ಶೇ. 60 ಮೊದಲ ಮತದಾರರು ಮತ ವಂಚಿತರು
Team Udayavani, Apr 15, 2019, 6:30 AM IST
ಬೆಂಗಳೂರು: ನಿರಂತರ ಜಾಗೃತಿ ಕಾರ್ಯಕ್ರಮಗಳ ಬಳಿಕವೂ ಮತದಾನಕ್ಕೂ ಮೊದಲೇ ರಾಜ್ಯದಲ್ಲಿ ಅಂದಾಜು ಶೇ. 60ರಷ್ಟು ಯುವ ಮತದಾರರು ತಮ್ಮ ಹಕ್ಕಿನಿಂದ ಹೊರಗುಳಿದಿದ್ದಾರೆ!
ರಾಜ್ಯ ಚುನಾವಣ ಆಯೋಗ ಈಚೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ. ಅದರ ಪ್ರಕಾರ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ 18ರಿಂದ 19 ವರ್ಷದೊಳಗಿನವರ ಸಂಖ್ಯೆ ಒಟ್ಟಾರೆ 10.09 ಲಕ್ಷ. ಆದರೆ 2011ರ ಜನಗಣತಿ ಪ್ರಕಾರವೇ ರಾಜ್ಯದಲ್ಲಿ ಈ ಯುವ ಮತದಾರರ ಸಂಖ್ಯೆ 23.49 ಲಕ್ಷ ಇದೆ. ಅಂದರೆ ಇದೇ ವಯಸ್ಸಿನ ಉಳಿದ 13.40 ಲಕ್ಷ ಯುವಕರು 2019ರ ಸಾರ್ವತ್ರಿಕ ಚುನಾವಣೆ ಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಂತಾಗಿದೆ.
2011ರ ಜನಗಣತಿ ಪೂರ್ತಿಯಾಗಿ ಎಂಟು ವರ್ಷಗಳು ಕಳೆದಿವೆ. 2011ರಲ್ಲಿ 10 ಮತ್ತು 11 ವರ್ಷದ ಬಾಲಕ-ಬಾಲಕಿಯರು ಈಗ ಕ್ರಮವಾಗಿ 18 ಮತ್ತು 19 ವರ್ಷ ತುಂಬಿದವರಾಗಿದ್ದಾರೆ. ಹಾಗಾಗಿ ಈ ಲೋಕ ಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾ ಯಿಸಲು ಅವರೆಲ್ಲ ಅರ್ಹರಾಗಿರುತ್ತಾರೆ. ಅದರಲ್ಲಿ 12,05,718 ಯುವಕರು ಮತ್ತು 11,44,035 ಯುವತಿಯರಿದ್ದಾರೆ. ಈ ಪೈಕಿ ಸುಮಾರು 5 ಲಕ್ಷ ಯುವಕರು ಮತ್ತು 4,75,000 ಯುವತಿಯರು ಮಾತ್ರ ಮತದಾರರ ಪಟ್ಟಿ ಯಲ್ಲಿ ಹೆಸರು ನೋಂದಾಯಿಸಿದ್ದಾರೆ.
ಕೆಲವರು ಕೊನೆಯ ಕ್ಷಣದಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ ಅವರಿಗೆ ಮತದಾರರ ಗುರುತಿನ ಚೀಟಿ ದೊರೆತರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಭಾಗ್ಯ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರೂ ಹೋಗಲ್ಲ; ಅವರೂ ಬರಲ್ಲ
ಇಲ್ಲಿ ಕೇವಲ ಯುವ ಮತದಾರರ ಲೋಪ ಇಲ್ಲ. ಚುನಾವಣ ಆಯೋಗದ ದೋಷವೂ ಇದೆ. ಆಯೋಗವು ಕಾಲೇಜುಗಳಲ್ಲಿ ಶಿಬಿರಗಳನ್ನು ಮಾಡಿ ದರೆ ಸಾಕು. ಅಲ್ಲಿಯೇ ಶೇ. 50ರಷ್ಟು ನೋಂದಣಿ ಮಾಡಿಬಿಡಬಹುದು. ಆದರೆ ಇವರು (ಆಯೋಗದವರು) ಕಾಲೇಜುಗಳಿಗೆ ಹೋಗುತ್ತಿಲ್ಲ; ಅವರು (ಕಾಲೇಜು ವಿದ್ಯಾರ್ಥಿಗಳು) ಇವರ ಕಡೆಗೆ ಬರುತ್ತಿಲ್ಲ. ಚುನಾವಣೆ ಬಂದಾಗಲೇ ಎಲ್ಲರೂ ಮಾತನಾಡುತ್ತಾರೆ. ಅನಂತರ ಸುಮ್ಮನಾಗಿಬಿಡುತ್ತಾರೆ ಎಂದು ಚುನಾವಣ ವಿಶ್ಲೇಷಕ ನಿವೃತ್ತ ವಿಂಗ್ ಕಮಾಂಡರ್ ಪಿ.ಜಿ. ಭಟ್ ಬೇಸರ ವ್ಯಕ್ತಪಡಿಸುತ್ತಾರೆ.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.