ಡೆಲ್ಲಿ ಗೆಲ್ಲಿಸಿದ ಧವನ್‌


Team Udayavani, Apr 13, 2019, 10:11 AM IST

dhwan

ಕೋಲ್ಕತ: ಬಹುದಿನಗಳ ನಂತರ ಫಾರ್ಮ್ಗೆ ಬಂದ ಶಿಖರ್‌ ಧವನ್‌ (97* ರನ್‌) ಮತ್ತು ರಿಷಭ್‌ ಪಂತ್‌ (46 ರನ್‌) ಆಕರ್ಷಕ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌
ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ ತಂಡವು 7 ವಿಕೆಟಿಗೆ 178 ರನ್‌ ಗಳಿಸಿದ್ದರೆ ಡೆಲ್ಲಿ ತಂಡವು 18.5 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 180 ರನ್‌ ಗಳಿಸಿ ಜಯಭೇರಿ ಬಾರಿಸಿತು. ಧವನ್‌ ಮತ್ತು ಪಂತ್‌ ಅವರ ಭರ್ಜರಿ ಆಟದಿಂದ ಡೆಲ್ಲಿ ಸುಲಭ
ಗೆಲುವು ಕಾಣುವಂತಾಯಿತು. ಅವರಿಬ್ಬರು 2ನೇ ವಿಕೆಟಿಗೆ 105 ರನ್‌ ಜತೆಯಾಟ ನಡೆಸಿದರು. ಪಂತ್‌ 46 ರನ್ನಿಗೆ ಔಟಾದರೆ ಧವನ್‌ ಸ್ವಲ್ಪದರಲ್ಲಿ ಶತಕ ದಾಖಲಿಸಲು ವಿಫ‌ಲರಾದರು. ಕೊನೆ ಹಂತದಲ್ಲಿ ಇಂಗ್ರಾಮ್‌ ಸಿಕ್ಸರ್‌ ಬಾರಿಸಿದ್ದರಿಂದ ಧವನ್‌ 97 ರನ್ನಿಗೆ ಅಜೇಯರಾಗಿ ಉಳಿಯಬೇಕಾಯಿತು. 63 ಎಸೆತ ಎದುರಿಸಿದ ಅವರು 11 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

ಗಿಲ್‌, ರಸೆಲ್‌ ಮಿಂಚು: ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ ತಂಡ ಆರಂಭಕಾರ ಶುಭ್‌ಮನ್‌ ಗಿಲ್‌ ಹಾಗೂ ಸ್ಫೋಟಕ ಆಟಗಾರ ಆ್ಯಂಡ್ರೆ ರಸೆಲ್‌ ಸಿಡಿದು ನಿಂತರೂ 178 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳು ಯಶಸ್ವಿಯಾದರು. ಟಾಸ್‌ ಗೆದ್ದು μàಲ್ಡಿಂಗ್‌ ಆಯ್ಕೆ ಮಾಡಿಕೊಂಡ ಡೆಲ್ಲಿ ಮೊದಲ ಎಸೆತದಲ್ಲೇ ಜೋ ಡೆನ್ಲಿ ಅವರ ವಿಕೆಟ್‌ ಹಾರಿಸಿತು.

ರಾಬಿನ್‌ ಉತ್ತಪ್ಪ 28 ರನ್‌ (30 ಎಸೆತ, 4 ಬೌಂಡರಿ, 1 ಸಿಕ್ಸರ್‌) ತಾಳ್ಮೆಯ ಆಟವಾಡಿದರೆ, ಗಿಲ್‌ (65 ರನ್‌, 39 ಎಸೆತ, 7 ಬೌಂಡರಿ, 2 ಸಿಕ್ಸರ್‌) ಸಿಡಿಯುತ್ತ ಸಾಗಿದರು. ಉತ್ತಪ್ಪ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ನಿತೀಶ್‌ ರಾಣಾ ಗಳಿಕೆ 11ಕ್ಕೆ ಸೀಮಿತವಾಯಿತು. ಸ್ಟಾರ್‌ ಆಟಗಾರ ಆ್ಯಂಡ್ರೆ ರಸೆಲ್‌ ಮತ್ತೂಮ್ಮೆ ಮಿಂಚು ಹರಿಸಿದರು.

ಕೇವಲ 21 ಎಸೆತಗಳಲ್ಲಿ 45 ರನ್‌ ದೋಚಿದರು. ನಾಲ್ಕು ಸಿಕ್ಸರ್‌ ಹಾಗೂ 3 ಬೌಂಡರಿಗಳನ್ನು ಅವರ ಆಕರ್ಷಕ ಇನಿಂಗ್ಸ್‌ ಒಳಗೊಂಡಿತ್ತು. ಈ ನಡುವೆ ನಾಯಕ ದಿನೇಶ್‌ ಕಾರ್ತಿಕ್‌ ಹಾಗೂ ಕಾರ್ಲೋಸ್‌ ಬ್ರಾತ್‌ವೇಟ್‌ ವಿಫ‌ಲರಾಗುವ ಮೂಲಕ ಕೋಲ್ಕತದದ ದೊಡ್ಡ ಮೊತ್ತದ ಕನಸಿಗೆ ಅಂಕುಶ ಬಿತ್ತು. ಕೊನೆಗೆ ಅಬ್ಬರಿಸಿದ ಪೀಯೂಶ್‌ ಚಾವ್ಲಾ ಆರು ಎಸೆತಗಳಲ್ಲೇ ಎರಡು ಬೌಂಡರಿಗಳಿದ್ದ 14 ರನ್‌ ಸಂಪಾದಿಸಿ ಅಜೇಯರಾಗಿ ಉಳಿದರು ಡೆಲ್ಲಿ ಪರ ಅನುಭವಿ ವೇಗಿ ಇಶಾಂತ್‌ ಶರ್ಮಾ 4 ಓವರ್‌ಗಳಲ್ಲಿ ಕೇವಲ 21 ರನ್‌ ನೀಡುವುದಲ್ಲದೆ ಒಂದು ವಿಕೆಟ್‌ ಕಿತ್ತು ಗಮನ ಸೆಳೆದರು. ಕ್ರಿಸ್‌ ಮಾರಿಸ್‌, ಕ್ಯಾಗಿಸೊ ರಬಾಡ ಹಾಗೂ ಕೀಮೋ ಪೌಲ್‌ ತಲಾ 2 ವಿಕೆಟ್‌ ಗಳಿಸಿದರು

ಟಾಪ್ ನ್ಯೂಸ್

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.