ಧರ್ಮದ ತಳಹದಿಯಲ್ಲಿ ನಡೆದರೆ ಬದುಕು ಸುಂದರ
ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಕಲಿಸಿ
Team Udayavani, Apr 13, 2019, 3:01 PM IST
ಸಿರುಗುಪ್ಪ: ಧಾರ್ಮಿಕ ವಸಂತ ಶಿಬಿರ ಕಾರ್ಯಕ್ರಮವನ್ನು ಪೂರ್ಣಪ್ರಜ್ಞಾವಿದ್ಯಾಪೀಠದ ಉಪನ್ಯಾಸಕ ಭೀಮಸೇನ ಆಚಾರ್ಯ ಉದ್ಘಾಟಿಸಿದರು.
ಸಿರುಗುಪ್ಪ: ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ, ಭಾಗವತ
ವೇದಗಳಲ್ಲಿ ತಿಳಿಸಿದ ನೀತಿ ಪಾಠಗಳನ್ನು ಹಾಗೂ ಸಜ್ಜನರ ಸಂಗದಿಂದ
ನಮ್ಮಲ್ಲಿ ಹೇಗೆ ಉತ್ತಮ ಗುಣಗಳು ಬೆಳೆಯುತ್ತವೆ ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡುವುದು ಧಾರ್ಮಿಕ ವಸಂತ ಶಿಬಿರದ ಉದ್ದೇಶವಾಗಿದೆ
ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಉಪನ್ಯಾಸಕ ಭೀಮಸೇನ ಆಚಾರ್ಯ
ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ
ಗುರುರಾಜ ಅಷ್ಟೋತ್ತರ ಮಂಡಳಿ ಹಾಗೂ ಪೂರ್ಣಪ್ರಜ್ಞಾ ವಿದ್ಯಾಪೀಠ
ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ವಸಂತ
ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಾದರೆ
ಧರ್ಮದ ತಳಹದಿ ಹೊಂದಿರುವುದು ಅವಶ್ಯಕವಾಗಿದೆ. ಶ್ರೀಪೇಜಾವರ
ವಿಶ್ವೇಶ್ವರ ತೀರ್ಥರು ಸಾಮಾನ್ಯ ಜನರು ಕೂಡ ಆಧ್ಯಾತ್ಮವನ್ನು ತಮ್ಮ ಜೀವನದಲ್ಲಿ ಒಳಪಡಿಸಿಕೊಳ್ಳುವುದನ್ನು ಕಲಿಸುವ ಉದ್ದೇಶದಿಂದ ಬೇಸಿಗೆ
ಕಾಲದಲ್ಲಿ ಧಾರ್ಮಿಕ ವಸಂತ ಶಿಬಿರ ಆಯೋಜಿಸಲಾಗುತ್ತಿದೆ. ಮಹಾಭಾರತ,
ರಾಮಾಯಣ ಗ್ರಂಥಗಳನ್ನು ಶಾಸ್ತ್ರಿಯವಾಗಿ ಅಧ್ಯಾಯನ ಮಾಡುವುದರಿಂದ ಈ ಗ್ರಂಥಗಳಲ್ಲಿನ ಮಹನೀಯರ ಜೀವನ ಆದರ್ಶ ತತ್ವಗಳನ್ನು, ನೀತಿ ಧರ್ಮಗುಣಗಳು ನಮಗೆ ತಿಳಿಯುತ್ತವೆ. ಮಹಿಳೆಯರಿಗೆ, ಬಾಲಕಿಯರಿಗೆ ಸ್ತ್ರೀ ಧರ್ಮ ಕುರಿತು ಬೋಧನೆ, ಉಪನ್ಯಾಸ ಕಾರ್ಯಕ್ರಮ 100 ದಿನಗಳ ಕಾಲ ನಡೆಸಲಾಗುವುದು ಎಂದು ತಿಳಿಸಿದರು.
ಉಪನ್ಯಾಸಕ ಸಂಜೀವ್ ಆಚಾರ್ಯ ಮಾತನಾಡಿ, ಇಂದು ನಮ್ಮ ಮಕ್ಕಳು
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟು ನಮ್ಮ ಸಂಸ್ಕೃತಿಯಿಂದ
ಬದಲಾಗುತ್ತಿರುವ ಈ ಸಮಯದಲ್ಲಿ ದಾಸವರಣ್ಯರು, ಮಹನೀಯರು,
ಸಂತರು, ಮಹಾತ್ಮರು ನೀಡಿದ ನಮ್ಮ ಸನಾತನ ಸಂಸ್ಕೃತಿಯನ್ನು
ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಶಿಬಿರದಲ್ಲಿ ಮಕ್ಕಳಿಗೆ ಅನೇಕ ವಿಷಯಗಳನ್ನು ತಿಳಿಸಲಾಗುತ್ತದೆ. ಹರಿಸರ್ವೋತ್ತಮ, ವಾಯುಜೀವೋತ್ತಮ ಎನ್ನುವ ಸತ್ಯವನ್ನು ನಾವೆಲ್ಲರೂ ನಂಬಿ ಪಾಲಿಸಿ ಈ ಭಗವಂತನ ನಾಮಸ್ಮರಣೆ
ಮಾಡಿದರೆ ಪಿತೃದೇವತೆಗಳು ಸಂತೃಪ್ತಿ ಹೊಂದುತ್ತಾರೆ ಎಂದು ತಿಳಿಸಿದರು.
ಪೂರ್ಣಪ್ರಜ್ಞಾ ವಿದ್ಯಾಪೀಠದ ಉಪನ್ಯಾಸಕ ವೆಂಕಟೇಶ ಆಚಾರ್ಯ, ಗುರು ಅಷ್ಟೋತ್ತರ ಮಂಡಳಿಯ ಗೌರವಾಧ್ಯಕ್ಷ ಎಚ್.ಜಿ.ವೆಂಕಟೇಶ
ಆಚಾರ್ಯ, ಉಪಾಧ್ಯಕ್ಷ ರಮೇಶ್ ಕುಲಕರ್ಣಿ, ಶಿಬಿರಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.