ಮಜ್ಜನಕ್ಕೆ ಸಾಕ್ಷಿಯಾದ ಅಟ್ಟಳಿಗೆ ತೆರವಿನ ಹಂತದಲ್ಲಿ

ಲಕ್ಷಾದಿ ಭಕ್ತರ ಆದರಿಸಿದ ವಿಶೇಷತೆ

Team Udayavani, Apr 16, 2019, 6:00 AM IST

q-27

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ನೆಲೆನಿಂತ ಬಾಹುಬಲಿ ವಿಗ್ರಹಕ್ಕೆ ಸಮರೂಪಿಯಾಗಿ ನಿಂತು ಲಕ್ಷಾಂತರ ಮಂದಿಗೆ ಅಭಿಷೇಕಗೈಯ್ಯುಲು ನೆರವಾದ ಬೃಹತ್‌ ವೈಭವದ ಅಟ್ಟಳಿಗೆ ತೆರವಿನ ಕಾರ್ಯ ಹಂತ ಹಂತವಾಗಿ ಸಾಗುತ್ತಿದೆ. ಫೆ. 9ರಿಂದ 18ರ ವರೆಗೆ ನಡೆದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ 4ನೇ ಮಹಾಮಸ್ತಕಾಭಿಷೇಕದ ಅಟ್ಟಳಿಗೆ ನಿರ್ಮಾಣಕ್ಕೆ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಜ.2ರಂದು ಮುಹೂರ್ತ ನೆರವೇರಿಸಿದ್ದರು.

ಒಂದು ತಿಂಗಳು ನಿರ್ಮಾಣ ಕಾರ್ಯ
ಸರಿ ಸುಮಾರು ಒಂದು ತಿಂಗಳು ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ದೇಶ ವಿದೇಶದಿಂದ ಮಸ್ತಾಭಿಷೇಕ ಕಣ್ತುಂಬಿಕೊಳ್ಳಲು ಬಂದ ಭಕ್ತರು ಅಟ್ಟಳಿಗೆ ವಿನ್ಯಾಸವನ್ನು ಕಂಡು ಕೊಂಡಾಡಿದ್ದರು. ಇದೀಗ ಹಂತಹಂತದಲ್ಲಿ ತೆರವಿನ ಕಾರ್ಯ ಕೈಗೊಳ್ಳ ಲಾಗಿದ್ದು, ಸಂಪೂರ್ಣ ತೆರವಿಗೆ ಸುಮಾರು ಒಂದು ತಿಂಗಳು ಹೆಚ್ಚೇ ತಗುಲಲಿದೆ.

ಅಂದು ಅಟ್ಟಳಿಗೆ ನಿರ್ಮಾಣಕ್ಕೆ ಪೂರ್ವವಿ ಯಾಗಿ ವಿಗ್ರಹವನ್ನು ಶುಚಿ ಗೊಳಿಸುವ ಕಾರ್ಯ ನಡೆದು, ತಾತ್ಕಾಲಿಕ ಅಟ್ಟಳಿಗೆ ನಿರ್ಮಾಣದ ಮೂಲಕ 60 ಶ್ರಾವಕರು ಶ್ರದ್ಧಾ- ಭಕ್ತಿಯಿಂದ ಈ ಪುಣ್ಯ ಕಾರ್ಯವನ್ನು ನೆರವೇರಿಸಿದ್ದರು.

