ಪುತ್ರ ಶೋಕಂ ನಿರಂತರಂ, ಆದರೆ ಹೆಂಡ್ತಿಗೆ?

ಅಂತರ ಗಂಗೆ

Team Udayavani, Apr 17, 2019, 6:30 AM IST

Avalu—Putra-Shoka

ಬೇರೆ ಮನೆಯ ನಿರ್ಧಾರ ಮಾಡುವಷ್ಟರಲ್ಲಿ ಬ್ಯಾಂಕಿನಿಂದ ವರ್ಗವಾಗಿದೆ ಸ್ವರೂಪಾಗೆ. ಸೊಸೆಯ ನೋವಾಗಲೀ- ಮಗನ ಕೊರತೆಯಾಗಲೀ ಅವರಿಗೆ ಗೊತ್ತಿಲ್ಲ. ನನ್ನ ಬಾಯಿ ಕಟ್ಟಿಹೋಯಿತು. ಸತ್ಯ ನುಂಗಿ, ನೋವು ಸಹಿಸಿಕೊಂಡ ಈ ರೀತಿಯ ಗೃಹಿಣಿಯರಿಗೆ ನನ್ನ ಸಲಾಮು!!

ಮೂವತ್ಮೂರು ವರ್ಷದ ಸ್ವರೂಪಾ ವಿಧವೆ. ಎರಡೂವರೆ ವರ್ಷದ ಮುದ್ದಾದ ಮಗು ಇದೆ. ಬ್ಯಾಂಕ್‌ ನೌಕರಿ ಇದೆ. ಅತ್ತೆ- ಮಾವನನ್ನು ಬಿಟ್ಟು ಬೇರೆ ಮನೆ ಮಾಡಿಕೊಳ್ಳುವ ಉದ್ದೇಶವನ್ನು ಚರ್ಚಿಸಲು ನನ್ನ ಬಳಿ ಬಂದಿದ್ದಳು. ಅವಳ ತಂದೆ- ತಾಯಿ ಈ ಯೋಜನೆಗೆ ಅನುಮತಿ ನೀಡಿಲ್ಲ. ಮೊಮ್ಮಗನನ್ನು ಅತ್ತೆ- ಮಾವನಿಂದ ದೂರ ಮಾಡುವ ಉದ್ದೇಶವಿಲ್ಲದಿದ್ದರೂ ಅವರು ಕೊಡುವ ಮಾನಸಿಕ ಕಿರುಕುಳ ಸಹಿಸಿಕೊಳ್ಳಲೂ ಸಿದ್ಧವಿರಲಿಲ್ಲ. ಮದುವೆಯಾದ ದಿನದಿಂದಲೂ ಸ್ವರೂಪಾಗೆ ನೆಮ್ಮದಿಯಿಲ್ಲ.

ಇತ್ತೀಚೆಗೆ ಕಾಮನ ಹುಣ್ಣಿಮೆಯ ದಿನ ಈಕೆ ಮಗುವಿನ ಖುಷಿಗಾಗಿ ಬಣ್ಣ ಎರಚಾಡಿ ಸ್ನೇಹಿತರ ಜೊತೆ ಖುಷಿಪಟ್ಟಿದ್ದು, ಅತ್ತೆ- ಮಾವನಿಗೆ ಇಷ್ಟವಾಗಿಲ್ಲ. “ನಮಗೆ ಮಗನ್ನ ಕಳ್ಕೊಂಡು ಎಷ್ಟು ಬೇಸ್ರ ಐತ್ರೀ, ಇವಳು ನೋಡಿದ್ರೆ ಹೀಂಗ್‌ ಖುಷಿ ಪಡ್ತಾಳೆ, ಹೆಂಡ್ತೀರು ಬೇಗ ನೋವು ಕಳ್ಕೊಂಡ್‌ ಬಿಡ್ತಾರೆ; ಅಪ್ಪ- ಅಮ್ಮನಿಗೆ ಹಾಗಲ್ಲ, ಪುತ್ರ ಶೋಕಂ ನಿರಂತರಂ’ ಅಂತ ಮಾತನಾಡಿದ್ದಾರೆ. ಹಿಂದೆಯೂ, ಮದುವೆಯಾದ ಕೆಲವು ತಿಂಗಳಿನಲ್ಲೇ ಬ್ಯಾಂಕಿನಲ್ಲಿ ವಿಧವಾ ಪಿಂಚಣಿ ಯೋಜನೆಗೆ ಇವಳು ಅರ್ಜಿ ನೀಡಿದಾಗ, ಅಪಶಕುನವೆಂದು ಕೂಗಾಡಿದ್ದರಂತೆ.

