ಬಿಜೆಪಿಯಲ್ಲಿದ್ದಾರೆ ಸುಳ್ಳು ಜ್ಯೋತಿಷಿಗಳು
ಕಾಂಗ್ರೆಸ್‌ನ ಬಿ.ವಿ. ನಾಯಕ ಟೀಕೆ
Team Udayavani, Apr 14, 2019, 4:57 PM IST
ದೇವದುರ್ಗ: ಲೋಕಸಭೆ ಚುನಾವಣೆ ಮುನ್ನವೇ ಬಿಜೆಪಿಗೆ ಇಷ್ಟು ಲೀಡ್ ಬರಲಿದೆ ಎಂದು ಬಿಜೆಪಿಯಲ್ಲಿ ಸುಳ್ಳು ಹೇಳುವ
ಜ್ಯೋತಿಷಿಗಳೇ ಹೆಚ್ಚಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಹೇಳಿದರು.
ಪಟ್ಟಣದ ಜೆಡಿಎಸ್ ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ ಅವರ ನಿವಾಸದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ
ಸಭೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭ್ರಷ್ಟಾಚಾರ ಮಾಡುವುದು, ಸುಳ್ಳು ಹೇಳುವುದು ಬಿಜೆಪಿಯವರ ಕಾಯಕವಾಗಿದೆ ಎಂದು ಹೇಳಿದರು.
ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಹೈಕಮಾಂಡ್ ಆದೇಶದಂತೆ ಜೆಡಿಎಸ್ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರಕಾರ ಜನಪರ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಜನಪರ ಯೋಜನೆ ಜಾರಿಗೆ ತಂದು ಬಡವರು ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಕಲ್ಪಿಸಿದೆ. ಉದ್ಯೋಗ
ಖಾತ್ರಿ ಯೋಜನೆಯಿಂದ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ ಎಂದರು.
ದೇಶದಲ್ಲಿ ನರೇಂದ್ರ ಮೋದಿ ಮಾಡಿದ ಅಭಿವೃದ್ಧಿ ಏನೆಂಬುದು ಜನತೆಗೆ ತಿಳಿದಿದೆ. ಕಪ್ಪು ಹಣ ತಂದು ಬಡವರ ಖಾತೆಗೆ ಜಮೆ
ಮಾಡುವುದಾಗಿ ಮೋದಿ ನೀಡಿದ್ದ ಭರವಸೆ ಈಡೇರಿಲ್ಲ. ನರೇಂದ್ರ ಮೋದಿ ನೇತೃತ್ವದ ಸರಕಾರ ಐದು ಉದ್ಯಮಿಗಳ ಪರ ಆಡಳಿತ
ನಡೆಸಿದೆ. ಬಡವರು, ರೈತರು, ಕಾರ್ಮಿಕರ ಪರವಾದ ಒಂದೇ ಒಂದು ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದೆ. ಹೀಗಾಗಿ
ಮತದಾರರು ಸುಳ್ಳು ಹೇಳುವ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದು, ಲೋಕಸಭೆ ಚುನಾವಣೆಯಲ್ಲಿ ಕೈ ಬಲಪಡಿಸಲು ಸಂಕಲ್ಪ
ಮಾಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ ಇಟಗಿ, ಜೆಡಿಎಸ್ ಮುಖಂಡರಾದ ಬುಡನಗೌಡ ಜಾಗಟಗಲ್, ಕರೆಮ್ಮ
ಗೋಪಾಲಕೃಷ್ಣ, ಮುದಕಪ್ಪ ಮಾಸ್ಟರ್, ಅಮರೇಶ ಪಾಟೀಲ, ಜಿ.ಬಸವರಾಜ ನಾಯಕ, ಶಾಲಂ ಉದ್ದಾರ, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಅಬ್ದುಲ್ ಅಜೀಜ್, ಪುರಸಭೆ ಸದಸ್ಯರು ಸೇರಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.