ಅಟ್ಟಳಿಗೆ ನಿರ್ಮಾಣ ಮಾಣಿ ಬುಡೋಳಿಯ ಮಹಾವೀರ ಪ್ರಸಾದ್‌ ಇಂಡಸ್ಟ್ರಿಯ ನೇತೃತ್ವದಲ್ಲಿ ನಡೆದಿತ್ತು.
ಮಂಗಳಮೂರ್ತಿಯ ಅಕ್ಕಪಕ್ಕ ಮೂರು ಹಂತದಲ್ಲಿ ನಿರ್ಮಿಸಲಾಗಿದ್ದ ಭವ್ಯ ಅಟ್ಟಳಿಗೆ ಮತ್ತೂಮ್ಮೆ ಕಣ್ತುಂಬಿಕೊಳ್ಳಲು 12 ವರ್ಷ ಸವೆಯಬೇಕಿದೆ. ಮಹಾಮಸ್ತಕಾಭಿಷೇಕ ಫೆ.18ರಂದು ಕೊನೆಗೊಂಡ ಬಳಿಕ ವಿವಿಧ ಸಂಘಸಂಸ್ಥೆಗಳಿಗೆ ಡಾ| ಹೆಗ್ಗಡೆ ಪರಿವಾರದಿಂದ ಮಾ.24ರವರೆಗೆ ಪ್ರತಿ ಭಾನುವಾರ ಅಭಿಷೆೇಕಕ್ಕೆ ಅವಕಾಶ ನೀಡಿತ್ತು.

ಅಟ್ಟಳಿಗೆಯಲ್ಲಿನ ವಿಶೇಷತೆ
6 ಅಂತಸ್ತಿನ ಅಟ್ಟಳಿಗೆಯನ್ನು ಸುಮಾರು 80 ಟನ್‌ ಸ್ಟೀಲ್‌ ಬಳಸಿ ನಿರ್ಮಿಸಲಾಗಿತ್ತು. ಅಟ್ಟಳಿಗೆ 13.7 ಮೀ. ಅಗಲ, 62 ಅಡಿ ಎತ್ತರ ಇದ್ದು, ಪ್ಲೈವುಡ್‌ ಹಾಕಿ ನಿಲ್ಲಲು ವ್ಯವಸ್ಥೆ ಮಾಡಲಾಗಿತ್ತು. ಸುಮಾರು 400ರಿಂದ 500 ಮಂದಿ ಅಟ್ಟಳಿಗೆ ಮೇಲೆ ನಿಂತು ಏಕಕಾಲದಲ್ಲಿ ಅಭಿಷೇಕ ಮಾಡಿದ್ದರು. ಹಿಂಭಾಗದಿಂದ ಮೆಟ್ಟಿಲುಗಳ ವ್ಯವಸ್ಥೆ, ಅಭಿಷೇಕ ಮಾಡುವವರು ನಿಲ್ಲಲು ಹಾಗೂ ಅಭಿಷೇಕಕ್ಕೆ ಬೇಕಾದ ದ್ರವ್ಯ ಗಳನ್ನು ಸಂಗ್ರಹಿಸಿಡಲು ಸ್ಥಳಾವಕಾಶವೂ ಮಾಡಲಾಗಿತ್ತು. ಸದ್ಯ 6 ಅಂತಸ್ತಿನ ಅಟ್ಟಳಿಗೆಯ ಶೇ.50 ಭಾಗ ತೆರವುಗೊಳಿಸಲಾಗಿದ್ದು, ಇನ್ನು ತೆರವು ಕಾರ್ಯ ಹಂತ ಹಂತದಲ್ಲಿ ಸಾಗುತ್ತಿದೆ.

ಈಗಲೂ ಜನಸಂದಣಿ
ವಿರಾಟ್‌ಮೂರ್ತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಈಗಲೂ ರತ್ನಗಿರಿಯಲ್ಲಿ ಜನಸಂದಣಿ ಇದೆ. ರಾಜ್ಯ ಹೊರ ರಾಜ್ಯಗಳಿಂದ ಮಹಾಮಸ್ತಕಾಭಿಷೇಕ ಸಂದರ್ಭ ವಿರಾಗಿ ಮಜ್ಜನ ಕಣ್ತುಂಬಿಕೊಳ್ಳಲು ಸಾಧ್ಯವಾಗದೇ ಇರುವವರು ಪ್ರಸ್ತುತ ರತ್ನಗಿರಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿವರೆಗೆ ಈ ಬಾರಿಯ ವಿರಾಗಿ ಮಜ್ಜನ ಜನಜನಿತವಾಗಿತ್ತು.

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

2

Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!

1(1

Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್‌ ದೀಪಗಳಿಂದ ಶೃಂಗಾರ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

4-sagara

Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.