ಜಲಮೂಲ ರಕ್ಷಣೆಗೆ ಪಣ ತೊಡಿ
ಜೀವಜಲಕ್ಕೆ ಪರಿತಪಿಸಬಾರದೆಂದು ರಾಜರಿಂದ ಪುಷ್ಕರಣಿ ನಿರ್ಮಾಣ: ಶಿಮುಶ
Team Udayavani, Apr 15, 2019, 4:02 PM IST
ಹೊಳಲ್ಕೆರೆ: ಒಂಟಿಕಂಬದ ಮುರುಘಾ ಮಠದ ಪುರಾತನ ಪುಷ್ಕರಣಿಯ ಹೂಳು ತೆಗೆಯುವ ಕಾರ್ಯಕ್ಕೆ ಡಾ| ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.
ಹೊಳಲ್ಕೆರೆ: ನಾಡಿನ ಐತಿಹಾಸಿಕ ಜಲಮೂಲಗಳಾದ ಪುಷ್ಕರಣಿ ಹಾಗೂ ಕಲ್ಯಾಣಿಗಳನ್ನು ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.
ಪಟ್ಟಣದ ಒಂಟಿಕಂಬದ ಮುರುಘಾ ಮಠದಲ್ಲಿ ಎಸ್. ಜೆ.ಎಂ ವಿದ್ಯಾಪೀಠ ಹಾಗೂ ಬೆಂಗಳೂರಿನ ಎಂ.ಸಿ.ಕೆ.ಸಿ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಲ್ಯಾಣಿ ಕಾಯಕಲ್ಪ’ ಕಾರ್ಯಕ್ರಮದಲ್ಲಿ ಮುರುಘಾ ಮಠದಲ್ಲಿರುವ ಪುರಾತನ ಪುಷ್ಕರಣಿಯ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಶರಣರು ಮಾತನಾಡಿದರು.
ರಾಜ ಮಹಾರಾಜರ ಕಾಲಗಳಲ್ಲಿ ನಿರ್ಮಾಣವಾಗುತ್ತಿದ್ದ ಕಲ್ಯಾಣಿಗಳಿಗೂ, ಪರಿಸರಕ್ಕೂ ಅವಿನಾಭಾವ ಸಂಬಂಧವಿದೆ. ಕಲ್ಯಾಣಿಗಳು ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದವು. ಜೀವಜಲಕ್ಕಾಗಿ ಜನರು ಪರಿತಪಿಸುವುದನ್ನು ತಡೆಗಟ್ಟಲು ಬೇಕಾದ ಸುಂದರ ಪರಿಕಲ್ಪನೆಯೊಂದಿಗೆ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಕಲ್ಯಾಣಿಗಳೂ ಜನರಿಗಲ್ಲದೆ ಪರಿಸರದ ಒಡನಾಡಿಯಾಗಿರುವ ಹಕ್ಕಿ ಪಕ್ಷಿಗಳಿಗೂ ನೀರಿನ ಅಸರೆಯನ್ನು ನೀಡುತ್ತಿದ್ದವು. ಆದರೆ ಅವುಗಳಲ್ಲಿ ಇಂದು ಕೊಳೆ, ಹೂಳು ತುಂಬಿಕೊಂಡಿವೆ.
ಅದನ್ನು ಶುದ್ಧಗೊಳಿಸಿ ಕಲ್ಯಾಣಿಗೆ ಶುದ್ಧ ನೀರು ಹರಿಯುವಂತೆ ಮಾಡಬೇಕು ಎಂದರು. ಮೊದಲು ಕಲ್ಯಾಣಿಗಳು, ಬಾವಿಗಳು, ಕೆರೆಗಳು ಜನರಿಗೆ ಭೂಮಿಯ ಅಳದ ಐದತ್ತು ಅಡಿಗಳಲ್ಲಿ ನೀರಿನ ಸೌಲಭ್ಯ ಕಲ್ಪಿಸುತ್ತಿದ್ದವು. ಇತ್ತಿಚೆಗೆ ಕೊಳವೆಬಾವಿಗಳ ಹೊಡೆತಕ್ಕೆ ಸಿಕ್ಕಿರುವ ಕಲ್ಯಾಣಿಗಳು ನೀರಿಲ್ಲದೆ ಒಣಗುತ್ತಿವೆ. ಜತೆಗೆ ಸಾವಿರಾರು ಅಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗದಂತಾಗಿದೆ. ಆದ್ದರಿಂದ ಜನರು ಜಲಮೂಲಗಳ ಸಂರಕ್ಷಣೆಗೆ ಒತ್ತು ನೀಡಬೇಕು. ಮುರುಘಾ ಮಠದಲ್ಲಿರುವ ಕೊಳವೆಬಾವಿಗಳಿಗೆ ನೀರು ಇಂಗಿಸುವ ಮಳೆಕೊಯ್ಲು ಮಾಡಲು ಒತ್ತು ನೀಡಲಾಗಿದೆ. ಹಾಗಾಗಿ ಕೊಳವೆಬಾವಿಗಳು ಇಂದಿಗೂ ಬತ್ತಿಲ್ಲ ಎಂದು ತಿಳಿಸಿದರು.
ಮುರುಘಾ ಮಠದ ಶ್ರೀ ಬಸವಾನಂದ ಸ್ವಾಮೀಜಿ, ಪರಮಶಿವಯ್ಯ, ಪಪಂ ಮಾಜಿ ಸದಸ್ಯ ಪಿ.ಎಚ್. ಮುರುಗೇಶ್, ರೋಟರಿ ಅಧ್ಯಕ್ಷ ಎ.ಸಿ. ಗಂಗಾಧರಪ್ಪ, ಹರೀಶ್, ಮಾರುತೇಶ್, ರುದ್ರಪ್ಪ, ನಟರಾಜ್ ಆಚಾರ್, ಪತ್ರಕರ್ತ ಎಸ್.ಬಿ. ಶಿವರುದ್ರಪ್ಪ, ನ್ಯಾಯವಾದಿ ಎಸ್. ವೇದಮೂರ್ತಿ, ಶಿಕ್ಷಕ ಕಾಂತರಾಜ್, ಕೆ.ಎಸ್. ರಘು, ರಮೇಶ ಯಾದವ್ ಭಾಗವಹಿಸಿದ್ದರು.
ಮಳೆಗಾಲದಲ್ಲಿ ಹರಿದು ಹಳ್ಳ ಸೇರುವ ನೀರನ್ನು ತಡೆದು ನಿಲ್ಲಿಸಿ ಕೊಳವೆಬಾವಿ ಸುತ್ತ ಕೃಷಿ ಹೊಂಡ, ಇಂಗುಗುಂಡಿ ಮಾಡಿಸಿ ಇಂಗಿಸುವ ಕೆಲಸ ಮಾಡಿದಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದರಿಂದ ನೀರಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇಲ್ಲವಾದಲ್ಲಿ ರೈತರು ಆಕಾಶದ ಕಡೆಗೆ ನೋಡುತ್ತ ಕೂರುವ ಸ್ಥಿತಿ ನಿರ್ಮಾಣವಾಗುತ್ತದೆ.
. ಡಾ| ಶಿವಮೂರ್ತಿ ಮುರುಘಾ ಶರಣರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.