ಯಾರು ಗೆಲ್ತಾರೆ?ಎನ್ನೋದೇ ಚರ್ಚೆ

ಹಿಂದಿನ ಫಲಿತಾಂಶದ ಅವಲೋಕನಈ ಬಾರಿ ನೋಟಾ ಮತ ಚಲಾವಣೆ ಜಾಸ್ತಿ ಸಾಧ್ಯತೆ

Team Udayavani, Apr 15, 2019, 10:12 AM IST

Udayavani Kannada Newspaper

ಕಲಬುರಗಿ: ಸೋಲಿಲ್ಲದ ಸರದಾರ, ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಅದೃಷ್ಟಕ್ಕೆ ಮುಂದಾಗಿರುವ ಡಾ| ಉಮೇಶ ಜಾಧವ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಕ್ಷೇತ್ರದ ಚುನಾವಣೆ ಹೈವೊಲ್ಟೇಜ್‌ ಆಗಿದ್ದು, ಎಲ್ಲಿಲ್ಲದ ಕೂತೂಹಲ ಮೂಡಿದೆ. ಅಲ್ಲದೇ ಜಿಲ್ಲೆಯಾದ್ಯಂತ ಎಲ್ಲ ಕಡೆ ಚುನಾವಣೆಯದ್ದೇ ಚರ್ಚೆ ನಡೆದಿದೆ.

ಕೆಂಡದಂತಹ ಬಿಸಿಲಿದ್ದರೂ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ಜನರು ಚುನಾವಣೆ ಚರ್ಚೆಯಲ್ಲಿ ಮಗ್ನವಾಗಿರುವುದು ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ಕಂಡು ಬರುತ್ತಿದೆ. ಕಳೆದ 2014 ಹಾಗೂ ಅದರ ಹಿಂದಿನ 2009ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗ್ರಾಮದಿಂದ ಇಂತಹ ಪಕ್ಷಕ್ಕೆ ಲೀಡ್‌ ಆಗಿದೆ. ತಾಲೂಕಿನಿಂದ ಇಷ್ಟು ಆಗಿದೆ ಎನ್ನುವ ಕುರಿತು ನಿಖರವಾಗಿ ಅಂಕಿ ಸಂಖ್ಯೆಗಳನ್ನು ಮುಂದಿಟ್ಟು ಚರ್ಚೆ ಮಾಡುತ್ತಿರುವುದನ್ನು ನೋಡಿದರೆ ಜನರಲ್ಲಿ ಚುನಾವಣೆ ಎಷ್ಟು ಪರಿಣಾಮ ಬೀರಿದೆ ಎನ್ನುವುದು ನಿರೂಪಿಸುತ್ತಿದೆ.

ಈ ಸಲ ಕಳೆದ ಸಲಕ್ಕಿಂತ ಲೀಡ್‌ ಜಾಸ್ತಿ ಆಗುತ್ತೆ, ಈ ಸಲ ಇವರೇ ಬರ್ತಾರೆ. ಯಾರೇನು ತಿಪ್ಪರಲಾಗ ಹಾಕಿದರೂ ಈ ಸಲ ಏನೂ ಬದಲಾಗಲ್ಲ ಎಂದು ಹೇಳುತ್ತಿರುವುದು ಮತ್ತೊಂದೆಡೆ ಕೇಳಿ ಬರುತ್ತಿದೆ. ಮುಖ್ಯವಾಗಿ ಯಾರು ಎಷ್ಟು ಹಣ ಹಂಚ್ತಾರೆ ಎನ್ನುವ ವಿಷಯವೂ ಹಳ್ಳಿಗರಲ್ಲಿ ಚರ್ಚೆ ಆಗುತ್ತದೆ. ಹಣ ಯಾರೂ ಕೊಡ್ತಾರೋ ಅವರಿಂದ ಪಡೆಯೋಣ. ಓಟ್‌ ಮಾತ್ರ ನಾವು ಅಂದುಕೊಂಡವರಿಗೆ ಹಾಕೋಣ ಎನ್ನುತ್ತಿರುವುದನ್ನು ನೋಡಿದರೆ
ರಾಜಕೀಯ ಪ್ರಜ್ಞಾವಂತಿಕೆ ಬಂದಿರುವುದು ಕಂಡು ಬರುತ್ತದೆ. ಕೈಯಲ್ಲಿಯೇ ರಾಜಕೀಯ ಆಗು ಹೋಗುಗಳನ್ನು ಅರಿಯುತ್ತಿರುವುದರಿಂದ ರಾಜಕೀಯ ಪ್ರಜ್ಞೆ ಜಾಗೃತಗೊಂಡಿದೆ. ವಾಟ್ಸ ಆ್ಯಪ್‌, ಇಂಟರನೆಟ್‌, ಫೆಸ್‌ಬುಕ್‌ ಹಾಗೂ ಮೊಬೈಲ್‌ದಲ್ಲೇ ಸುದ್ದಿವಾಹಿನಿಗಳ ವೀಕ್ಷಣೆಯು ಎಲ್ಲವನ್ನು ತಿಳಿಸುವಂತೆ ಮಾಡಿದೆ ಎಂದು ವಿಶ್ಲೇಷಿಸಬಹುದಾಗಿದೆ.

ನೋಟಾ ಮತ: ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 9888 ಮತಗಳು ನೋಟಾಗೆ ಚಲಾವಣೆಯಾಗಿದ್ದವು. ಕಣದಲ್ಲಿದ್ದ ಎಂಟು ಅಭ್ಯರ್ಥಿಗಳಲ್ಲಿ ನಾಲ್ವರು ಬಿಟ್ಟರೆ ಐದನೇ ಅಭ್ಯರ್ಥಿಯಾಗಿ ನೋಟಾಗೆ ಹೆಚ್ಚು ಮತ ಚಲಾವಣೆ ಆಗಿರುವುದನ್ನು ನಾವು ಪ್ರಮುಖವಾಗಿ ಅವಲೋಕಿಸಬಹುದಾಗಿದೆ. ಪ್ರಸ್ತುತ 2019ರ ಏ. 23ರಂದು ನಡೆಯುವ ಚುನಾವಣೆಯಲ್ಲಿ ಕಳೆದ ಸಲಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೋಟಾಗೆ ಮತಗಳು ಚಲಾವಣೆಯಾಗಲಿವೆ ಎನ್ನಲಾಗುತ್ತಿದೆ. ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಆಗಿದೆ ಎನ್ನಲಾದ ಅಸಮಾಧಾನವು ನೋಟಾಗೆ ಮತ ಹೆಚ್ಚಬಹುದು ಎಂದು ಊಹಿಸಲಾಗುತ್ತಿದೆ. ನೋಟಾಗೆ ಹೆಚ್ಚಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದನ್ನು ಚರ್ಚೆ ಜೋರಾಗಿ ನಡೆದಿದೆ.

ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.