ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ :ಸೆಮಿಯಲ್ಲಿ ಎಡವಿದ ಸಿಂಧು
Team Udayavani, Apr 14, 2019, 9:37 AM IST
ಸಿಂಗಾಪುರ: “ಸಿಂಗಾಪುರ್ ಓಪನ್ ಕೂಟ’ದಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದ ಪಿ.ವಿ. ಸಿಂಧು ಸೆಮಿಫೈನಲ್‌ನಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸಿಂಧು ವಿಶ್ವದ 3ನೇ ರ್‍ಯಾಂಕಿನ, ಜಪಾನಿನ ನೊಜೊಮಿ ಒಕುಹಾರಾ ವಿರುದ್ಧ ಯಾವುದೇ ಪೈಪೋಟಿ ನೀಡದೆ 7-21, 11-21 ಗೇಮ್‌ಗಳಿಂದ ಪರಾಭವಗೊಂಡರು.
ಸಿಂಧು ಅನೇಕ ತಪ್ಪುಗಳನ್ನು ಮಾಡುತ್ತ ಹೋದುದರಿಂದ ಗೆಲುವಿನ ಸಮೀಪವೂ ಸುಳಿಯಲಿಲ್ಲ. ಆದರೆ ಇನ್‌ಫಾರ್ಮ್ ಆಟಗಾರ್ತಿ ಒಕುಹಾರಾ ಸಂಪೂರ್ಣ ಹಿಡಿತ ಸಾಧಿಸಿ ಕೊಂಡರು. ಅವರನ್ನು ಕಟ್ಟಿಹಾಕುವಲ್ಲಿ ಸಿಂಧು ಅವರಲ್ಲಿ ಆತ್ಮವಿಶ್ವಾಸ ಮತ್ತು ತಾಳ್ಮೆಯ ಕೊರತೆ ಎದ್ದುಕಂಡಿತು.
ಮೊದಲ ಗೇಮ್‌ನಲ್ಲಿ 1-3 ಹಿನ್ನಡೆಯಲ್ಲಿದ್ದ ಸಿಂಧು ಅಂಕವನ್ನು 4-4 ಸಮಬಲಕ್ಕೆ ತಂದರು. ಅನಂತರ ಒಕುಹಾರ 6 ನೇರ ಅಂಕಗಳನ್ನು ಗೆದ್ದು 11-5ರಿಂದ ಮುನ್ನಡೆ ಸಾಧಿಸಿದರು. ಸಿಂಧು ಈ ವೇಳೆ ಹಲವು ತಪ್ಪುಗಳೆಸಗಿದ ಕಾರಣ ಭಾರೀ ಅಂತರದಿಂದ ಸೋತರು. ದ್ವಿತೀಯ ಗೇಮ್‌ನ ಆರಂಭದಲ್ಲಿ ಸಿಂಧು ಸ್ವಲ್ಪ ಪೈಪೋಟಿ ನೀಡಿದರೂ ಲಾಭವೇನೂ ಆಗಲಿಲ್ಲ.
ಒಕುಹಾರಾ ವಿರುದ್ಧ ಕಳೆದ ಎರಡು ಪಂದ್ಯಗಳನ್ನು ಜಯಿಸಿದ್ದ ಸಿಂಧು 7-6 ದಾಖಲೆ ಹೊಂದಿದ್ದಾರೆ. 2017 “ವಿಶ್ವ ಚಾಂಪಿಯನ್‌ಶಿಪ್’ ಫೈನಲ್‌ನಲ್ಲಿ ಇವರಿಬ್ಬರ ನಡುವೆ ಭಾರೀ ಪೈಪೋಟಿ ನಡೆದಿತ್ತು. 110 ನಿಮಿಷಗಳ ಕಾಲ ನಡೆದ ಈ ಪಂದ್ಯ ಬ್ಯಾಡ್ಮಿಂಟನ್ ಇತಿಹಾಸದ ಅದ್ಭುತ ವನಿತಾ ಸಿಂಗಲ್ಸ್ ಪಂದ್ಯ ಎಂದು ದಾಖಲಾಗಿತ್ತು. ವಿಶ್ವ ಚಾಂಪಿಯನ್‌ಶಿಪ್ ಫೈನಲ್ ಅನಂತರ ಸಿಂಧು-ಒಕುಹಾರ 6 ಬಾರಿ ಮುಖಾಮುಖೀಯಾಗಿದ್ದು, ಸಿಂಧು 4 ಬಾರಿ ಗೆಲುವು ದಾಖಲಿಸಿದ್ದಾರೆ.
ತೈ ಜು ಯಿಂಗ್ ಎದುರಾಳಿ
ಫೈನಲ್‌ನಲ್ಲಿ ಒಕುಹಾರಾ ವಿಶ್ವದ ನಂ.1ಆಟಗಾರ್ತಿ, ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಜಪಾನಿನ ಅಕಾನೆ ಯಮಾಗುಚಿ ಅವರನ್ನು 15-21, 24-22, 21-19 ಗೇಮ್‌ಗಳಿಂದ ಸೋಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.