ಭಜನಾ ಸ್ಪರ್ಧೆ: ಬಹುಮಾನ ಸಮಾನ ಹಂಚಿಕ
Team Udayavani, Apr 13, 2019, 11:44 AM IST
ಹುಬ್ಬಳ್ಳಿ: ಇಲ್ಲಿನ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಐದು ತಂಡಗಳು ಸಮಾನವಾಗಿ ಹಂಚಿಕೊಂಡಿವೆ.
ಪ್ರಥಮ ಬಹುಮಾನ: ಬೆಳಗಾವಿ ಜಿಲ್ಲೆ ಮದಿಹಳ್ಳಿಯ ಶ್ರೀ ಬಾಬಾ ಮಹಾರಾಜ ಮಂಡಳಿ, ಹಳ್ಳೂರ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಮುಧೋಳ ತಾಲೂಕಿನ ಗಣಿ ಗ್ರಾಮದ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಶ್ರೀ ಗುರು ಕುಮಾರೇಶ್ವರ ಭಜನಾ ಮಂಡಳಿ, ಗೋಕಾಕ ತಾಲೂಕಿನ ಗೋಸಬಾಳ ಗ್ರಾಮದ ಶ್ರೀ ಬಸವೇಶ್ವರ ಭಜನಾ ಮಂಡಳಿ ಪ್ರಥಮ ಸ್ಥಾನ ಹಂಚಿಕೊಂಡರು.
ದ್ವಿತೀಯ ಸ್ಥಾನ: ಗದುಗಿನ ದೈವಜ್ಞ ಭಜನಾ ಮಂಡಳಿ, ಹುಬ್ಬಳ್ಳಿಯ ವರಸಿದ್ದಿ ಭಜನಾ ಮಂಡಳಿ, ಬೀಳಗಿ ತಾಲೂಕಿನ ಕೋಲೂರ ಗ್ರಾಮದ ಜೈ ದುರ್ಗಾ ಭಜನಾ ಮಂಡಳಿ, ಬೆಳಗಾವಿ ಹುಣಸಿಕಟ್ಟಿ ಗ್ರಾಮದ ಶ್ರೀ ರುದ್ರಮುನಿ ಭಜನಾ ಮಂಡಳಿ, ಬಾಗಲಕೋಟೆ ಪಿ.ಎಂ. ಬುದ್ನಿ ಗ್ರಾಮದ ಶ್ರೀ ದಿಗಂಬರೇಶ್ವರ ಭಜನಾ ಮಂಡಳಿ ದ್ವಿತೀಯ ಸ್ಥಾನ ಹಂಚಿಕೊಂಡರು.
ತೃತೀಯ ಬಹುಮಾನ: ಮುಧೋಳ ತಾಲೂಕಿನ ಮುಗಳಕೋಡ ಶ್ರೀ ಸರಸ್ವತಿ ಭಜನಾ ಮಂಡಳಿ, ಬಾಗಲಕೋಟೆ ರನ್ನ ಬೆಳಗಲಿಯ ಶ್ರೀರಾಮಾನಂದ ಭಜನಾ ಮಂಡಳಿ, ಗೋಕಾಕ ಚಿಕ್ಕನಂದಿ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಮೂಡಲಗಿ ಸುಣದೊಳಿ ಕ್ರಾಸ್ ಶ್ರೀ ಗದಲೆಮ್ಮದೇವಿ ಭಜನಾ ಮಂಡಳಿ, ಅಥಣಿ ತಾಲೂಕಿನ ಬಳವಾಡ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದುಕೊಂಡವು.
ಸಮಾಧಾನಕರ ಬಹುಮಾನ: ಚಾಮರಾಜನಗರ ಕಟ್ನವಾಡಿ ಶ್ರೀ ಗುರುಮಲ್ಲೇಶ್ವರ ಭಜನಾ ಸಂಘ, ವಡಿಗಾಲ ಶ್ರೀ ಶರಣೆ ನೀಲಾಂಬಿಕೆ ಭಜನಾ ಸಂಘ, ಅಣ್ಣಿಗೇರಿ ಶ್ರೀ ರುದ್ರಮುನೀಶ್ವರ ಭಜನಾ ಸಂಘ, ಬೆಳಗಾವಿ ಉಳ್ಳಿಗೇರಿ ಶ್ರೀ ಸಂಗಮೇಶ್ವರ ಭಜನಾ ಮಂಡಳಿ, ಬೆಂಗಳೂರ ಶ್ರೀ ಗಾನಸುಧೆ ಭಜನಾ ಮಂಡಳಿ, ತುರುವೇಕೆರೆ ಮುನಿಯೂರ ಶ್ರೀ ಆರೂಢ ಭಜನಾ ಸಂಘ, ಚಿತ್ರದುರ್ಗ ಸಪ್ತಗಿರಿ ಭಜನಾ ಮಂಡಳಿ, ಶಿರಸಿ ಕಳವೆ ಶ್ರೀಕನಕಾಂಬಾ ಭಜನಾ ಮಂಡಳಿ, ಸೊಂಡೂರ ಸೋವೇನಹಳ್ಳಿ ಶ್ರೀ ಸಿದ್ದೇಶ್ವರ ಭಜನಾ ತಂಡ, ಹಾವೇರಿ ಗುಂಡಗಟ್ಟಿ ಶ್ರೀ ಮರುಳ ಸಿದ್ದೇಶ್ವರ ಯುವಕ ಭಜನಾ ಮಂಡಳಿ, ಹುಕ್ಕೇರಿ ಪರಕನಟ್ಟಿ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಮುಂಡರಗಿ ಧರ್ಮಟ್ಟಿ ಶ್ರೀ ಈಶ್ವರಲಿಂಗ ಭಜನಾ ಮಂಡಳಿ, ಅಥಣಿ ಶ್ರೀ ಸಿದ್ದೇಶ್ವರ ದಾಸೋಹ ಭಜನಾ ಮಂಡಳಿ, ಅಥಣಿ ಯಲ್ಲಮ್ಮನವಾಡಿ ಶ್ರೀ ರೇಣುಕಾ ದೇವಿ ಭಜನಾ ಮಂಡಳಿ, ಸವದತ್ತಿ ಚಿಕ್ಕುಳ್ಳಿಗೇರಿ ಶ್ರೀ ಸಂಗಮೇಶ್ವರ ಭಜನಾ ಮಂಡಳಿ ಸಮಾಧಾನಕರ ಬಹುಮಾನ ಪಡೆದಿವೆ.
