ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಅಬ್ಬರದ ಪ್ರಚಾರ
Team Udayavani, Apr 14, 2019, 1:22 PM IST
ಯಾದಗಿರಿ: ಯಾದಗಿರಿ ಜಿಲ್ಲೆಯ ಯಾದಗಿರಿ ವಿಧಾನಸಭೆ ಕ್ಷೇತ್ರ ರಾಯಚೂರು ಲೋಕಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ರಂಗೇರಿದೆ.
2014ರಲ್ಲಿ ನಡೆದ ಚುನಾವಣೆಯಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದಿಂದ ಬಿ.ವಿ. ನಾಯಕ ಆಯ್ಕೆಯಾಗಿದ್ದಾರೆ. ಆದರೆ ಈ ಭಾಗದ ಜನರ ಸಮಸ್ಯೆ ಆಲಿಸಿಲ್ಲ ಎನ್ನುವ ಅಸಮಾಧಾನ ಮತದಾರರಲ್ಲಿದೆ. ವಡಗೇರಾ ತಾಲೂಕು
ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಅಭ್ಯರ್ಥಿ ಪರ ಬೇಸವ್ಯಕ್ತಪಡಿಸಿದ ಉದಾಹರಣೆಗಳೂ ಇವೆ.
ಪ್ರಮುಖವಾಗಿ ಈ ಭಾಗದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆ ಇದೆ.
ವಡಗೇರಾ ತಾಲೂಕು ವ್ಯಾಪ್ತಿಯಲ್ಲಿ ಕೊನೆ ಭಾಗಕ್ಕೆ ಸಮರ್ಪಕ ನೀರು ಹರಿಯದೇ ಇಲ್ಲಿನ ರೈತರು ತೊಂದರೆ ಅನುಭವಸುತ್ತಿದ್ದಾರೆ ಇಲ್ಲಿನ
ಮತದಾರರು ಗೋಳು. ಈ ಭಾಗದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ
ಕಾರ್ಯಗಳೇನು ನಡೆದಿಲ್ಲ ಎನ್ನುವ ಚರ್ಚೆಯಲ್ಲಿ ಮತದಾರರು ಮುಳುಗಿದ್ದಾರೆ.
ಹಾಲಿ ಸಂಸದ ಬಿ.ವಿ. ನಾಯಕ ಅವರು ರಾಷ್ಟ್ರದ ವಿಚಾರದಲ್ಲಿ
ಭಾರತದ ಸೈನಿಕರು ಪಾಕಿಸ್ತಾನದ ಮೇಲೆ ಪ್ರತಿಕಾರ ತೀರಿಸಿದನ್ನು ಪಾಕಿಸ್ತಾನದ ಸಣ್ಣ ದೇಶದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವುದು ಸಮಂಜಸವಲ್ಲ ಎಂದು ಮಾತನಾಡಿ ರಾಜಕೀಯ ವಿರೋಧಿಗಳ ಟೀಕೆಗೆ ಗುರಿಯಾಗಿದ್ದರು. ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರಿಂದ
ಸ್ಪಷ್ಟನೆ ನೀಡಿದ್ದರು. ದೇಶದ ವಿಚಾರದಲ್ಲಿ ಇಂತಹ ಮಾತುಗಳನ್ನಾಡುವುಡು ಸರಿಯಲ್ಲ ಎನ್ನುವ ಅಭಿಪ್ರಾಯ ಮತದಾರರದ್ದು.
ಯಾದಗಿರಿ ಕ್ಷೇತ್ರದಲ್ಲಿ ಯಾದಗಿರಿ ನಗರದಲ್ಲಿ ಒಂದು ಬಾರಿ ಕಾರ್ಯಕರ್ತರ ಸಮಾವೇಶ ನಡೆಸಿ ಮತದಾರರ ಮನ ಓಲೈಕೆಗೆ ಯತ್ನಿಸಿದ ಬಿ.ವಿ.ನಾಯಕ, ಚುನಾವಣೆ ಸಮೀಪಿಸುತ್ತಿದ್ದಂತೆ ಟೆಂಪಲ್ ರನ್ ಆರಂಭಿಸಿ ಹಲವು ಮಠಾಧಿಧೀಶರು, ಸಂತರ ಆಶೀರ್ವಾದ ಪಡೆದು ಗ್ರಾಮೀಣ ಭಾಗದಲ್ಲಿ
ಪ್ರಚಾರದಲ್ಲಿ ತೊಡಗಿದ್ದಾರೆ.
ಇನ್ನೂ ಬಿಜೆಪಿಯಿಂದ ಕಣಕ್ಕಿಣಿದಿರುವ ರಾಜಾ ಅಮರೇಶ ನಾಯಕ ಎರಡು ಬಾರಿ ರಾಯಚೂರು ಜಿಲ್ಲೆಯಿಂದ ವಿಧಾನಸಭೆಗೆ ಆರಿಸಿ ಹೋಗಿ
ಸಚಿವರಾಗಿದ್ದರು. ಈ ಭಾಗಕ್ಕೆ ಚಿರಪರಿಚಿತರಾಗಿದ್ದಾರೆ. ಯಾದಗಿರಿಯಲ್ಲಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸುರಪುರ ಬಿಜೆಪಿ ಶಾಸಕ ರಾಜುಗೌಡ ಹಾಗೂ ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ ಅವರು ಈ ಭಾಗದಲ್ಲಿ ಅಬ್ಬರದ ಪ್ರಚಾರಕ್ಕಿಳಿದಿದ್ದಾರೆ. ಮೇಲಾಗಿ ಮೋದಿ ಮೋಡಿಯೂ ಯುವ ಮತದಾರರನ್ನು ಆಕರ್ಷಿಸಿದೆ.ಹಾಗಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.
ದೇಶದ ಭದ್ರತೆ ವಿಚಾರವೂ ಮತದಾರರ ಅರಿವಿಗೆಬಂದಿದ್ದು, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿ ವಿಚಾರವೂ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ. ನಮ್ಮ ದೇಶವನ್ನು ರಕ್ಷಿಸುವ ಸಾಮರ್ಥ ವ್ಯಕ್ತಿಗಳಿದ್ದರೆ ಉತ್ತಮ ಎನ್ನುವುದು ಮತದಾರರ ಮನದಾಳದ ಮಾತು. ಯಾದಗಿರಿ ಕ್ಷೇತ್ರದಲ್ಲಿ ಪ್ರಮುಖವಾಗಿ ಲಿಂಗಾಯತರು, ಕುರುಬ, ದೊರೆ, ಕಬ್ಬಲಿಗ ಹಾಗೂ ಮುಸ್ಲಿಮ್ ಸಮುದಾಯದ ಮತದಾರರು ಹೆಚ್ಚಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.