ಸುರೇಶ್‌ ಗೆ ವೀರ್ಯಾಣುವಿನ ಕೊರತೆ ಇತ್ತು. ಮಕ್ಕಳಾಗುವುದು ಸಾಧ್ಯವಿರಲಿಲ್ಲ. ವಿಷಯ ಗೊತ್ತಿದ್ದೂ ಮದುವೆಯಾದ ಮೇಲೆ ತಿಳಿಸಿದರಲ್ಲ ಎಂದು ಸ್ವರೂಪಾಗೆ ಬೇಸರವಿತ್ತು. ಇದರಿಂದಾಗಿ ಅವರ ನಡುವೆ ಸ್ನೇಹ- ದಾಂಪತ್ಯ ಅಷ್ಟಕಷ್ಟೇ ಇತ್ತು. ಹನಿಮೂನ್‌ಗೂ ಹೋಗಲಿಲ್ಲ. ನಂತರ sperm bankನಿಂದ ದತ್ತು ಪಡೆದ ವೀರ್ಯಕ್ಕೆ ಇವಳು ಬಸುರಾದದ್ದು.

ಡೆಲಿವರಿಗೆ ತವರಿಗೆ ಹೋಗಿದ್ದಾಗ, ಸುರೇಶ್‌ ಸಹೋದ್ಯೋಗಿಯೊಡನೆ ಅಫೇರ್‌ ಶುರು ಹಚ್ಚಿಕೊಂಡಿದ್ದು, ಸ್ವರೂಪಾ ಗಮನಕ್ಕೆ ಬಂದು, ಜಗಳವಾಗುತ್ತಿತ್ತು. ಕೊನೆಗೂ ಅಫೇರ್‌ ಮರೆತು, ಸ್ವರೂಪಾಳನ್ನು ರಮಿಸಲು ಊಟಿಗೆ ಕರಕೊಂಡು ಹೋಗಲು ಸಿದ್ಧತೆ ಮಾಡಿಕೊಂಡಿದ್ದರು. ಅತ್ತೆ- ಮಾವ ಇವರ ಜೊತೆ ತಾವೂ ಊಟಿಗೆ ಹೊರಟಾಗ ಸ್ವರೂಪಾಗೆ ಬೇಸರ. ಅವನಿಗೆ ತಂದೆ- ತಾಯಿಯನ್ನು ಬರಬೇಡಿ ಅನ್ನಲು ಮನಸ್ಸಿಲ್ಲ. ಸ್ವರೂಪಾಳನ್ನು ಎದುರು ಹಾಕಿಕೊಳ್ಳುವುದೂ ಬೇಕಿರಲಿಲ್ಲ. ಕಡೆಗೆ ತಂದೆ- ತಾಯಿಯರನ್ನು ಒಲ್ಲದ ಮನಸ್ಸಿನಿಂದ ಬರಬೇಡಿ ಎಂದು ತಿಳಿಸಿ, ಊಟಿಗೆ ಹೊರಡುವ ಎಲ್ಲಾ ತಯಾರಿ ಮಾಡಿಕೊಂಡರು.

ಹೊರಡುವ ಹಿಂದಿನ ರಾತ್ರಿ ಸುರೇಶ್‌ ನಿದ್ರೆಗೆ ಜಾರಿದವರು ಮತ್ತೆ ಏಳಲೇ ಇಲ್ಲ. ಬೆಳಗ್ಗೆ ಕಾರಿನಲ್ಲಿ ಹೊರಡಬೇಕು. ಖುಷಿಯಾಗಿ ಗಂಡನನ್ನು ಎಬ್ಬಿಸ ಹೊರಟವಳಿಗೆ ಆಘಾತ ಕಾದಿತ್ತು. ಸ್ವರೂಪಾಳ ಜಗಳದಿಂದಲೇ ಮಗನಿಗೆ ಒತ್ತಡವಾಯಿತು ಎಂಬ ತರ್ಕ. ಮಗನನ್ನು ಬಲಿ ತೆಗೆದುಕೊಂಡಳು ಎಂದು ಚುಚ್ಚಿ ಮಾತಾಡಿದಾಗ, ಮೊಮ್ಮಗ ಅವರ ಮಗನದ್ದಲ್ಲ ಎಂದು ಕಿರುಚಿ ಹೇಳಬೇಕು ಎನಿಸಿದೆ ಸ್ವರೂಪಾಗೆ. ಬೇರೆ ಮನೆಯ ನಿರ್ಧಾರ ಮಾಡುವಷ್ಟರಲ್ಲಿ ಬ್ಯಾಂಕಿನಿಂದ ವರ್ಗವಾಗಿದೆ ಸ್ವರೂಪಾಗೆ. ಸೊಸೆಯ ನೋವಾಗಲೀ- ಮಗನ ಕೊರತೆಯಾಗಲೀ ಅವರಿಗೆ ಗೊತ್ತಿಲ್ಲ. ನನ್ನ ಬಾಯಿ ಕಟ್ಟಿಹೋಯಿತು. ಸತ್ಯ ನುಂಗಿ, ನೋವು ಸಹಿಸಿಕೊಂಡ ಈ ರೀತಿಯ ಗೃಹಿಣಿಯರಿಗೆ ನನ್ನ ಸಲಾಮು!!

— ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.