ಸಣಕಲು ವ್ಯಕ್ತಿಗಳಿಗೆ ಮಸಲ್ಸ್ ಬಿಲ್ಡ್ ಟಿಪ್
Team Udayavani, Apr 16, 2019, 6:15 AM IST
ದಪ್ಪ ದೇಹ ಹೊಂದಿರುವವರು ತೂಕ ಕಳೆದುಕೊಳ್ಳಲು ಕಷ್ಟಪಡುತ್ತಿರುವಾಗಲೇ ಸಣಕಲು ವ್ಯಕ್ತಿಗಳು ತೂಕ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಒಂದು ವೇಳೆ ನೀವು ಸಣಕಲರಾಗಿದ್ದು, ಅಗತ್ಯ ತಕ್ಕಷ್ಟು ತೂಕ ಹೊಂದಿಲ್ಲದೇ ಇದ್ದರೆ ಚಿಂತೆ ಬೇಡ ಅದಕ್ಕಾಗಿ ಮಸಲ್ಸ್ ಬಿಲ್ಡ್ ಟಿಪ್ಸ್ ಅನುಸರಿಸಿದರೆ ಸಾಕು.
ಸಾಮಾನ್ಯವಾಗಿ ದೇಹದ ತೂಕ, ಗಾತ್ರ, ಆಕಾರ ಎತ್ತರ ಮೊದಲಾದವು ನಮ್ಮ ವಂಶವಾಹಿನಿಗಳೇ ನಿರ್ಧರಿಸುತ್ತವೆ.ಒಂದು ವೇಳೆ ನೀವು ಚಿಕ್ಕಂದಿನಿಂದಲೇ ಸಣಕಲರಾಗಿದ್ದರೆ, ನಿಮ್ಮ ವಂಶವಾಹಿನಿಗಳು ಸಣಕಲಾಗಿರುವಂತೆಯೇ ದೇಹವನ್ನು ನಿಯಂತ್ರಿಸುತ್ತಿದ್ದು, ನಿಮ್ಮ ಯಾವುದೇ ಪ್ರಯತ್ನಗಳು ಹೆಚ್ಚಿನ ಫಲ ನೀಡಲಾರವು. ಆದರೆ ಈ ವಂಶವಾಹಿನಿಯ ಮಾಹಿತಿಗಳು ದೇಹದ ಇತರ ಎಲ್ಲ ಅಂಶಗಳನ್ನು ನಿರ್ಧರಿಸಿದರೂ ಸ್ನಾಯುಗಳನ್ನು ಮಾತ್ರ ಹೆಚ್ಚಿಸಿ ಹುರಿಗಟ್ಟಿಸಬಹುದು. ತನ್ಮೂಲಕ ದೇಹದ ಗಾತ್ರ ಹಾಗೂ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ಸಣಕಲು ವ್ಯಕ್ತಿಗಳೂ ಸೂಕ್ತ ವ್ಯಾಯಾಮ, ಆಹಾರಾಭ್ಯಾಸಗಳ ಮೂಲಕ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
ಆದರೆ ಇದು ಸುಲಭವಲ್ಲ, ಇದಕ್ಕಾಗಿ ಜೀವನಕ್ರಮ, ಆಹಾರ ಕ್ರಮದಲ್ಲಿ ಬದಲಾವಣೆ ಹಾಗೂ ಹೆಚ್ಚುವರಿ ವ್ಯಾಯಾಮಗಳನ್ನು ಅಳ ವಡಿಸಿಕೊಳ್ಳಬೇಕಾಗುತ್ತದೆ. ಇವುಗಳನ್ನು ಸರಿಯಾದ ಕ್ರಮ, ಪ್ರಮಾಣ ಹಾಗೂ ಸೂಕ್ತ ಸಮಯದಲ್ಲೇ ಮಾಡಬೇಕು.
ಏನು ಮಾಡಬಹುದು ?
