ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್: ನಿಷೇಧ ಮುಗಿಸಿದವರಿಗೆ ವಿಶ್ವಕಪ್ ಕರೆ
Team Udayavani, Apr 16, 2019, 9:57 AM IST
ಮೆಲ್ಬರ್ನ್: ನಿರೀಕ್ಷೆಯಂತೆ, ಒಂದು ವರ್ಷದ ನಿಷೇಧ ಪೂರೈಸಿದ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಆಸ್ಟ್ರೇಲಿಯದ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹ್ಯಾಝಲ್‌ವುಡ್ ಮತ್ತು ಹ್ಯಾಂಡ್ಸ್‌ಕಾಂಬ್ ಅವರನ್ನು ಹೊರಗಿಡಲಾಗಿದೆ.
ಕೇಪ್‌ಟೌನ್ ಟೆಸ್ಟ್ ಪಂದ್ಯದ “ಚೆಂಡು ವಿರೂಪ’ ಪ್ರಕರಣ ದ ವೇಳೆ ಸ್ಮಿತ್ ಆಸೀಸ್ ನಾಯಕರಾಗಿದ್ದರೆ, ವಾರ್ನರ್ ಉಪನಾಯಕರಾಗಿದ್ದರು. ಆದರೆ ವಿಶ್ವಕಪ್ ವೇಳೆ ಇವರು ಸಾಮಾನ್ಯ ಆಟಗಾರರಾಗಷ್ಟೇ ಆಗಿರುತ್ತಾರೆ. ತಂಡದ ನಾಯಕತ್ವ ಆರನ್ ಫಿಂಚ್ ಪಾಲಾಗಿದೆ. ನಿಷೇಧದ ಬಳಿಕ ಪಾಕಿಸ್ಥಾನ ವಿರುದ್ಧದ ಅಂತಿಮ 2 ಪಂದ್ಯಗಳಲ್ಲಿ ವಾರ್ನರ್ ಮತ್ತು ಸ್ಮಿತ್ ಆಡಬಹುದಿತ್ತಾದರೂ ಆಯ್ಕೆಗಾರರು ಇವರನ್ನು ಪರಿಗಣಿಸಲಿಲ್ಲ. ಇಬ್ಬರೂ ಐಪಿಎಲ್ ಆಡಲು ಭಾರತಕ್ಕೆ ಆಗಮಿಸಿದರು. ಇವರಲ್ಲಿ ವಾರ್ನರ್ ರನ್ ಮಳೆ ಸುರಿಸುತ್ತಿದ್ದಾರೆ.
ವಿಶ್ವಕಪ್‌ಗೆ ಆಯ್ಕೆಯಾದ ಕೆಲವು ಆಸೀಸ್ ಆಟಗಾರರೀಗ ಐಪಿ ಎಲ್‌ನಲ್ಲಿ ಆಡುತ್ತಿದ್ದಾರೆ. ಆದರೆ ಐಪಿಎಲ್ ಕೊನೆಯ ಹಂತದಲ್ಲಿ ಇವರ ಸೇವೆ ಲಭ್ಯವಾಗದು. ಸ್ಮಿತ್, ವಾರ್ನರ್, ಸ್ಟೋಯಿನಿಸ್, ಬೆಹ್ರಾನ್ಡಾಫ್ ಇವರಲ್ಲಿ ಪ್ರಮುಖರು. ನಥನ್ ಕೋಲ್ಟರ್ ನೈಲ್ ಈಗಾಗಲೇ ಗಾಯಾಳಾಗಿ ತವರಿಗೆ ವಾಪಸಾಗಿದ್ದಾರೆ.
ಆಸ್ಟ್ರೇಲಿಯ ತಂಡ
ಆರನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ ಸನ್, ನಥನ್ ಕೋಲ್ಟರ್ ನೈಲ್, ಜಾಸನ್ ಬೆಹ್ರಾನ್ಡಾಫ್ , ನಥನ್ ಲಿಯೋನ್, ಆ್ಯಡಂ ಝಂಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್.ಆರ್. ಗವಿಯಪ್ಪ ಒತ್ತಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.