ಮೋದಿ ಬಲಪಡಿಸಲು ಖೂಬಾಗೆ ಮತ ನೀಡಿ
Team Udayavani, Apr 16, 2019, 12:40 PM IST
ಆಳಂದ: ನರೇಂದ್ರ ಮೋದಿ ಅವರನ್ನು ಮತ್ತಷ್ಟು ಬಲಪಡಿಸಲು ಬೀದರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರನ್ನು ಎಂದಿನಂತೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಮತದಾರರಲ್ಲಿ ಮನವಿ ಮಾಡಿದರು.
ತಾಲೂಕಿನ ಜಿಡಗಾ ಗ್ರಾಮದಲ್ಲಿ ಜಿಡಗಾ ಮತ್ತು ಸರಸಂಬಾ ಜಿಪಂ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿ ಸೋಮವಾರ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಹಮ್ಮಿಕೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನ ಮಂತ್ರಿಗಳು
ತನಗಾಗಿ ಮಾಡಿಕೊಳ್ಳದೆ ದೇಶಕ್ಕಾಗಿ ಏನೆಯಲ್ಲ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ. ಜನಪರ ಯೋಜನೆಗಳು
ಜಾರಿಗೆ ತಂದಿದ್ದಾರೆ. ಅವರು ಮತ್ತೂಮ್ಮೆ ಪ್ರಧಾನಿಯಾಗಿಸಲು ರಾಜ್ಯದಲ್ಲಿನ ಖುಬಾ ಸೇರಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ ಎಂದರು.
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಕ್ಷೇತ್ರದಲ್ಲಿ ಸಾಕಷ್ಟು ದೂರದೃಷ್ಟಿಯುಳ್ಳ ಹೆದ್ದಾರಿ, ರೈಲ್ವೆ ಮಾರ್ಗಗಳನ್ನು ವಿಸ್ತರಿಸಲು ಶ್ರಮಿಸಿದ್ದೇನೆ. ಬಾಕಿ ಇರುವ ಸಾಕಷ್ಟು ಕೆಲಸಗಳನ್ನು ಮಾಡಲು ಈ ಚುನಾವಣೆಯಲ್ಲಿ ಮತದಾರರು
ಆಶೀರ್ವದಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ವೀರಣ್ಣಾ ಮಂಗಾಣೆ, ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಮಲ್ಲಣ್ಣಾ ನಾಗೂರೆ, ಸಂತೋಷ ಹಾದಿಮನಿ, ವಿಜಯಲಕ್ಷ್ಮೀರಾಗಿ, ಮಹಿಬೂಬ ಆಳಂದಕರ, ಬಸವರಾಜ ನೆಲ್ಲೂರ, ಮಹಾಂತಪ್ಪ ಆಲೂರೆ ಸರಸಂಬಾ, ಮಲ್ಲಿಕಾರ್ಜುನ ಪಾಟೀಲ ಸಕ್ಕರಗಾ, ರಾಜಶೇಖರ ಮಲಶೆಟ್ಟಿ, ಅಪ್ಪಾಸಾಹೇಬ ಗುಂಡೆ, ಗುರುಶಾಂತ ಪಾಟೀಲ ನಿಂಬಾಳ, ಮಲ್ಲಿನಾಥ ಒಡೆಯರ್, ಬಸವರಾಜ ಸಾಣಕ, ಶಿವಶರಣಪ್ಪ ಮಲಶೆಟ್ಟಿ, ಸಂಜಯ ಮಿಸ್ಕಿನ್, ಮಹೇಶ ಸೂರೆ ಪ್ರಚಾರದಲ್ಲಿ ತೊಡಗಿದರು.
ಹಣಮಂತರಾವ್ ಹಣಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚನ್ನವೀರ ಕಾಳಕಿಂಗೆ ಸ್ವಾಗತಿಸಿದರು. ಈ ಮೊದಲು ಮಮದಾಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಬೆಂಬಲಿಗರೊಂದಿಗೆ ಮನೆ-ಮನೆಗೆ ತೆರಳಿ ಮತಯಾಚನೆ ಕೈಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.