ಲೋಕಾಂತ ಮತ್ತು ಏಕಾಂತದೊಳಗೆ ಮರೆಯಾದ ಮಾಲತಿ


Team Udayavani, Apr 14, 2019, 6:00 AM IST

j-3

ನಾಟಕ ನಿರ್ದೇಶಿಸುತ್ತಿರುವ ಮಾಲತಿ ಕೃಪೆ: ಪುರುಷೋತ್ತಮ ತಲವಾಟ

ಪ್ರಸಿದ್ಧ ರಂಗ ನಿರ್ದೇಶಕಿ, ಮಾನವಪರ ಹೋರಾಟಗಾರ್ತಿ, ಲೇಖಕಿ ಸಾಗರದ ಎಸ್‌. ಮಾಲತಿ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅವರನ್ನು ನೆನೆದು…

ಪ್ರಿಯ ಮಾಲತಿ,
ನನಗೆ ನಿಮ್ಮ ಕುಟುಂಬ ಹೊಸತೇನಲ್ಲ. ನಾನು ನಿಮ್ಮ ತಂದೆ ಶೇಷಗಿರಿ ನಾಯಕ್‌ ನಡೆಸುತ್ತಿದ್ದ ಸಾಗರದ ಮಾರಿಗುಡಿಯ ಎದುರಿನ ಸಾಲಿನ ಮೂರನೇ ಜೈಹಿಂದ್‌ ಬೇಕರಿಗೆ ಸಾಗರದಲ್ಲಿ ಓದುತ್ತಿದ್ದಾಗ ಅಪರೂಪಕ್ಕಾದರೂ ಹೋಗಿ ಬನ್ಸ್‌ ತಗೊಂಡು ತಿನ್ನುತ್ತಿದ್ದೆ. ಆಗ ಬನ್ಸ್‌ ಬೆಲೆ ಆರು ಪೈಸೆ ಇತ್ತು. ಸಾಗರದಲ್ಲಿ ನಿಮ್ಮದೇ ಫೇಮಸ್‌ ಆಗಿರೋ ಬೇಕರಿ ಅಥವಾ ನಿಮ್ಮದೊಂದೇ ಬೇಕರಿ. ಬೇಕರಿಯಲ್ಲಿ ಸದಾ ಕಾರ್ಯತತ್ಪರರಾದ ಬಿಳಿ ಬಿಳಿಯಾಗಿದ್ದ ನಿಮ್ಮ ತಂದೆಯ ನೆನಪು ನನಗಿನ್ನೂ ಕಾಣಿಸುತ್ತದೆ.

ಆಗ ಸಾಗರ ಏನು ಮಹಾ ಬೆಳೆದಿತ್ತು. ನಾಲ್ಕು ಸರ್ತಿ ಓಡಾಡಿದರೆ ಎಲ್ಲರಿಗೂ ಎಲ್ಲರೂ ಪರಿಚಯವಾಗುತ್ತಿದ್ದರು. ಹಾಗೇ ನಿಮ್ಮನ್ನು ನಾನು ರಸ್ತೆಯಲ್ಲಿ ಓಡಾಡುತ್ತಿರುವಾಗ- ಈ ಬಿಳಿ ಬಿಳಿಯ ಹುಡುಗಿ- ಜೈಹಿಂದ್‌ ಬೇಕರಿಯವರ ಮಗಳೆಂದು ಹೇಳಿದವರು ಆಗ ನಿರ್ಮಲಾ ಕಾನ್ವೆಂಟಿನಲ್ಲಿ ಓದುತ್ತಿದ್ದ ನನ್ನ ಅಕ್ಕಂದಿರು. ಆಮೇಲೆ ಸಾಗರದ ಲಾಲ್‌ ಬಹದ್ದೂರ್‌ ಕಾಲೇಜಿನ ವಾರ್ಷಿಕ ಮ್ಯಾಗಜಿನ್‌ನಲ್ಲಿ ನಿಮ್ಮದೇ ಮತ್ತು ಬಿ. ಆರ್‌. ಜಯಂತರ ಫೋಟೊ ಒಟ್ಟಿಗೆ ಒಂದು ಪುಟದಲ್ಲಿ ಪ್ರಧಾನವಾಗಿ ಪ್ರಕಟವಾಗಿತ್ತು. ನೀವು ರ್‍ಯಾಂಕ್‌ ಪಡೆದಿದ್ದಕ್ಕೋ ಅಥವಾ ವಿಶ್ವವಿದ್ಯಾನಿಲಯದ ಸೆನೆಟ್‌ ಪ್ರತಿನಿಧಿಯಾಗಿದ್ದಕ್ಕೋ- ನೆನಪು ಸಾಲದು.

