ಗಡಿ ಕ್ಷೇತ್ರವಾದರೂ ಅಬ್ಬರದ ಪ್ರಚಾರವಿಲ್ಲ

ಸ್ಥಳೀಯ ಸಮಸ್ಯೆಗಳ ಜತೆಗೆ ರಾಷ್ಟ್ರ ರಾಜಕೀಯದ ಎಚ್ಚರ ಇಲ್ಲಿದೆ

Team Udayavani, Apr 15, 2019, 6:30 AM IST

gadi-kshetra

ಮಂಗಳೂರು: ಒಟ್ಟು ವ್ಯವಸ್ಥೆಯ ವಿರುದ್ಧ ಅಸಹನೆ, ಆಕ್ರೋಶ ಇದೆ. ಆದರೆ ಮತದಾನದ ಹಕ್ಕು ಚಲಾಯಿಸುವ ಬಗ್ಗೆ ನಿರುತ್ಸಾಹವೇನಿಲ್ಲ. ನಾವು ಮತ ಚಲಾಯಿಸುತ್ತೇವೆ; ಆದರೆ ಯಾರಿಗೆಂದು ಹೇಳುವುದಿಲ್ಲ ಎಂಬ ಗೌಪ್ಯತೆಯ ಜಾಗೃತಿಯೂ ಇದೆ. ನಮ್ಮ ಇಂಥವರಿಗೇ ಎಂದು ಬಹಿರಂಗವಾಗಿ ಹೇಳಿಕೊಳ್ಳುವವರು ರಾಜಕೀಯ ಪಕ್ಷಗಳ ಕೆಲವೇ ಮಂದಿ ಅಭಿಮಾನಿಗಳು -ಕಾರ್ಯಕರ್ತರು ಮಾತ್ರ.

ಇದು ರಾಜ್ಯದ ಗಡಿ ಭಾಗದ ಪ್ರದೇಶಗಳನ್ನೂ ತನ್ನೊಳಗೆ ಇರಿಸಿಕೊಂಡಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುತ್ತು ಹಾಕಿದಾಗ ಅರಿವಿಗೆ ಬಂದ ಚುನಾವಣೆಯ ಕಂಪನ.

ಉರಿ ಬಿಸಿಲು ಪ್ರಚಾರದ ಮೇಲೆ ಪರಿಣಾಮ ಬೀರಿರುವುದು ನಿಜ. ಮತಯಾಚನೆ ಸಂಜೆ ವೇಳೆ ಮನೆ ಭೇಟಿಗೆ ಸೀಮಿತವಾಗಿದೆ. ಹಗಲು ಹೊತ್ತು ಪ್ರಚಾರ ಎಲ್ಲೂ ಕಂಡುಬರುತ್ತಿಲ್ಲ. ಅಂಗಡಿ ಮುಂಗಟ್ಟುಗಳಿರುವಲ್ಲಿ, ಬಸ್‌ ಮತ್ತು ರಿಕ್ಷಾ ತಂಗುದಾಣಗಳಲ್ಲಿ ಕೆಲವೇ ಜನರು ಓಟಿನ ಬಗ್ಗೆ ಚರ್ಚೆ ನಡೆಸುತ್ತಿರುವುದು ಕಂಡು ಬರುತ್ತಿದೆ.

ಎರಡೂ ಕಡೆಯ ಬೆಂಬಲಿಗರು
ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮತ್ತು ಆಗದಿರುವ ಕೆಲಸಗಳು ಹಾಗೂ ಸಮಸ್ಯೆಗಳ ಬಗೆಗೆ ಜನರು ಮಾತನಾಡುತ್ತಾರೆ. ರಾಜ್ಯ ರಾಜಕಾರಣ ಮತ್ತು ರಾಷ್ಟ್ರ ಮಟ್ಟದ ವಿಚಾರಗಳ ಕುರಿತಾಗಿಯೂ ಉಲ್ಲೇಖೀಸಿ ತಾವು ಯಾಕೆ ನಿರ್ದಿಷ್ಟ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಯಾಕೆ ಮತ ನೀಡಬೇಕು ಎಂಬುದನ್ನು ಬೊಟ್ಟು ಮಾಡಿ ತೋರಿಸುತ್ತಾರೆ.

