ಕೇಂದ್ರ ಅನುದಾನ ಕೊಟ್ಟರೂ ರಾಜ್ಯ ಬಳಸಿಲ್ಲ
ಹನಿ ನೀರಾವರಿ ಯೋಜನೆಗೆ ಶೇ. 90ರಷ್ಟು ಸಹಾಯಧನಕೇಂದ್ರ ರಸ್ತೆನಿಧಿ ಯೋಜನೆಯಡಿ ಕ್ಷೇತ್ರಕ್ಕೆ 569 ಕೋಟಿ ಅನುದಾನ
Team Udayavani, Apr 14, 2019, 4:09 PM IST
ಎನ್.ಆರ್.ಪುರ:- ನೀರಿನ ಟ್ಯಾಂಕ್ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿದರು.
ಎನ್.ಆರ್.ಪುರ: ಕೇಂದ್ರ ಸರ್ಕಾರ ರಾಜ್ಯದ ಬರ ಪರಿಹಾರಕ್ಕೆ 949 ಕೋಟಿ ರೂ. ಅನುದಾನ ನೀಡಿದ್ದರೂ ಇದರ ಯಾವುದೇ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿಲ್ಲ ಎಂದು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಇಲ್ಲಿನ ನೀರಿನ ಟ್ಯಾಂಕ್ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ರಾಜ್ಯದ
ತೆರಿಗೆ ಪಾಲಿನ 70 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಇದನ್ನು ಯಾವ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗಿದೆ
ಎಂಬುದನ್ನು ಕಾಂಗ್ರೆಸ್ ಉತ್ತರಿಸಬೇಕು ಎಂದರು.
ಯಾವುದೋ ಯೋಜನೆ ಕೊಟ್ಟ ಹಣವನ್ನು ಇನ್ಯಾವುದೋ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಗ್ಯಾಸ್ ಸಂಪರ್ಕ ಇಲ್ಲದ ಮನೆಗಳಿಗೆ ಉಜ್ವಲ ಯೋಜನೆ ಮೂಲಕ ಗ್ಯಾಸ್ ಏಜೆನ್ಸಿ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಲಾಯಿತು ಎಂದು ಹೇಳಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ದೀನ್ ದಯಾಳ್ ವಿದ್ಯುತ್ತೀಕರಣ ಯೋಜನೆಯಡಿ 9 ಸಾವಿರ
ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಹಳ್ಳಿ ಮತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೌಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗಿದೆ
ಎಂದರು.
ಬಿಪಿಎಲ್ ಕುಟುಂಬದವರಿಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 5ಲಕ್ಷ ರೂ.ವರೆಗೆ ಸುಸಜ್ಜಿತ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದರು. ರೈತರಿಗೆ ಹನಿ ನೀರಾವರಿ ಯೋಜನೆಗೆ ಶೇ.
90ರಷ್ಟು ಸಹಾಯಧನ ನೀಡಲಾಗಿದೆ. ಕಿಸಾನ್ ಸನ್ಮಾನ್ ಯೋಜನೆಯಡಿ ರೈತರ ಖಾತೆಗೆ 6 ಸಾವಿರ ರೂ. ಅನುದಾನ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೇಂದ್ರ ರಸ್ತೆನಿಧಿ ಯೋಜನೆಯಡಿ ಕ್ಷೇತ್ರಕ್ಕೆ 569 ಕೋಟಿ ರೂ. ಅನುದಾನ ತರಲಾಗಿದೆ. ಇದನ್ನು ಜಾರಿ ಮಾಡುವ ಅ ಧಿಕಾರ ರಾಜ್ಯ ಸರ್ಕಾರಕ್ಕಿದೆ. ಇದರ ಕಾಮಗಾರಿ ಶಂಕುಸ್ಥಾಪನೆ ತಮಗೆ ಆಹ್ವಾನಿಸದೆ ಕ್ಷೇತ್ರದ ಶಾಸಕರು ದ್ವೇಷದ ರಾಜಕಾರಣ ಮಾಡಿದರು ಎಂದು ಆರೋಪಿದರು.
ದೇಶದ ಸೈನಿಕ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ಮೋದಿ ಎಚ್ಚರಿಕೆಯ ನಂತರ 48ಗಂಟೆಯಲ್ಲಿ ವೀರ ಯೋಧನನ್ನು ಭಾರತಕ್ಕೆ ವಾಪಸ್
ಕಳಿಸಿದ್ದಾರೆ. ಅದು ನರೇಂದ್ರ ಮೋದಿಯವರ ತಾಕತ್ತು ಎಂದರು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಮೆಕ್ ಇನ್ ಇಂಡಿಯಾಕ್ಕೆ
ಆದ್ಯತೆ ನೀಡಿದ್ದಾರೆ. ಸೈನಿಕರಿಗೆ ಉತ್ತಮ ಶೂ, ವಸ್ತ್ರ, ಸಂಬಂಳ, ಪಿಂಚಣಿ ನೀಡುವ ಮೂಲಕ ಗೌರವ ಹೆಚ್ಚಿಸಿದ್ದಾರೆ.ದೇಶದ ಭದ್ರತೆಗಾಗಿ ಮೋದಿಗೆ ಮತ ನೀಡಬೇಕು ಎಂದು ಮನವಿ
ಮಾಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎನ್. ಜೀವರಾಜ್ ಮಾತನಾಡಿ, ಈ ಚುನಾವಣೆಯಲ್ಲಿ ದೇಶದಲ್ಲಿ 272 ಸ್ಥಾನಗಳನ್ನು ಬಿಜೆಪಿ ಗೆಲ್ಲಲೇ
ಬೇಕಾಗಿದೆ. 1 ಸ್ಥಾನ ಕಡಿಮೆಯಾದರೂ ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ. ಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಾರೆ. ಶೋಭಾ ಅವರು 2014-19ರವರೆಗೆ ಮಾತ್ರ ಸಂಸದರಾಗಿದ್ದು, 1947-2014ರವೆಗೆ
ಸಂಸದರಾಗಿದ್ದವರಲ್ಲಿ ಶ್ರೀಕಂಠಪ್ಪ ಬಿಟ್ಟರೆ ಬೇರೆಯಾರು ಎಷ್ಟು ಭಾರಿ ಭೇಟಿ ನೀಡಿದ್ದರೂ ಎಂಬುದರ ಬಗ್ಗೆ ಮಾಹಿತಿ ನೀಡಲಿ.
ಶೋಭಕರಂದ್ಲಾಜೆ ಅವರು ಮಾಡಿದಷ್ಟು ಕೆಲಸ ಬೇರೆ ಯಾವ ಸಂಸದರೂ ಮಾಡಿಲ್ಲ ಎಂದರು.
ಬಿಜೆಪಿ ಮುಖಂಡರಾದ ಬಿ.ಎಸ್. ಆಶೀಶ್ ಕುಮಾರ್, ಸಂಪತ್ ಕುಮಾರ್, ಜಯಶ್ರೀ ಮೋಹನ್, ಜಯರಾಮ್, ವಿನಯ್, ಸಾವಿತ್ರಿ, ಗೋಪಾಲ್,ಕೆಸವೆ ಮಂಜುನಾಥ್,ಅಶ್ವನ್ ಮತ್ತಿತರರು
ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.