ಆಮೇಲೆ ನಿಮ್ಮನ್ನು ನಾನು ನೋಡಿದ್ದು ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ. ನಾನು ಗಂಗೋತ್ರಿಯಲ್ಲಿ ಎಂಎ ಮುಗಿಸಿ ಕೆಲವು ವರುಷದ ನಂತರ ಹೀಗೇ ಗಂಗೋತ್ರಿಗೆ ಬಂದಾಗ ನೀವು ಕಂಡಿರಿ. ಸಿಕ್ಕಿರಿ. ಮಾತನಾಡಿದೆವು. ಆಗಲೇ ನನಗೆ ಗೊತ್ತಾಗಿದ್ದು ನೀವು ಹಾ. ಮಾ. ನಾಯಕರ ಮಾರ್ಗ ದರ್ಶನದಲ್ಲಿ ಡಾಕ್ಟರೇಟ್‌ ಸಂಶೋಧನ ವಿದ್ಯಾರ್ಥಿಯಾಗಿದ್ದು. ಬಿಳಿಯ ಚೀಸ್‌ನ ಹೂವಿನ ಪ್ರಿಂಟ್‌ನ ಸೀರೆ ಉಟ್ಟಿದ್ದಿರಿ. ಎಷ್ಟು ಮೃದುಮಾತು.

ಆಮೇಲೇನೂ ನಾವು ಪದೇ ಪದೇ ಭೇಟಿಯಾಗಲಿ, ಪತ್ರ ವ್ಯವಹಾರಗಳಾಗಲಿ ಇರಲಿಲ್ಲ. ಒಮ್ಮೆ ಸಾಗರದಲ್ಲಿದ್ದಾಗ ನಿಮ್ಮ ಪುಟ್ಟ ಕವನ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಶಾಲೆಯ ಹುಡುಗಿಯೊಬ್ಬಳು ಪದೇಪದೇ ತನ್ನ ಪುಸ್ತಕದಲ್ಲಿದ್ದ ನವಿಲುಗರಿಯನ್ನು ನೋಡುತ್ತಿದ್ದುದು- ಅದು ಎರಡಾಗುತ್ತ ಮೂರಾಗುತ್ತಾ- ಎಂದು ನೋಡುತ್ತಿರುವುದು. ನನಗೆ ಇಷ್ಟವಾದ ಕವಿತೆ. ನಾವು ಆಮೇಲೆ ಸಿಕ್ಕಾಗ ನಿಮಗದನ್ನು ಅನೇಕ ಬಾರಿ ಹೇಳಿದ್ದೆ.

ಆಮೇಲೆ ದಿಢೀರನೆ ನೀವು ಎಡಪಂಥೀಯ ರಂಗ ಚಳುವಳಿಯನ್ನು ಹುಟ್ಟುಹಾಕಿದ ಸಮುದಾಯದಲ್ಲಿ ಪ್ರಧಾನ ಪಾತ್ರ ವಹಿಸಿ ನಾಡಿನಾದ್ಯಂತ ಪರಿಚಯವಾದಿರಿ. ಮತ್ತೆ ನಮ್ಮ ಭೇಟಿಯಾದದ್ದು ಉಡುಪಿಯಲ್ಲಿ “ಬಂಡಾಯದ ಸಮಾವೇಶ’ದಲ್ಲಿ. ಆಗ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಇದೇ ಸೆಮಿನಾರ್‌ನಲ್ಲಿ ಬರಗೂರು, ಡಿ.ಆರ್‌. ನಾಗರಾಜ, ಪ್ರಸನ್ನರ ಭಾಷಣದ ಆವೇಶಗಳಿದ್ದವು. ಒಂದು ಸಂದರ್ಭದಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಕೋಪಾವಿಷ್ಟರಾದ ಪ್ರಸನ್ನ ಸಿಟ್ಟಿನಿಂದ ಎದ್ದಾಗ ಅವರನ್ನು ಕೈಹಿಡಿದು ಕೂರಿಸಿದಿರಿ.

