ಕಿರುತೆರೆಯಲ್ಲೂ ಭಗವಾನ್ ಎಂಟ್ರಿ
ಮೊದಲ ಸಲ ಅಪರಂಜಿ ಧಾರಾವಾಹಿಯಲ್ಲಿ ನಟನೆ
Team Udayavani, Apr 14, 2019, 3:00 AM IST
ಕಳೆದ ವರ್ಷವಷ್ಟೇ “ಆಡುವ ಗೊಂಬೆ’ ಚಿತ್ರವನ್ನು ನಿರ್ದೇಶಿಸಿ ಅಚ್ಚರಿ ಮೂಡಿಸಿದ್ದ ಹಿರಿಯ ನಿರ್ದೇಶಕ ಭಗವಾನ್, ಆ ಬಳಿಕ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ಕೇಳಿದವರಿಗೆ ಅಚ್ಚರಿ ಎಂಬಂತಹ ವಿಚಾರ ಇಲ್ಲಿದೆ.
ಹೌದು, ಭಗವಾನ್ ಅವರಿಗೀಗ ವಯಸ್ಸು 85. ಇಷ್ಟಾದರೂ, ವಯಸ್ಸಿಗೆ ಮುಖ ತಿರುಗಿಸಿ, ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ ಎಂಬುದೇ ಈ ಹೊತ್ತಿನ ವಿಶೇಷ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಅಪರಂಜಿ’ ಧಾರಾವಾಹಿಯಲ್ಲಿ ಮನೆಯ ಹಿರಿಯರ ಪಾತ್ರದಲ್ಲಿ ಭಗವಾನ್ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ 40ಕ್ಕೂ ಹೆಚ್ಚು ಕಂತುಗಳು ಪ್ರಸಾರವಾಗಿವೆ. ಈ ಕುರಿತು ಹೇಳಿಕೊಳ್ಳುವ ಭಗವಾನ್, “ನಾನು ಮೊದಲಿಂದಲು ಸುಮ್ಮನೆ ಕೂರುವವನಲ್ಲ. ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟಿಸುವ ಅವಕಾಶ ಬಂತು. ಈ ಪಾತ್ರಕ್ಕೆ ನಾನೇ ಬೇಕು ಅಂದರು. ಹಾಗಾಗಿ, ನಟನೆ ಮಾಡುತ್ತಿದ್ದೇನೆ. ಈ ವಯಸ್ಸಲ್ಲಿ ಬ್ಯುಸಿಯಾಗಿರುವುದು ಒಂಥರಾ ಖುಷಿ, ಆರೋಗ್ಯಕ್ಕೂ ಒಳ್ಳೆಯದು’ ಎನ್ನುತ್ತಾರೆ ಭಗವಾನ್.
ಭಗವಾನ್ ಅವರಿಗೆ ನಟನೆ ಹೊಸದೇನಲ್ಲ. ಹಾಗೆ ನೋಡಿದರೆ ಇವರು ಚಿತ್ರರಂಗಕ್ಕೆ ಬಂದದ್ದು ಹೀರೋ ಆಗಿ. 1954 ರಲ್ಲಿ ಬಂದ “ಭಾಗ್ಯೋದಯ’ ಚಿತ್ರದಲ್ಲಿ ಎರಡನೇ ಹೀರೋ ಆಗಿದ್ದವರು. ಇನ್ನು 1958 ರಲ್ಲಿ ಬಂದ “ಮಂಗಳಸೂತ್ರ’ ಚಿತ್ರದಲ್ಲೂ ಪೂರ್ಣ ಪ್ರಮಾಣದ ನಾಯಕ ನಟರಾಗಿದ್ದರು. ಆಮೇಲೆ ಅವಕಾಶಕ್ಕಿಂತ ಮುಖ್ಯವಾಗಿ ನಿರ್ದೇಶಕರಿಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ ಎಂಬ ಕಾರಣಕ್ಕೆ ಅವರು ನಿರ್ದೇಶನದತ್ತ ಮುಖ ಮಾಡಿದ್ದರು.
ಭಗವಾನ್ ಅವರಲ್ಲಿ ಇನ್ನೊಂದು ಅಚ್ಚರಿಯೂ ಅಡಗಿದೆ. ಕನ್ನಡ ಚಿತ್ರರಂಗದಲ್ಲಿ ಮೂರು ತಲೆಮಾರಿನ ನಟರ ಜೊತೆ ಭಗವಾನ್ ನಟಿಸಿದ್ದಾರೆ. ರಾಜ್‌ಕುಮಾರ್, ಅವರ ಮಕ್ಕಳಾದ ಶಿವಣ್ಣ, ರಾಘಣ್ಣ, ಅವರ ಮಕ್ಕಳ ಜೊತೆಯಲ್ಲೂ ನಟಿಸಿದ್ದಾರೆ. ಈಗ ಪುನೀತ್ ಅವರ “ಯುವರತ್ನ’ ಚಿತ್ರದಲ್ಲಿ ಜ್ಯೋತಿಷಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಒಂದೇ ಕುಟುಂಬದ, ಮೂರು ತಲೆಮಾರು ನಟರೊಂದಿಗೆ ನಟಿಸಿರುವ ಇವರು ಈಗ ಕಿರುತೆರೆ ಕಡೆ ಮುಖ ಮಾಡಿರುವುದು ವಿಶೇಷ.
“ಮೂರು ತಲೆ ಮಾರಿನಿಂದ ನಟಿಸುತ್ತಿರುವವರು ಸಿಕ್ತಾರೆ. ಆದರೆ, ಒಂದೇ ಕುಟುಂಬದಲ್ಲಿ ಮೂರು ಜನರೇಷನ್ ಜೊತೆ ಕೊಂಡಿಯಾಗಿ ನಟಿಸಿದ ಹೆಮ್ಮೆ ನನಗಿದೆ. ರಾಜ್‌ಕಪೂರ್ ಕೂಡ ಹೀಗೆ ನಟಿಸಿಲ್ಲ. ಈಗ ಕಿರುತೆರೆಯಲ್ಲೂ ನಟನೆ ಮುಂದುವರಿಸುತ್ತಾ ಕಲೆಯನ್ನು ಎಂಜಾಯ್ ಮಾಡುತ್ತಿದ್ದೇನೆ ‘ ಎಂಬ ಖುಷಿ ಭಗವಾನ್ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.