“ಸೈನಿಕರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ’
Team Udayavani, Apr 16, 2019, 6:30 AM IST
ಶನಿವಾರಸಂತೆ: ರಾಷ್ಟ್ರ ಪ್ರೇಮ ಇಲ್ಲದ ಮತ್ತು ರಾಷ್ಟ್ರ ರಕ್ಷಣೆ ಮಾಡುತ್ತಿರುವ ಸೈನಿಕರ ಮೇಲೆ ಹಗುರವಾಗಿ ಮಾತನಾಡಿದ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ದೇಶಕ್ಕೆ ಮತ್ತು ಸೈನಿಕರಿಗೆ ಗೌರವ, ಮರ್ಯಾದಿ ಕೊಡುವುದನ್ನು ಕಲಿತುಕೊಳ್ಳಬೇಕಾಗಿದೆ ಎಂದು ಬಿಜೆಪಿ ಎಂಎಲ್‌ಸಿ ತೇಜಸ್ವಿನಿ ರಮೇಶ್ ಹೇಳಿದರು. ಅವರು ಸ್ಥಳೀಯ ಕೆಆರ್‌ಸಿ ವೃತ್ತದಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಪರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು.-ಕಾಂಗ್ರೆಸ್ ಭಾರತವನ್ನು 60 ವರ್ಷಕ್ಕಿಂತ ಹೆಚ್ಚಿನ ವರ್ಷವನ್ನು ಆಳಿದೆ, ಅಷ್ಟು ವರ್ಷ ಆಡಳಿತ ನಡೆಸಿದ್ದರೂ ಅಭಿವೃದ್ದಿಯಲ್ಲಿ ಶೂನ್ಯ ಕಂಡಿದ್ದ ನಮ್ಮ ದೇಶವನ್ನು ಕೇವಲ 5 ವರ್ಷದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ ಸರಕಾರ ಕಾಂಗ್ರೆಸ್ ಸರಕಾರ ಕಳೆದ 60 ವರ್ಷಗಳಲ್ಲಿ ಮಾಡಿರದ ಅದ್ಬುತ ಸಾಧನೆಯನ್ನು ಪ್ರಧಾನಿ ಮೋದಿ ಅವರು ಮಾಡಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕಾಗಿದೆ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಕರೆಯುತ್ತಾರೆ ನಿಜವಾದ ಕೋಮುವಾದ ಎಂಬುವುದನ್ನು ಹುಟ್ಟು ಹಾಕಿದವರೆ ಕಾಂಗ್ರೆಸಿಗರು, ಮೋದಿ ಸರಕಾರ ಮುಸ್ಲಿಮ್ ಮಹಿಳೆಯರ ಬೆಂಬಲಕ್ಕೆ ನಿಂತು ತಲಾಕ್ ಸಮಸ್ಯೆಯಿಂದ ಪಾರು ಮಾಡಿದೆ, ಮುಸ್ಲಿಮ್ ರಾಷ್ಟ್ರಗಳು ಮೋದಿ ಅವರ ಸಾಧನೆಯನ್ನು ಕಂಡು ಆ ದೇಶದ ಅತ್ಯುನ್ನತ್ತ ಗೌರವ ಪ್ರಶಸ್ತಿ ನೀಡಿ ಸತ್ಕರಿಸುತ್ತಿರುವುದನ್ನು ಕಂಡು ಕಾಂಗ್ರೆಸ್ ಇತರ ಪಕ್ಷಗಳು ಮೋದಿಯನ್ನು ವಿರೋದಿಸುತ್ತಿರುವುದು ವಿಪರ್ಯಾಸ ಎಂದರು. ಮತ್ತೆ ಮೋದಿ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ರಾಷ್ಟ್ರದ ಹಿತವನ್ನು ಮನಸಿನಲ್ಲಿಟ್ಟು ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಅವರನ್ನು ಮತ್ತೆ ಸಂಸದರನ್ನಾಗಿ ಮಾಡಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಶಾಸಕಅಪ್ಪಚ್ಚುರಂಜನ್ Êಮಾಜಿ ಎಂಎಲ್‌ಸಿ ಎಸ್.ಜೆ.ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಭಾರತೇಶ್, ಬಿಜೆಪಿ ಮುಖಂಡರಾದ ಎಂ.ಬಿ.ಅಭಿಮನ್ಯುಕುಮಾರ್, ಲೋಕೇಶ್, ಕೆ.ವಿ.ಮಂಜುನಾಥ್ ಮುಂತಾದವರು ಮಾತನಾಡಿದರು.
ವಿಶ್ವವೇ ನೋಡುತ್ತಿದೆ.ಇಡೀ ವಿಶ್ವವೆ ಭಾರತವನ್ನು ಮತ್ತೆಮತ್ತೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು. ದೇಶದ ಆರ್ಥಿಕ ಸಬಲಿಕರಣ ಮತ್ತು ಕಳ್ಳಹಣವನ್ನು ಹೊರತರುವ ಉದ್ದೇಶದಿಂದ ನೋಟ್‌ಬ್ಯಾನ್ ಮತ್ತು ಜಿಎಸ್‌ಟಿ ವ್ಯವಸ್ಥೆಯನ್ನು ತಂದಿದ್ದಾರೆ ಆದರೆ ಇದರಿಂದ ರಾಷ್ಟ್ರ ಅಭಿವೃದ್ದಿಯಾಗಿದೆ ಹೊರತು ಭಿಕಾರಿಯಾಗಿಲ್ಲ, ಪ್ರತಿಯೊಬ್ಬ ಸಮಾಜದಲ್ಲಿನ ಕಟ್ಟಕಡೆ ವ್ಯಕ್ತಿಗೂ ಉಚಿತ ಅಡುಗೆ ಅನಿಲ ದೊರಕಿಸಿಕೊಡುವ ಉದ್ದೇಶದಿಂದ ಅಡುಗೆ ಅನಿಲದಲ್ಲಿ ಸ್ವಲ್ಪಮಟ್ಟಿಗೆ ದರ ಏರಿಕೆ ಮಾಡಿದರು ಆದರೆ ಇದರಿಂದ ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಿಲ್ಲ ಇದನ್ನು ಕಾಂಗ್ರೆಸ್, ಜೆಡಿಎಸ್ ಮುಂತಾದ ಪಕ್ಷಗಳು ದೊಡ್ಡದು ಮಾಡುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.