ಹೆದ್ದಾರಿ, ಫ್ಲೆಓವರ್‌
ಸ್ಥಳೀಯ ಸಮಸ್ಯೆಗಳ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಈ ಚುನಾವಣೆಯ ಸಂದರ್ಭವೂ ಚಾಲ್ತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ತೊಕ್ಕೊಟ್ಟು ಮತ್ತು ಪಂಪ್‌ವೆಲ್‌ ಫ್ಲೆಓವರ್‌ಗಳ ಕಾಮಗಾರಿ ಹತ್ತು ವರ್ಷ ಕಳೆದರೂ ಮುಗಿದಿಲ್ಲ; ಇನ್ನೂ ಹಾಗೆಯೇ ಇದೆ. ಈಗಾಗಲೇ ಹಲವಾರು ಅಪಘಾತಗಳು ನಡೆದು ಸಾವು ನೋವು ಸಂಭವಿಸಿವೆ ಎಂಬ ವಿಚಾರ ಮತದಾರರ ಚರ್ಚೆಯ ಪ್ರಮುಖ ವಸ್ತು. ಏರ್‌ಸ್ಟ್ರೈಕ್‌, ಪುಲ್ವಾಮಾ ದಾಳಿ, ಅಭಿನಂದನ್‌ ಬಿಡುಗಡೆ ಪ್ರಕರಣಗಳು ಕೂಡ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಕುತ್ತಾರು ಪ್ರದೇಶದ ಕೆಲವು ಮತದಾರರ ಅಭಿಪ್ರಾಯ. 24 ಗಂಟೆಗಳೊಳಗೆ ಅಭಿ ನಂದನ್‌ ಅವರನ್ನು ಪಾಕಿಸ್ಥಾನ ಬಿಡುಗಡೆ ಮಾಡುವಂತೆ ಮಾಡಿರು ವುದು ಸಾಧನೆ ಎಂದು ಕೆಲವರು ಬೊಟ್ಟು ಮಾಡಿ ಹೇಳುತ್ತಾರೆ.

“ಊರು ಎಡ್ಡೆ ಆವೊಡು’
ಮತದಾನಕ್ಕೆ ಇನ್ನು ಕೆಲವೇ ದಿನ ಗಳಿರುವಾಗ, ವಾತಾವರಣ ಹೇಗಿದೆ ಎಂದು ಉಳ್ಳಾಲದ ರಿಕ್ಷಾ ಚಾಲಕ ಬಸ್ತಿಪಡು³ ನಿವಾಸಿ ನವೀನ್‌ ಅವರನ್ನು ಮಾತನಾಡಿಸಿದಾಗ “ಏರೇ ಬರಡ್‌, ಎಂಕ್ಲೆನ ಊರು ಎಡ್ಡೆ ಆವೊಡು’ (ಯಾರೇ ಬಂದರೂ ನಮ್ಮ ಊರು ಉದ್ಧಾರ ಆಗಬೇಕು) ಎಂದಷ್ಟೇ ಹೇಳಿ ಸುಮ್ಮನಾದರು.

ತೊಕ್ಕೊಟ್ಟು ಜಂಕ್ಷನ್‌ ಸಮೀಪ ಚಿಕ್ಕ ಅಂಗಡಿ ಇರಿಸಿಕೊಂಡು ವ್ಯಾಪಾರ ಮಾಡುತ್ತಿರುವ ಲಿಡಿಯಾ ಕುವೆಲ್ಲೊ ಅವರ ಪ್ರತಿಕ್ರಿಯೆಯೂ ಸುಮಾರಾಗಿ ಹೀಗೆಯೇ. “ಯಾರಿಗೆ ಓಟು ಹಾಕಿದರೂ ಅಷ್ಟಕ್ಕಷ್ಟೇ; ಅವರು ಹಣ ಮಾಡಿ ಜೇಬು ತುಂಬಿಸು ತ್ತಾರೆ. ನಾವು ಕಷ್ಟ ಪಟ್ಟು ದುಡಿದೇ ತಿನ್ನಬೇಕು.

ಪಾಪದವನು ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡರೆ ಯಾರೂ ಸಹಾಯಕ್ಕೆ ಬರುವುದಿಲ್ಲ.’ ಇಷ್ಟು ಹೇಳಿಯೂ “ನಾಡಿದ್ದು ಓಟು ಹಾಕಿಯೇ ಹಾಕುತ್ತೇನೆ’ ಎನ್ನಲವರು ಮರೆಯುವುದಿಲ್ಲ.

ಅಷ್ಟರಲ್ಲಿ ಪಕ್ಕದಲ್ಲಿರುವ ಇನ್ನೋರ್ವ ಮಹಿಳೆ, “ಶ್ರೀಮಂತರು ತೆರಿಗೆ ಪಾವತಿಸದಿದ್ದರೂ ನಡೆಯುತ್ತದೆ; ಅವರನ್ನು ಕೇಳುವುದಿಲ್ಲ. ನಮ್ಮಂತಹ ಮಧ್ಯಮ ವರ್ಗದವರು ಚಿಲ್ಲರೆ ಮೊತ್ತದ ತೆರಿಗೆ ಬಾಕಿ ಇರಿಸಿದರೂ ಕೇಳುತ್ತಾರೆ. ಸಚಿವರ ಪುತ್ರ -ಪುತ್ರಿಯರ ಮದುವೆಗೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಅದನ್ನು ಯಾರೂ ವಿಚಾರಿಸುವುದಿಲ್ಲ’ ಎಂಬ ಬೇರೊಂದು ಆಯಾಮದ ಆರೋಪ ಮಾಡಿದರು.