ವಿಶೇಷ ಪುರಸ್ಕಾರದಲ್ಲಿ ಗೋಕಾಕದ ಶ್ರೀ ಗುರುನಾಥರೂಢ ಭಜನಾ ಮಂಡಳಿ ಮಹಿಳಾ ಪುರಸ್ಕಾರ, ಧಾರವಾಡ ಬೆಣಚಿ ಮಾಣಿಕೇಶ್ವರ ಭಜನಾ ಮಂಡಳಿ ಬಾಲಕ ಪುರಸ್ಕಾರ, ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಭಜನಾ ಮಂಡಳಿ ಬಾಲಕಿ ಪುರಸ್ಕಾರ, ಶಿರಗಾಂವ ಶ್ರೀ ಸಿದ್ಧಾರೂಢ ಭಜನಾ ಮಂಡಳಿ ಉತ್ತಮ ಗಾಯಕ ಪುರಸ್ಕಾರ, ವಡೇರಹಟ್ಟಿ ಪಂಚಸಿದ್ದೇಶ್ವರ
ಭಜನಾ ಮಂಡಳಿ ಉತ್ತಮ ತಾಳ ಪುರಸ್ಕಾರ, ಯಂಕಂಚಿ ಬಸವೇಶ್ವರ ಭಜನಾ ಮಂಡಳಿ ಉತ್ತಮ ಹಾರ್ಮೋನಿಯಂ, ಶಲವಡಿ ಶ್ರೀ ಗುರುಶಾಂತೇಶ್ವರ ಭಜನಾ ಮಂಡಳಿ ಉತ್ತಮ ಡಗ್ಗಾ, ಮುಗಳಿಹಾಳ ಶ್ರೀ ಸಿದ್ಧಾರೂಢ ಭಜನಾ ಮಂಡಳಿ ಉತ್ತಮ ತಬಲಾ, ಉಗ್ನಿಕೇರಿ ಶ್ರೀ ಸಿದ್ಧಾರೂಢ ಭಜನಾ ಮಂಡಳಿ ವಿಶೇಷ ಪುರಸ್ಕಾರ ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭ: ಏ.7ರಿಂದ 12ರ ವರೆಗೆ ನಡೆದ ರಾಜ್ಯಮಟ್ಟದ ಭಜನಾ ಸ್ಪರ್ಧೆಯಲ್ಲಿ ಒಟ್ಟು 200ಕ್ಕೂ ಅಧಿಕ ತಂಡಗಳು ಆಗಮಿಸಿದ್ದವು. ಅಂತಿಮ ಸುತ್ತಿನಲ್ಲಿ 68 ತಂಡಗಳು ಬಂದಿದ್ದು, ಪ್ರಥಮ, ದ್ವಿತೀಯ ಹಾಗೂ ತತೀಯ ಸ್ಥಾನಕ್ಕೆ ಎಲ್ಲ ತಂಡಗಳು ಉತ್ತಮ ಪೈಪೋಟಿ ನಡೆಸಿದವು. ಅಂತಿಮವಾಗಿ ಐದು-ಐದು ತಂಡಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಸಹಜಾನಂದ ಸ್ವಾಮೀಜಿ, ಶ್ರೀ ಡಾ| ಆರೂಢ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಭಜನಾ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಮಠದ ಟ್ರಸ್ಟ್ ಚೇರನ್ ಡಿ.ಡಿ. ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ವಾಸುದೇವಾನಂದ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಧರ್ಮದರ್ಶಿಗಳಾದ ವೈ.ಎ. ದೊಡ್ಡಮನಿ, ಎಸ್.ಡಿ. ಉಕ್ಕಲಿ, ನಾರಾಯಣಪ್ರಸಾದ ಪಾಠಕ, ಎಸ್.ಐ. ಕೋಳಕೂರ, ಕೆ.ಎಲ್. ಪಾಟೀಲ, ವಿಜಯಲಕ್ಷ್ಮಿ ಪಾಟೀಲ, ಡಾ| ಬಸವರಾಜ ಸಂಕನಗೌಡರ, ಧರಣೇಂದ್ರ ಜವಳಿ, ಜಗದೀಶ ಮಗಜಿಕೊಂಡಿ ಸೇರಿದಂತೆ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Dharwad: ವಾಗ್ವಾದ ನಡೆದು ಎರಡು ಸುತ್ತು ಫೈರಿಂಗ್: ನಾಲ್ವರು ವಶಕ್ಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.