ಖರ್ಗೆಯವರೇ ನಾನು ಎನಬೇಡಿ, ನಾವು ಎನ್ನಿ: ಜಾಧವ

371ನೇ (ಜೆ)ಜಾರಿ ಸಾಮೂಹಿಕ ಹೋರಾಟದ ಫಲ

Team Udayavani, Apr 13, 2019, 12:59 PM IST

13-April-15

ವಾಡಿ: ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಡಾ| ಉಮೇಶ ಜಾಧವ, ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ವಿಶ್ವನಾಥ ಪಾಟೀಲ ಹೆಬ್ಟಾಳ ಪಾಲ್ಗೊಂಡಿದ್ದರು.

ವಾಡಿ: ಹೈದ್ರಾಬಾದ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಾಂವಿಧಾನಿಕ 371ನೇ (ಜೆ)ಕಲಂ ಕಾಯ್ದೆ ಜಾರಿಗೆ ತರುವಲ್ಲಿ ಬಿಜೆಪಿ ಸೇರಿದಂತೆ ಈ ಭಾಗದ ಅನೇಕ ನಾಯಕರುಗಳ ಹೋರಾಟದ ಶ್ರಮವಿದೆ. ಹೀಗಾಗಿ ನಾನು
ಮಾಡಿದ್ದೇನೆ ಎನ್ನುವ ಬದಲು ಖರ್ಗೆಯವರು ನಾವು ಮಾಡಿದ್ದೇವೆ ಎನಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಟಾಂಗ್‌ ನೀಡಿದರು.

ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸಿದರು.

ಹೋದಲ್ಲೆಲ್ಲ ಖರ್ಗೆ ಅವರು ನಾನು ಅಭಿವೃದ್ಧಿ ಮಾಡಿದ್ದೇನೆ. ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಯಾರೂ ಮಾಡದಂಥ ವಿಶೇಷ ಅಭಿವೃದ್ಧಿ ಮಾಡಿದ್ದಾರಾ? ರಾಜಕಾರಣದಲ್ಲಿ ಖರ್ಗೆ ಮುಖ್ಯಮಂತ್ರಿ ಸ್ಥಾನ ಹೊರತುಪಡಸಿ ಎಲ್ಲ ಖಾತೆಗಳನ್ನು ಅನುಭವಿಸಿದ್ದಾರೆ. ಆದರೆ ಅವರನ್ನು ಗೆಲ್ಲಿಸಿದ ಗುರುಮಠಕಲ್‌ ಕ್ಷೇತ್ರ ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಶೂನ್ಯ ಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಜನರು
ಯಾದಗಿರಿ ಜಿಲ್ಲೆಯಿಂದ ಗುಳೆ ಹೋಗುತ್ತಾರೆ. ಇದೇನಾ ಅವರು ಮಾಡಿರುವ ಅಭಿವೃದ್ಧಿ ಎಂದು ಪ್ರಶ್ನಿಸಿದರು.

ಕಲಬುರಗಿ ನಗರದ ಎಂಎಸ್‌ಕೆ ಮಿಲ್‌, ಶಹಾಬಾದ ನಗರದ ಸಿಮೆಂಟ್‌ ಕಂಪನಿ
ಹಾಗೂ ಕುರುಕುಂಟಾದ ಸಿಮೆಂಟ್‌ ಘಟಕಗಳು ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಮಂತ್ರಿಯಾಗಿದ್ದಾಗಲೇ ಬಂದ್‌ ಆಗಿವೆ. ಇದನ್ನು
ಜನರು ಮರೆಯಬಾರದು ಎಂದರು. ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ರಾಜು
ಮುಕ್ಕಣ್ಣ ಮಾತನಾಡಿ, ಪಾಕಿಸ್ತಾನದ ಪಾಪಿಗಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಉಗ್ರರನ್ನು ಕೊಂದ ಭಾರತೀಯ ಸೈನ್ಯದ ಕ್ರಮವನ್ನೇ ಕಾಂಗ್ರೆಸ್‌ ಪ್ರಶ್ನಿಸಿದೆ. ಎಷ್ಟು ಜನರು ಸತ್ತಿದ್ದಾರೆ ಲೆಕ್ಕ ಕೊಡಿ ಎಂದು ಕಾಂಗ್ರೆಸ್‌ ನಾಯಕರು
ಕೇಳುತ್ತಿದ್ದಾರೆ. ರಕ್ತ ಹೀರುವ ಸೊಳ್ಳೆಗಳನ್ನು ಹೊಸಕಿಹಾಕಿದ ಬಳಿಕ ಎಷ್ಟು ಸೊಳ್ಳೆ ಸತ್ತಿವೆ ಎಂದು ಲೆಕ್ಕ ಇಡಲಾದಿತೆ? ಕಾಂಗ್ರೆಸ್‌ ಪಕ್ಷದ ಜನದ್ರೋಹ ಬಯಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮುಖ ನೋಡಿ ಸಾಕಾಗಿದೆ. ಅವರ ಮಗ ಪ್ರಿಯಾಂಕ್‌ ಖರ್ಗೆ ಬಹಳ ಡೇಂಜರ್‌. ಮಂತ್ರಿಯಾಗಿ ಗಾಳಿಯಲ್ಲಿ ಓಡಾಡುತ್ತಿದ್ದಾನೆ. ಇವರ ಆಟ ಕೊನೆಗಾಣಬೇಕು ಎಂದು ಹೇಳಿದರು.

