ಇಷ್ಟಪಟ್ಟು ಒದಿದರೆ ಎಲ್ಲವೂ ಸಾಧ್ಯ: ರಾಯಿಸ
Team Udayavani, Apr 16, 2019, 6:00 AM IST
ಹೆಬ್ರಿ: ಹೆಬ್ರಿ ಎಸ್.ಆರ್. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಾಯಿಸ 592 ಅಂಕ ಪಡೆದು ರಾಜ್ಯಕ್ಕೆ ತೃತೀಯ ಉಡುಪ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಹಿರಿಯಡಕ ಸಮೀಪ ಪುತ್ತಿಗೆಯ ನಿವಾಸಿ ಎ. ಉಮರಬ್ಬ ಮತ್ತು ರುಕ್ಸಾನ ದಂಪತಿಯ ಪುತ್ರಿ ರಾಯಿಸ ಚಿಕ್ಕದಿನಿಂದಲೂ ಓದಿನೊಂದಿಗೆ ಕ್ರೀಡೆ, ಚಿತ್ರಕಲೆ, ಹಾಡುಗಾರಿಕೆ, ನೃತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಫಲಿತಾಂಶ ತಿಳಿಯುತ್ತಿದ್ದಂತೆಯೆ ಕಾಲೇಜಿಗೆ ಆಗಮಿಸಿದ ರಾಯಿಸಳ ತಾಯಿ ಮಗಳಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯಿಂದ ಮೆಚ್ಚುಗೆ
ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ರಾಯಿಸಿ ಯಾವುದೇ ಕೋಚಿಂಗ್ ಪಡೆಯದೆ ನಮ್ಮ ಉಪನ್ಯಾಸಕರ ಪರಿಶ್ರಮದಿಂದ ಹಾಗೂ ಅವಳ ವಿಶೇಷ ಆಸಕ್ತಿಯಿಂದ ರಾಜ್ಯಕ್ಕೆ 3ನೇ ರ್‍ಯಾಂಕ್ ಬಂದಿರುವುದು ಸಂತಸ ತಂದಿದೆ ಎಂದು ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ ಹಾಗೂ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಉದಯವಾಣಿಗೆ ತಿಳಿಸಿದ್ದಾರೆ.
ವೈದ್ಯಕೀಯದಲ್ಲಿ ಆಸಕ್ತಿ
ವೈದ್ಯಕೀಯ ವಿಭಾಗದಲ್ಲಿ ಆಸಕ್ತಿ ಇದ್ದು ನೀಟ್ ಪರೀಕ್ಷೆ ಫಲಿತಾಂಶದ ಬಳಿಕ ಮುಂದಿನ ವ್ಯಾಸಂಗದ ನಿರ್ಧಾರವಾಗಬೇಕಾಗಿದೆ. ನಾನು ಕಲಾ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharstra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.