ಚೆಕ್‌ಪೋಸ್ಟ್‌ನಲ್ಲೊಂದು ಹೊಸ ಗೇಮ್
ಕಮರೊಟ್ಟು ಊರಲ್ಲೇನಿದೆ ಗೊತ್ತಾ?
Team Udayavani, Apr 14, 2019, 3:00 AM IST
“ಕಮರೊಟ್ಟು ಚೆಕ್‌ಪೋಸ್ಟ್…’ ಇದು ಊರ ಹೆಸರೆಂಬ ಗೊಂದಲ ಬೇಡ. ಇದು ಸಿನಿಮಾ ಹೆಸರು. ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಬಗ್ಗೆ ಹೇಳಲಾಗಿತ್ತು. ಅಷ್ಟೇ ಅಲ್ಲ, ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಅವರು ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದ ಬಗ್ಗೆಯೂ ವಿವರಿಸಲಾಗಿತ್ತು.
ಇದೇ ಮೊದಲ ಸಲ ಕನ್ನಡದ ಈ ಚಿತ್ರದಲ್ಲಿ ತುಳು ಗೀತೆ ಬಳಸಲಾಗಿದ್ದರ ಕುರಿತು ಹೇಳಲಾಗಿತ್ತು ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, “ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದ ಗೇಮ್‌ವೊಂದನ್ನು ರೂಪಿಸಲಾಗಿದೆ. ಪ್ಲೇಸ್ಟೋರ್‌ನಲ್ಲಿ “ಕಮರೊಟ್ಟು ಚೆಕ್‌ಪೋಸ್ಟ್’ ಟೈಪ್ ಮಾಡಿ ಹುಡುಕಿದರೆ, ಗೇಮ್ ಕಾಣಿಸಲಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಗೇಮ್‌ವೊಂದನ್ನು ಆಡಬಹುದಾಗಿದೆ.
ಚಿತ್ರದಲ್ಲಿ ಗಡ್ಡಪ್ಪ ಪ್ರಮುಖ ಪಾತ್ರ ವಹಿಸಿದ್ದು, ಗೇಮ್‌ನಲ್ಲೂ ಅಡ್ವೆಂಚರ್ ಪಾತ್ರದಲ್ಲಿ ಗಡ್ಡಪ್ಪ ಅವರ ಕಾಟೂìನ್ ಬಳಸಲಾಗಿದೆ. ಆ ಗೇಮ್ ಆಡಿ ವಿಜೇತರಾದವರಿಗೆ ಚಿತ್ರತಂಡದಿಂದ ವಿಶೇಷ ಬಹುಮಾನವನ್ನೂ ಕೊಡಲು ನಿರ್ಮಾಪಕ ಚೇತನ್‌ರಾಜ್ ನಿರ್ಧರಿಸಿದ್ದಾರೆ. ಪರಮೇಶ್ ನಿರ್ದೇಶನದ ಈ ಚಿತ್ರದ ತುಳು ಹಾಡೊಂದನ್ನು ನವೀನ್‌ಕೃಷ್ಣ ಹಾಡಿದ್ದರು.
ಅದು ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದಕ್ಷಿಣ ಕನ್ನಡದ ಬೂತಾರಾಧನೆ ಬೇಸ್ಡ್ನಲ್ಲೇ ಹಾಡು ಮಾಡಲಾಗಿದೆ. ಇನ್ನು, ಕಳೆದ ನಾಲ್ಕು ದಿನಗಳ ಹಿಂದಷ್ಟೇ “ಕಣ್ಣಲ್ಲಿ ಕೂತು ಹನಿಯೊಂದು ಜಾರಿದೆ’ ಎಂಬ ಲಿರಿಕಲ್ ವೀಡಿಯೋವೊಂದನ್ನು ಬಿಡಲಾಗಿದ್ದು, ಆ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಈ ಹಾಡು ಲವ್ ಫೇಲ್ಯೂರ್ ಆದವರು, ಫ್ರೆಂಡ್‌ಶಿಪ್ ಕಳೆದುಕೊಂಡು ಫೀಲಿಂಗ್ಸ್‌ನಲ್ಲಿರೋರಿಗೆ ಇಷ್ಟವಾಗಿದೆ ಎಂಬುದು ನಿರ್ದೇಶಕರ ಮಾತು. ಚಿತ್ರದ ಕುರಿತು ಹೇಳುವ ನಿರ್ಮಾಪಕ ಚೇತನ್‌ರಾಜ್, “ಇದೊಂದು ಪ್ಯಾರನಾರ್ಮಲ್ ಕುರಿತಾದ ಚಿತ್ರ. ಈ ರೀತಿಯ ಸಬ್ಜೆಕ್ಟ್ ನೋಡುಗರಿಗೆ ಹೊಸ ಫೀಲ್ ಕೊಡಲಿದ್ದು, ಕನ್ನಡಿಗರಿಗಂತೂ ಹೊಸ ಅನುಭವ ಕಟ್ಟಿಕೊಡಲಿದೆ.
