ಸಾಮರಸ್ಯದಿಂದ ಆರೋಗ್ಯಕರ ಸಮಾಜ
ಧಾರ್ಮಿಕ ನಂಬಿಕೆ ಮೇಲೆ ನಿಂತಿದೆ ಭಾರತ ಪಟ್ಟಭದ್ರ ಹಿತಾಸಕ್ತಿಗಳಿಂದ ಸಮಾಜ ಹಾಳು
Team Udayavani, Apr 13, 2019, 5:32 PM IST
ಯಾದಗಿರಿ: ಸಾಮರಸ್ಯದ ಜೀವನದಿಂದ ಆರೋಗ್ಯಕರ ಸಮಾಜ ನಿರ್ಮಾಣ
ಸಾಧ್ಯವಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ವಡ್ನಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೆಡಗಿಮದ್ರಾ ಸಂಸ್ಥಾನ
ಮಠದ ಶಾಖಾಮಠವಾದ ಸಿದ್ದಲಿಂಗೇಶ್ವರರ ಪ್ರಥಮ ಜಾತ್ರಾ ಮಹೋತ್ಸವ ಧರ್ಮಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಭಾರತ ದೇಶ ಧಾರ್ಮಿಕ ನಂಬಿಕೆ ಮೇಲೆ ನಿಂತಿದೆ. ಆದರೆ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಸಮಾಜ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ
ಯತ್ನಿಸಬೇಕು ಎಂದು ಹೇಳಿದರು.
ಮಠಮಾನ್ಯಗಳು ಅನಾದಿ ಕಾಲದಿಂದ ನಿಸ್ವಾರ್ಥದಿಂದ ತ್ರಿವಿಧ ದಾಸೋಹಗಳ ಮೂಲಕ ದೇಶದ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಿಕೊಂಡು ಸಾಗುತ್ತಿವೆ. ಮಹಾತ್ಮರು ಲೋಕಕಲ್ಯಾಣಕ್ಕಾಗಿ ಮಾಡಿಕೊಂಡ ಸಂಕಲ್ಪಗಳಿಗೆ ಅನೇಕ ತೊಂದರೆಗಳು ಎದುರಾದರೂ ಅದು ಕೊನೆಗೆ ದೂರವಾಗಿ ಇಷ್ಟಾರ್ಥ ಈಡೇರುತ್ತದೆ. ಆ ಸಂಕಲ್ಪದಲ್ಲಿ ಮಹಾಶಕ್ತಿ ಇರುತ್ತದೆ. ಅದಕ್ಕೆ ಸಾಕ್ಷಿಯಾಗಿ ಲಿಂ. ಸಿದ್ದಲಿಂಗೇಶ್ವರರ ಸಂಕಲ್ಪ ಭಕ್ತಿ ಸಂಭ್ರದಿಂದ ಕಾಣುತ್ತಿದ್ದೇವೆ ಎಂದು ಹೇಳಿದರು.
ಮಹಾತ್ಮರ ಸ್ವಭಾವ ಸಮಯ ಬಂದಾಗ ವಜ್ರಕ್ಕಿಂತ ಕಠಿಣವಾಗುತ್ತದೆ.
ಕೆಲ ಸಂದರ್ಭದಲ್ಲಿ ಹೂವಿಗಿಂತ ಮೃದು ಸ್ವಭಾವ ಅವರಲ್ಲಿ ಕಾಣುತ್ತೇವೆ. ಎಲ್ಲರು ಧಾರ್ಮಿಕ ಪರಂಪರೆ ಗೌರವಿಸಿ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ತಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.
ತಮ್ಮಲ್ಲರ ಆಶಯದಂತೆ ಶ್ರೀಮಠಕ್ಕೆ ಉತ್ಸಾಹಿ ಯುವ ಸ್ವಾಮೀಜಿಗಳಾದ
ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ನೇತೃತ್ವ ವಹಿಸಿಕೊಂಡಿದ್ದಾರೆ. ಅವರು ಕಡಿಮೆ ಸಮಯದಲ್ಲಿ ಸಮಾಜ ಮೆಚುÌವಂತಹ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳುವ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡಿದಲ್ಲಿ ಇದೊಂದು ಪ್ರಸಿದ್ಧ ಕ್ಷೇತ್ರವಾಗಿ ಬದಲಾಗುತ್ತದೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಪಾಳದ ಡಾ| ಗುರುಮೂರ್ತಿ ಶಿವಾಚಾರ್ಯರು
ಹಾಗೂ ದೇವಾಪುರದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಈ
ನಾಡಿನಲ್ಲಿ ಅನೇಕ ಶರಣರು ತಮ್ಮ ಆಧ್ಯಾತ್ಮಿಕ ತಪಸ್ಸಿನಿಂದ ಕಾಲಕಾಲಕ್ಕೆ ಪವಾಡ ಮಾಡುವ ಮೂಲಕ ಭಕ್ತರ ಸಂಕಷ್ಟಗಳನ್ನು ದೂರಮಾಡಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಮಠಮಾನ್ಯಗಳಿಗೆ ಅಲ್ಲಿನ ಭಕ್ತರೆ ಆಸ್ತಿಯಾಗಿದ್ದಾರೆ. ಗುರುವಿನ ಮಾರ್ಗದರ್ಶನದಲ್ಲಿ ಆದರ್ಶ ಬದುಕು ಸಾಗಿಸಬೇಕು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ವಡ್ನಳ್ಳಿ, ಹೆಡಗಿಮದ್ರಾ ಮಠಗಳ ಪೀಠಾಧಿ ಪತಿ
ಶಾಂತತಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯರು ಮಾತನಾಡಿ, ಈಗ
ಕ್ಷೇತ್ರದಲ್ಲಿ ಬರದ ಛಾಯೆ ಆವರಿಸಿದೆ. ಶ್ರೀಶೈಲ ಜಗದ್ಗುರುಗಳ ಆಗಮನ ಹಾಗೂ
ಆಶೀರ್ವಾದಿಂದ ಅದು ದೂರವಾಗಿ ರೈತರ ಮುಖದಲ್ಲಿ ಸಂತಸ ಮೂಡಲಿ ಎಂದು ಹೇಳಿದರು.
ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಶಾಂತಯ್ಯ ಸ್ವಾಮಿ
ವಡ್ನಳ್ಳಿ, ಬಸಯ್ಯ ಸ್ವಾಮಿ ಬೊಮ್ಮಶೆಟ್ಟಹಳ್ಳಿ, ಮಹಾಂತಯ್ಯ ಸ್ವಾಮಿ ಹೆಡಗಿಮದ್ರಾ, ರಾಮರಡ್ಡಿಗೌಡ ಕ್ಯಾಸಪನಳ್ಳಿ, ಕಿಶನರಾವ ಹೆಡಗಿಮದ್ರಾ, ವಿನಾಯಕರಡ್ಡಿ ಇದ್ದರು. ಮಡಿವಾಳಯ್ಯ ಶಾಸ್ತ್ರೀಗಳು ಜೇರಟಗಿ ಸ್ವಾಗತಿಸಿದರು. ಇದಕ್ಕೂ ಮೊದಲು ಶ್ರೀಶೈಲ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.