ಚುನಾವಣೆ ನಂತರ ಡಾ| ಜಾಧವ ದವಾಖಾನೆಗೆ ಹೋಗುತ್ತಾರೆ ಎಂದು
ಟೀಕಿಸಿದ್ದ ಕಾಂಗ್ರೆಸ್‌ನ ಬಾಬುರಾವ ಚವ್ಹಾಣ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜು
ಮುಕ್ಕಣ್ಣ, ಚುನಾವಣೆಯಲ್ಲಿ ಜಾಧವ ಗೆದ್ದು ಸಚಿವರಾಗುತ್ತಾರೆ. ಸೋತ ನಂತರ ಖರ್ಗೆ ಅವರು ರೋಗಿಯಾಗಿ ಡಾ| ಉಮೇಶ ಜಾಧವ ಅವರ ದವಾಖಾನೆಯಲ್ಲಿ ದಾಖಲಾಗುತ್ತಾರೆ ಎಂದು ಚುಚ್ಚಿದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ವಾಲ್ಮೀಕಿ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ಇಟಗಾ ಮಾತನಾಡಿದರು.

ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ವಾಡಿ ಅಧ್ಯಕ್ಷ ಬಸವರಾಜ
ಪಂಚಾಳ, ಜಿಲ್ಲಾ ಮುಖಂಡ ಶರಣಪ್ಪ ತಳವಾರ, ಶ್ರೀಶೈಲ ನಾಟೀಕಾರ,
ಚಂದ್ರಕಾಂತ ಹೂಗಾರ, ಶಂಕರ ಜಾಧವ ಪಾಲ್ಗೊಂಡಿದ್ದರು.

ಅಂಬೇಡ್ಕರ್‌ ಅವರು ಕಾಂಗ್ರೆಸ್‌ ಈಸ್‌ ಬರ್ನಿಂಗ್‌ ಹೌಸ್‌ ಎಂದು ಹೇಳಿದ್ದಾರೆ. ಹಾಗಾಗಿ ನಾನು ಸುಡುವ ಮನೆ ಬಿಟ್ಟು ಬಿಜೆಪಿ ಎನ್ನುವ ಅಭಿವೃದ್ಧಿಯ ಮನೆಗೆ ಬಂದಿದ್ದೇನೆ. ನಾನು ಗೆದ್ದರೆ ನರೇಂದ್ರ ಮೋದಿ ಗೆದ್ದಂತೆ. ಖರ್ಗೆ ವಿರುದ್ಧ ಸೋತವರೆಲ್ಲಾ ಕಾಂಗ್ರೆಸ್‌ ಸೇರಿದ್ದಾರೆ. ಖರ್ಗೆ ಹತ್ತಿರ ಅಂತಹ ಯಾವ ಮಂತ್ರವಿದೆಯೋ ನನಗೆ ಅರ್ಥವಾಗುತ್ತಿಲ್ಲ.
ಡಾ| ಉಮೇಶ ಜಾಧವ,
ಕಲಬುರಗಿ ಲೋಕಸಭೆ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಟಾಪ್ ನ್ಯೂಸ್

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

1-shaba

Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ

Mang-Airport

Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್‌ ವಾರಸುದಾರರಿಗೆ ಹಸ್ತಾಂತರ

1-tanker

Mangaluru; ಟ್ಯಾಂಕರ್‌ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.