ಆರಂಭದಿಂದ ಕ್ಲೈಮ್ಯಾಕ್ಸ್‌ನವರಿಗೂ ಸಾಕಷ್ಟು ಕುತೂಹಲಗಳೊಂದಿಗೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಕಾಣುವ ಪಾತ್ರಗಳಲ್ಲಿ ವಿಶೇಷವಿದೆ. ಇನ್ನೊಂದು ವಿಷಯವೆಂದರೆ, ಇಲ್ಲಿ ಏಕಕಾಲಕ್ಕೆ ಭವಿಷ್ಯತ್‌ಕಾಲ ಮತ್ತು ಭೂತಕಾಲ ಈ ಎರಡರ ಅನುಭವ ಪಡೆಯುವಂತಹ ಅಂಶಗಳು ದ್ವಿತಿಯಾರ್ಧದಲ್ಲಿವೆ. ಚಿತ್ರಕಥೆಯಲ್ಲಿ ಹೊಸದೊಂದು ರೂಪುರೇಷೆ ಕಟ್ಟಿಕೊಟ್ಟಿರುವುದು ವಿಶೇಷ’ ಎಂಬುದು ಚೇತನ್‌ರಾಜ್ ಅವರ ಮಾತು.
ನಿರ್ದೇಶಕ ಪರಮೇಶ್ ಅವರು ಈ ಕಥೆ ಮಾಡಿಕೊಂಡಾಗ, ಹಲವು ವ್ಯಕ್ತಿಗಳ ಜೊತೆ ಚರ್ಚಿಸಿದ್ದಾಗಿ ಹೇಳುತ್ತಾರೆ. ವೈಜ್ಞಾನಿಕವಾಗಿ ಹೇಳುವ ಕಥೆ ಇದಾಗಿರುವುದರಿಂದ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಭೇಟಿ ಮಾಡಿ, ಚರ್ಚಿಸಿ, ಸಲಹೆ ಪಡೆದು, ಕೆಲ ರಿಯಲ್ ಅಂಶಗಳನ್ನೂ ಇಲ್ಲಿ ಹೇಳಿದ್ದಾರಂತೆ. ಚಿತ್ರದಲ್ಲಿ ಇನ್ನೊಂದು ವಿಶೇಷವೂ ಇದೆ.
ಇದೇ ಮೊದಲ ಬಾರಿಗೆ ಊಸರವಳ್ಳಿಯ ಅನಿಮೇಷನ್ ಪಾತ್ರವೊಂದನ್ನು ಚಿತ್ರದುದ್ದಕ್ಕೂ ಬಳಕೆ ಮಾಡಲಾಗಿದೆ. ವಿಶೇಷ ಎನಿಸುವ ಈ ಪ್ರಾಣಿ ಚಿತ್ರದ ಮತ್ತೂಂದು ಹೈಲೆಟ್ ಆಗಿದ್ದು, ಚಿತ್ರದಲ್ಲಿನ್ನೂ ಹಲವು ವಿಶೇಷತೆಗಳೂ ತುಂಬಿಕೊಂಡಿವೆ ಎಂಬುದು ಪರಮೇಶ್ ಮಾತು.
ಅಂದಹಾಗೆ, ಇದು ಚೆಕ್‌ಪೋಸ್ಟ್ ಬಳಿ ನಡೆದ ಆಕ್ಸಿಡೆಂಟ್‌ವೊಂದರ ಸತ್ಯಘಟನೆ ಆಧರಿಸಿ ಚಿತ್ರ ಮಾಡಲಾಗುತ್ತಿದೆ. ಈ ಚಿತ್ರಕ್ಕೆ ಸನತ್ ಮತ್ತು ಉತ್ಪಲ್ ನಾಯಕರಾದರೆ, ಅವರಿಗೆ ಸ್ವಾತಿಕೊಂಡೆ ಹಾಗೂ ಅಹಲ್ಯಾ ನಾಯಕಿಯರಾಗಿ ನಟಿಸಿದ್ದಾರೆ. ಮಡಿಕೇರಿ, ಮಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ ಚಿತ್ರೀಕರಣವಾಗಿದೆ. ಚಿತ್ರಕ್ಕೆ ಎ.ಟಿ.ರವೀಶ್ ಅವರ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.