ಉದ್ವೇಗವನ್ನು ತಡೆದುಕೊಳ್ಳಿ
ಸಣಕಲು ವ್ಯಕ್ತಿಗಳ ತೂಕ ಅತಿ ಕಡಿಮೆ ಇದ್ದು ಯಾವುದೇ ಕಠಿನ ಕಾರ್ಯ ಮಾಡಲು ಹೋದಾಗ ಇದು ತನ್ನಿಂದ ಸಾಧ್ಯವೇ ಎಂಬ ಅಳುಕು ಮೂಡಿರುತ್ತದೆ. ಉದ್ದೇಶ ಒಳ್ಳಯದೇ ಇದ್ದರೂ, ಪ್ರಾರಂಭವನ್ನು ಎಲ್ಲಿಂದಾದರೂ ಆರಂಭಿಸಲೇಬೇಕಲ್ಲವೇ? ಅದಕ್ಕಾಗಿ ತಮ್ಮ ತೂಕದ ಬಗ್ಗೆ ಅಳುಕು ಮತ್ತು ಕೀಳರಿಮೆಯನ್ನು ಮೊದಲು ತೊಡೆದುಹಾಕಬೇಕು.
ಹೆಚ್ಚಿನ ಭಾರವನ್ನು ಎತ್ತಿ
ಸ್ನಾಯುಗಳ ಬೆಳವಣಿಗೆ ಕನಿಷ್ಠ ಅಥವಾ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಆಗುತ್ತದೆ. ವಾಸ್ತವವಾಗಿ ವ್ಯಾಯಮವೆಂದರೆ ಸ್ನಾಯುಗಳನ್ನು ಕನಿಷ್ಠ ಅಗತ್ಯಕ್ಕೂ ಹೆಚ್ಚಿನ ಅಗತ್ಯಕ್ಕೆ ಒಳಪಡಿಸಿ ಮೆದುಳಿಗೆ ಇಲ್ಲಿ ಸ್ನಾಯುಗಳ ಬೆಳವಣಿಗೆಯ ಅಗತ್ಯವಿದೆ ಎಂದು ಸೂಚಿಸುವುದೇ ಆಗಿದೆ. ಇದಕ್ಕಾಗಿ ಸುಮಾರು ಮೂರರಿಂದ ಐದು ಸೆಟ್ ಬೆಂಚ್ ಪ್ರಸ್ ಬಳಸಿ ದೇಹದ ಪ್ರಮುಖ ಸ್ನಾಯುಗಳನ್ನು ಕೆಲಸಕ್ಕೆ ಹಚ್ಚಬೇಕು. ಕ್ವಾಡ್ರಿಸೆಪ್ಸ್ ಸ್ನಾಯುಗಳಿಗಾಗಿ ಸ್ಕ್ವಾಟ್ ವ್ಯಾಯಾಮವನ್ನು ಮಾಡಬಹುದು.
ದಿನವಿಡೀ ಸಾಕಷ್ಟು
ನೀರು ಕುಡಿಯುತ್ತಿರಿ
ನೀರಿನ ಅಗತ್ಯತೆಯನ್ನು ಬೇರಾವ ಆಹಾರವೂ ಪೂರೈಸಲು ಸಾಧ್ಯವಿಲ್ಲ. ನೀರು ಕಡಿಮೆ ಕುಡಿಯು ತ್ತಿದ್ದಿರೋ ಅದನ್ನು ಮರೆತು ಬಿಟ್ಟು, ಈಗ ನೀರಡಿ ಕೆಯಾಗದಿದ್ದರೂ ಸರಿ, ಪ್ರತಿ ಗಂಟೆಗೊಮ್ಮೆ ಲೋಟವಾದರೂ ನೀರು ಕುಡಿಯುತ್ತಿರಬೇಕು. ಏಕೆಂದರೆ ಸ್ನಾಯುಗಳು ಸುಮಾರು ಎಪ್ಪತ್ತು ಶೇಕಡ ನೀರಿನಿಂದ ಕೂಡಿವೆ. ಸಣಕಲರಲ್ಲಿ ಸ್ನಾಯುಗಳು ಕಡಿಮೆ ಇರುವ ಕಾರಣ ಇವರಿಗೆ ನೀರಿನ ಅಗತ್ಯತೆಯೂ ಕಡಿಮೆಯೇ ಇದ್ದು ನೀರಡಿಕೆಯೂ ಕಡಿಮೆಯೇ ಇರುತ್ತದೆ. ಅದ್ದರಿಂದ ದಿನವಿಡೀ ಕೊಂಚಕೊಂಚವಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಡಿಕೊಳ್ಳಿ.
– ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.