ಆನಂತರ ಜೀವನಕ್ಕೆ ಸೆಡ್ಡು ಹೊಡೆದವರಂತೆ ಬೆಂಗಳೂರಲ್ಲೇ ನೆಲೆಸಿ ಏಕಾಂಗಿಯಾಗಿ ಸಿನೆಮಾ, ದೂರದರ್ಶನದ ಧಾರಾವಾಹಿಯಲ್ಲಿ ಮಿಂಚತೊಡಗಿದಿರಿ. ಬದುಕನ್ನು ಕಟ್ಟಿಕೊಳ್ಳುವ ಹೊಸ ಹುಮ್ಮಸ್ಸು ನಿಮ್ಮಲ್ಲಿತ್ತು. ರಾಷ್ಟ್ರೀಯ ನಾಟಕಶಾಲೆ (ಎನ್‌ಎಸ್‌ ಡಿ) ಪದವೀಧರೆಯೂ ಆಗಿ ರಂಗಭೂಮಿಯ ಹಿಡಿತ ಸಾಧಿಸಿದ್ದ ನಿಮಗೆ ಸಿನೆಮಾ, ಧಾರಾವಾಹಿ ಒಂದು ದೊಡ್ಡ ಸಂಗತಿಯಾಗಿರಲಿಲ್ಲ. ಹೀಗಾಗಿ, ಶಿವರಾಜಕುಮಾರ ಜೊತೆಯಲ್ಲಿ ಆಸೆಗೊಬ್ಬ ಮೀಸೆಗೊಬ್ಬ , ಮಾವನಿಗೆ ತಕ್ಕ ಅಳಿಯ, ಸವ್ಯಸಾಚಿ ಚಿತ್ರಗಳ ಜೊತೆಯಲ್ಲಿ ಮಾಲ್ಗುಡೀಸ್‌ (ಹಿಂದಿ ಮತ್ತು ಕನ್ನಡದಲ್ಲಿ) ಅಭಿನಯಿಸಿ ಖ್ಯಾತರಾದಿರಿ. ಆದರೆ, ನಿಮ್ಮ ಅಂತರಂಗ ಏಕಾಂತವನ್ನು ಬಯಸುತ್ತಿತ್ತು. ಏಕಾಂತದಲ್ಲಿ ಕುಳಿತು ಕೃತಿಗಳನ್ನು ರಚಿಸತೊಡಗಿದಿರಿ. ಬಲರಾಜ ಸಹಾನಿ ಬಗ್ಗೆ , ಸೀತಾಚರಿತ, ಭೀಮ ಕಥಾನಕ, ಪೂಲನ್‌ದೇವಿ, ಹೊಸದಿಕ್ಕು (ನಾಟಕದ ಬಗ್ಗೆ ಪಠ್ಯಪುಸ್ತಕ ರೀತಿಯಲ್ಲಿ) ಹೀಗೆ ಹಿಂದಿ ಪರಿಣತರಾದ ನೀವು ಅನೇಕ ಕಥಾ ಪುಸ್ತಕಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಗಾಗಿ ಕನ್ನಡಕ್ಕೆ ಭಾಷಾಂತರಿಸಿಕೊಟ್ಟಿರಿ. ಒಟ್ಟು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿರಿ. ನಿಮ್ಮ ಪುಸ್ತಕ ಗಾಂಧಿ- ಒಂದು ಬೆಳಕು ಮುದ್ರಿತವಾಗಿ ನವಕರ್ನಾಟಕದವರಿಂದ ಕೊರಿಯರ್‌ ಬಂದಾಗ ನೀವು ಇರಲಿಲ್ಲ- ಶವಯಾತ್ರೆ ಶುರುವಾಗಿಬಿಟ್ಟಿತ್ತು! ನಿಮ್ಮ ಸ್ವಪ್ನ ಸಾರಸ್ವತ (ಗೋಪಾಲಕೃಷ್ಣ ಪೈ ಅವರ ಕಾದಂಬರಿಯ ನಾಟಕ ರೂಪ)ಕ್ಕೆ ಕರ್ನಾಟಕ ಸಂಘದ ಕೆ. ವಿ. ಸುಬ್ಬಣ್ಣ ಪ್ರಶಸ್ತಿ ಬಂತು. ಕರ್ನಾಟಕದ ಉದ್ದಗಲಕ್ಕೂ ಪ್ರಯಾಣಿಸಿ ಯಯಾತಿ, ಸೀತಾಚರಿತ, ಗಾಂಧಿ ಒಂದು ಬೆಳಕು, ಭೀಮ ಕಥಾನಕ, ವಾಸಂತಿ, ಮೀಡಿಯಾ, ಈಡಿಪಸ್‌, ಮ್ಯಾಕ್‌ಬೆತ್‌… ನಾಟಕಗಳನ್ನು ನಿರ್ದೇಶನ ಮಾಡಿ ಇಡೀ ರಂಗ ಚಳುವಳಿಯನ್ನು ಬೆಳೆಸಿದಿರಿ. ನಾನು ಬರೆದ ರೂಪಾಂತರ ನಾಟಕವನ್ನು ಮೂಡುಬಿದಿರೆ, ಕಾರ್ಕಳದಲ್ಲಿ ನಿರ್ದೇಶಿಸಿ ದೂರದರ್ಶನದಲ್ಲಿ ನಿರಂತರ ಪ್ರಸಾರವಾಗಿದ್ದನ್ನು ನಾನು ಹೇಗೆ ಮರೆಯಲಿ?

