಬೆಳೂ¤ರಿನಲ್ಲಿ 4.5 ಲಕ್ಷ ರೂ., ಉಳ್ಳೂರು 1 ಲಕ್ಷ ರೂ.. ಉಳ್ಳೂರು -74ರಲ್ಲಿ 3 ಲಕ್ಷ ರೂ., ಯಡಮೊಗೆ 1 ಲಕ್ಷ ರೂ., ಜಡ್ಕಲ್‌ಗೆ 4 ಲಕ್ಷ ರೂ., ಕೆರಾಡಿಗೆ 3.5 ಲಕ್ಷ ರೂ., ಕೆರ್ಗಾಲು 1 ಲಕ್ಷ ರೂ, ಕಿರಿಮಂಜೇಶ್ವರ 4.5 ಲಕ್ಷ ರೂ., ನಾಡದಲ್ಲಿ 1.50 ಲಕ್ಷ ರೂ., ನಾವುಂದದಲ್ಲಿ 1.50 ಲಕ್ಷ ರೂ. ನೀರು ಸರಬರಾಜಿಗೆ ವ್ಯಯಿಸಲಾಗಿತ್ತು. ಕಳೆದ ವರ್ಷ ಒಟ್ಟು 1.4 ಕೋ.ರೂ.ಗಳನ್ನು ಬೇಸಗೆ ಕಾಲದ ಕುಡಿಯುವ ನೀರಿನ ಸರಬರಾಜಿಗೆ ಖರ್ಚಾಗಿದ್ದರೆ ಈ ವರ್ಷ ಇದಕ್ಕಿಂತ ಹೆಚ್ಚೇ ಖರ್ಚಾಗುವ ಸಂಭವ ಇದೆ.

ಬೇಡಿಕೆ ಕಳುಹಿಸಲಾಗಿದೆ
ನೀರಿನ ಸಮಸ್ಯೆ ಇರುವಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ಅನುದಾನ ಒದಗಿಸುವಂತೆ ಪಂಚಾಯತ್‌ಗಳಿಂದ ಬಂದ ಬೇಡಿಕೆಯನ್ನು ತಾಲೂಕು ಕಚೇರಿಗೆ ಕಳುಹಿಸಲಾಗಿದೆ. ನೀರು ಪೂರೈಕೆಯಲ್ಲಿ ಎಲ್ಲಿಯೂ ಸಮಸ್ಯೆ ಇಲ್ಲ. ಈಗಾಗಲೇ ಟ್ಯಾಂಕರ್‌ ಮೂಲಕ ಪೂರೈಸಲಾಗುತ್ತಿದೆ.
-ಕೆ. ಕಿರಣ್‌ ಪೆಡೆ°àಕರ್‌,
ಕಾರ್ಯನಿರ್ವಹಣಾಧಿಕಾರಿ, ತಾ.ಪಂ.

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ

Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ

Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ

Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ

ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ

Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ

Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.