ಎದುರಿನ ಅಂಗಡಿಯ ನಿಝಾಮ್‌, “ಈಗ ಓಟು ವ್ಯಾಪಾರವಾಗಿದೆ. ಜನರ ಮತದಿಂದ ಗೆದ್ದು ಬರುವವರು ಜನರಿಗೆ ಬೇಕಾದ್ದನ್ನು ಕೊಡಬೇಕಿತ್ತು; ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ ಅದು ಮಾಡುತ್ತಿಲ್ಲ. ಚುನಾವಣೆ ಬಂದಾಗ ಬರುತ್ತಾರೆ; ಬಳಿಕ ಇತ್ತ ನೋಡುವುದಿಲ್ಲ’ ಎಂದರು.

“ನಮಗೆ ಬದಲಾವಣೆ ಬೇಕು; ಈ ಬಾರಿ ಬದಲಾವಣೆ ಬರುತ್ತದೆ ಎಂಬುದು ನನ್ನ ಭಾವನೆ. ಯುವಜನರ ಪ್ರಮುಖ ಸಮಸ್ಯೆ ನಿರುದ್ಯೋಗ. ಅದು ನಿವಾರಣೆ ಆಗಬೇಕು. ತೊಕ್ಕೊಟ್ಟು ಮತ್ತು ಪಂಪ್‌ವೆಲ್‌ ಫ್ಲೆ$çಓವರ್‌ಗಳ ಕಾಮಗಾರಿ ಹತ್ತು ವರ್ಷ ಕಳೆದರೂ ಮುಗಿದಿಲ್ಲ. ಆದಷ್ಟು ಬೇಗ ಅದಕ್ಕೆ ಮುಕ್ತಿ ಸಿಗಬೇಕು’ ಎಂದರು ಉಳ್ಳಾಲದ ನವ ಮತದಾರ ಶಾಯಿದ್‌ ಅಫ್ರಿದ್‌.

ಒಟ್ಟಾರೆ ಈ ಕ್ಷೇತ್ರದಲ್ಲಿ ಮತದಾರರಿಗೆ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳು ಆಗಿವೆ; ಯಾರು ಚುನಾವಣೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳು ಎಂಬ ಅರಿವಿರುವುದಷ್ಟೇ ಅಲ್ಲದೆ, ಮತದಾನದ ದಿನ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕು ಎನ್ನುವ ಬಗ್ಗೆ ಸ್ಪಷ್ಟ ಅರಿವು ಹಾಗೂ ಜಾಗೃತಿ ಮೂಡಿರುವುದು ಕಂಡುಬಂತು.

ಅಬ್ಬರದ ಪ್ರಚಾರ ಇಲ್ಲ
ಚುನಾವಣೆಯ ಅಬ್ಬರದ ಪ್ರಚಾರ ಕ್ಷೇತ್ರದ ಎಲ್ಲೂ ಕಂಡು ಬರುತ್ತಿಲ್ಲ. ಕೆಲವು ದಿನಗಳ ಹಿಂದೆ ಮುಡಿಪುವಿನಲ್ಲಿ ಬಿಜೆಪಿ ಸಾರ್ವಜನಿಕ ಸಭೆ ನಡೆಸಿರುವುನ್ನು ಬಿಟ್ಟರೆ ಬೇರೆ ಹೇಳಿಕೊಳ್ಳುವಂತಹ ಯಾವುದೇ ದೊಡ್ಡ ಮಟ್ಟದ ಸಭೆ ನಡೆದಿಲ್ಲ. ಪ್ರಮುಖ ಸ್ಪರ್ಧಿಗಳಾದ ನಳಿನ್‌ ಮತ್ತು ಮಿಥುನ್‌ ರೈ ಬಗ್ಗೆ ಅಲ್ಲೊಬ್ಬರು ಇಲ್ಲೊಬ್ಬರು ಚರ್ಚಿಸುತ್ತಾರೆ. ನಳಿನ್‌ ಪರಿಚಿತರು ಮತ್ತು ಮಿಥುನ್‌ ರೈ ಹೊಸ ಮುಖ ಆಗಿದ್ದರೂ ಅವರಿಗೆ ರಾಜಕೀಯ ಹಿನ್ನೆಲೆ ಇದೆ ಎನ್ನುವ ಬಗ್ಗೆ ಚರ್ಚೆ ನಡೆಸುತ್ತಿರುವುದು ಗಮನಕ್ಕೆ ಬಂತು.

– ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Mulki: ರೈಲಿನಲ್ಲಿ ಕೊಲೆ: ಓರ್ವ ಸೆರೆ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.