ರಾಮನ ಸ್ಮರಣೆ: ಗಮನ ಸೆಳೆದ ಮೆರವಣಿಗೆ
ವಿವಿಧ ದೇವಸ್ಥಾನಗಳಲ್ಲಿ ರಾಮನ ತೊಟ್ಟಿಲೋತ್ಸವ ವಿಶೇಷ ದೀಪಾಲಂಕಾರ
Team Udayavani, Apr 14, 2019, 10:50 AM IST
ಕಲಬುರಗಿ: ಶ್ರೀರಾಮ ನವಮಿ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಮ ನವಮಿ ಶೋಭಾಯಾತ್ರೆಯಲ್ಲಿ 16 ಅಡಿ ಎತ್ತರದ ರಾಮನ ಮೂರ್ತಿ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಕಲಬುರಗಿ: ರಾಮ ನವಮಿ ನಿಮಿತ್ತ ಜಿಲ್ಲೆಯ ರಾಮ ಮಂದಿರ ಮತ್ತು ಹನುಮಾನ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ತೊಟ್ಟಿಲೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಮ ನವಮಿ ನಿಮಿತ್ತ ಮಂದಿರಗಳಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು. ತೊಟ್ಟಿಲುಗಳನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಅನೇಕ ದೇವಸ್ಥಾನಗಳಿಗೆ ದೀಪಾಲಂಕಾರ
ಮಾಡಲಾಗಿತ್ತು.
ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಮ ನವಮಿ ನಿಮಿತ್ತ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ನಂತರ ರಾಮದೇವರ ತೊಟ್ಟಿಲ ಪೂಜೆ, ಮಹಾಮಂಗಳಾರತಿ, ಮಂತ್ರಪುಷ್ಪ ಜರುಗಿದವು. ಗುಂಡಾಚಾರ್ಯ
ನರಿಬೋಳ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದವು.
ಮಹಿಳಾ ಭಜನಾ ಮಂಡಳಿಯವರು ಜೋಗುಳ ಪದ ಹಾಡಿದರು. ಪಂ.
ವೆಂಕಣ್ಣಾಚಾರ್ಯಾ ಮಳಖೇಡ ಅವರಿಂದ ಭಾಗವತ ಪ್ರವಚನ ನಡೆಯಿತು. ಗುಂಡೇರಾವ ದೇಸಾಯಿ, ಶಾಮರಾವ ಕುಲಕರ್ಣಿ, ಡಿ.ವಿ.ಕುಲಕರ್ಣಿ, ನಾರಾಯಣ ಎಂ.ಜೋಶಿ ಹಾಗೂ ಭಕ್ತರು ಇದ್ದರು.
ಹೊಸ ಜೇವರ್ಗಿ ರಸ್ತೆಯಲ್ಲಿರುವ ರಾಮಮಂದಿರದಲ್ಲಿ ಕಳೆದ ವಾರದಿಂದಲೇ
ರಾಮೋತ್ಸವ ಆಯೋಜಿಸಲಾಗಿತ್ತು. ಶನಿವಾರ ಸಂಜೆ ಪಲ್ಲಕ್ಕಿ ಉತ್ಸವ ಮತ್ತು ಶ್ರೀರಂಗಪೂಜೆ ಜರುಗಿತು. ಬ್ರಹ್ಮಪುರದ ರಾಮ ದೇವಸ್ಥಾನ, ಉತ್ತರಾಧಿ
ಮಠದ ರುಕ್ಮಿಣಿ ವಿಠ್ಠಲ ಮಂದಿರ, ಜಗತ್ ಪ್ರದೇಶದ ರಾಘವೇಂದ್ರ ಸ್ವಾಮಿ ಮಠ, ಕರುಣೇಶ್ವರ ನಗರದ ಹನುಮಾನ ಮಂದಿರ ಸೇರಿ ನಾನಾ ಮಂದಿರಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಭಕ್ತರು ರಾಮನ ಸ್ಮರಣೆಯಲ್ಲಿ ತೊಡಗಿದ್ದರು. ರಾಮನ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸುಂಬರಿ, ಹಣ್ಣು-ಹಂಪಲು ವಿತರಿಸಲಾಯಿತು.
ರಾಮನ ಭವ್ಯ ಮೆರವಣಿಗೆ: ನಗರದ ಶ್ರೀ ರಾಮ ನವಮಿ ಉತ್ಸವ ಸಮಿತಿ ವತಿಯಿಂದ ರಾಮನವಮಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ 16 ಅಡಿ ಎತ್ತರ ರಾಮನ ಮೂರ್ತಿ ಭವ್ಯ ಮೆರವಣಿಗೆ ಗಮನ ಸೆಳೆಯಿತು. ನಗರದ ಆಳಂದ ರಸ್ತೆಯಿಂದ ಜಗತ್ ವೃತ್ತದ
ವರೆಗೆ ಸಾಗಿದ ಶೋಭಾ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಶ್ರೀರಾಮನ ಪೋಷಣೆ ಮೊಳಗಿಸಿದರು. ಜತೆಗೆ ಮಹಾರಾಷ್ಟದಿಂದ
ಬಂದಿದ್ದ ಬ್ಯಾಂಜೊ ತಂಡ ಮತ್ತು ಡೊಳ್ಳು, ಹಲಗೆ ಕುಣಿತ ಆಕರ್ಷಕವಾಗಿತ್ತು. ವಿವಿಧ ಮಠಗಳ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.