ಲೋಕಾಂತ ಸಾಕು ಏಕಾಂತ ಬೇಕೆನ್ನಿಸಿತೇನೋ ಪುನಃ ಸಾಗರಕ್ಕೆ ಹೋಗಿ, ನಿಮ್ಮ ಕುಟುಂಬದವರ ಜೊತೆಯಲ್ಲಿದ್ದಿರಿ. ಸಜ್ಜನ, ಪ್ರತಿಭಾವಂತ, ಮೃದುಭಾಷಿ ಪುರುಷೋತ್ತಮ ತಲವಾಟ ರನ್ನು ಮದುವೆಯಾಗಿ ನೆಮ್ಮದಿಯನ್ನು ಕಂಡಿರಿ. ಏಕಾಂತಕ್ಕೆ ಹೋದಾಗ ಲೋಕಾಂತದ ಬಗ್ಗೆಯೂ, ಲೋಕಾಂತಕ್ಕೆ ಹೋದಾಗ ಏಕಾಂತದ ಬಗ್ಗೆಯೂ ಪಟಪಟಿಸಿದ ನಿಮ್ಮ ಮನಸ್ಸು ಸಿಗರೇಟು ಸುಟ್ಟಂತೆ ಸುಡುತ್ತಿತ್ತು ಎಂದೇ ನನಗನ್ನಿಸುತ್ತದೆ.

ಈಗ ಎಲ್ಲಾ ಮುಗಿದ ಮೇಲೆ- ಸಾಗರಕ್ಕೆ ಬಂದಾಗಲೆಲ್ಲ ನಿಮ್ಮ ಮನೆಗೆ ಫೋನು ಮಾಡಿದಾಗ “ಹೇ ಮಾವಿನಕುಳಿ, ಯಾವಾಗ ಬಂದಿರಿ. ಊಟಕ್ಕೆ ಬನ್ನಿ, ನೀವು ಕೊಟ್ಟ ಹಲಸಿನ ಕಾಯಿ ತುಂಬಾ ಚೆನ್ನಾಗಿತ್ತು, ಹಣ್ಣುಮಾಡಿ ಮನೆಯವ ರೆಲ್ಲ ತಿಂದೆವು’ ಎಂಬ ಅಕ್ಕರೆಯ, ಪ್ರೀತಿ-ವಾತ್ಸಲ್ಯದ ಧ್ವನಿ ಎಲ್ಲಿ? ಕಳೆದು ಹೋಯಿತಲ್ಲ… ಮರೆಯಾಗಿ ಬಿಟ್ಟೆಯಲ್ಲ.

ಜಯಪ್ರಕಾಶ ಮಾವಿನಕುಳಿ

ಟಾಪ್ ನ್ಯೂಸ್

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

1-bumm

Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.